Actor Darshan: ಜೈಲುಪಾಲಾದ ದರ್ಶನ್ ಸೊರಗಿ ರೇಣುಕಾಸ್ವಾಮಿಯಂತೆ ಆಗ್ತಾರಾ?
Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರು ಪಡೆದುಕೊಳ್ಳುತ್ತಿದ್ದು, ಈಗಾಗಲೇ ಈ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ಪವಿತ್ರಾ ಗೌಡ ಜೈಲು ಪಾಲಾಗಿದ್ದು, ಇಂದು (ಜೂನ್ 22) ಎ2 ಆರೋಪಿಯಾಗಿರುವ ದರ್ಶನ್ & ಗ್ಯಾಂಗ್ ಜೈಲು ಸೇರಿದ್ದಾರೆ. ಹಾಗಾದರೆ ಇಷ್ಟು ದಿನ ಲಂಗು ಲಗಾಮು ಇಲ್ಲದೆ ಹಾರಾಡುತ್ತಿದ್ದ ನಟ ದರ್ಶನ್ ಜೈಲು ಜೀವನ ಊಹಿಸಿಕೊಂಡರೇ, ಅಲ್ಲಿ ಹೇಗೆ ಇರುತ್ತಾರೆಯೋ ಎನ್ನುವುದೇ ಇದೀಗ ಎಲ್ಲಾರಲ್ಲೂ ಕಾಡುವ ಪ್ರಶ್ನೆಯಾಗಿದೆ.
ಮೂಲಗಳ ಪ್ರಕಾರ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ತಿಳಿಯುತ್ತಿದ್ದಂತೆ, ನಟ ದರ್ಶನ್ ಗ್ಯಾಂಗ್ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಬೆಂಗಳೂರಿಗೆ ಕರೆತಂದಿದೆ. ಮೊದಲಿಗೆ ರೇಣುಕಾಸ್ವಾಮಿಯನ್ನು ನಟ ದರ್ಶನ್ ಮನೆಗೆ ಕರೆದೊಯ್ಯಲಾಗಿದ್ದು, ಬಳಿಕ ನೇರವಾಗಿ ಪಟ್ಟಣಗೆರೆಯ ಶೆಡ್‌ಗೆ ಕೊರೆದೊಯ್ಯಲಾಗಿದೆ. ನಂತರ ಅಲ್ಲಿಗೆ ದರ್ಶನ್ & ಪವಿತ್ರಾ ಗೌಡ ಆಗಮಿಸಿದ್ದು, ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿತ್ತು.

ಶೆಡ್‌ನಲ್ಲಿ ಪವಿತ್ರಾ ಗೌಡ ರೇಣುಕಾಸ್ವಾಮಿಯನ್ನು ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ನಂತರ ಆತ ನಾನ್‌ವೆಜ್ ತಿನ್ನಲ್ಲ ಅಂತಾ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಆಗ ನಟ ದರ್ಶನ್ ಆತನ ಎದೆಗೆ ಕಾಲಿನಲ್ಲಿ ಒದ್ದು ಬಲವಂತವಾಗಿ ಮಾಂಸದ ಮೂಳೆಯನ್ನು ಬಾಯಲ್ಲಿ ಇಟ್ಟಿದ್ದಾನೆ. ಅಷ್ಟೇ ಅಲ್ಲದೆ, ಕರೆಂಟ್ ಶಾಕ್ ಕೊಟ್ಟಿದ್ದಾರೆ. ನಂತರ ಅಲ್ಲಿದ್ದ ಲಾರಿಗಳಿಗೆ ಆತನನ್ನು ಪುಟ್‌ಬಾಲ್ ರೀತಿ ಆಕಡೆಯಿಂದ ಈಕಡೆ, ಈಕಡೆಯಿಂದ ಆಕಡೆಗೆ ಬಿಸಾಡಿ ತಲೆಗೆ ಒಡೆದು ಭೀಕರವಾಗಿ ಹತ್ಯೆ ಮಾಡಿದ್ದಾರೆ ಅಂತಲೂ ತಿಳಿದುಬಂದಿತ್ತು.
ಹಾಗೆಯೇ ನಟ ದರ್ಶನ್ & ಪವಿತ್ರಾ ಗೌಡ ಮಾಡಿದ ತಪ್ಪಿಗೆ ಬೇರೆಯವರ ಮಕ್ಕಳು ಇದೀಗ ಜೈಲು ಸೇರಿದ್ದು, ಅವರ ಕುಟುಂಬಗಳು ಬೀದಿದೆ ಬಿದ್ದು ಕಣ್ಣೀರಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದರ್ಶನ್ ಒಬ್ಬ ಉತ್ತಮ ನಟ ಅಂತಲೂ ಹೆಸರು ಮಾಡಿದ್ದು, ಈತ ಸಮಾಜಕ್ಕೆ ಮಾದರಿಯಾಗಬಹುದಿತ್ತು. ಆದರೆ ಇದೀಗ ಈತನಿಂದ ನಮ್ಮ ಕಟುಂಬಗಳು ಬೀದಿಗೆ ಬರುವಂತಾಗಿವೆ ಎಂದು ಜೈಲು ಸೇರಿರುವ ಆರೋಪಿಗಳ ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇಷ್ಟೆಲ್ಲಾ ಆದರೂ ಕೂಡ ಅಂಧಾಭಿಮಾನಿಗಳು ನಮ್ಮ ಬಾಸ್.. ಡಿ ಬಾಸ್ ಅಂತಾ ಹುಚ್ಚರಂತೆ ಮೆರೆಯುತ್ತಿದ್ದಾರೆ. ಇವರಿಗೆಲ್ಲ ಹೇಳೋದು ಒಂದೇ ಮಾತು ಮೊದಲು ನಿಮ್ಮ ತಂದೆ, ತಾಯಿಗೆ ನೀವು ಹಿರೋಗಳಾಗಿ. ಸಮಾಜಕ್ಕೆ ಉತ್ತಮ ಕೊಡುಗೆ ಕೊಟ್ಟಿರುವ ತುಂಬಾ ಜನ ಮಹಾನುಭಾವರಿದ್ದಾರೆ. ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳುವ ಮೂಲಕ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ. ಸಾಮಾನ್ಯವಾಗಿ ದೊಡ್ಡ ಸಾಧನೆ ಮಾಡಿದಂತಹ ನಾಯಕ, ನಟರು ತಪ್ಪುಗಳನ್ನು ಮಾಡಿರುತ್ತಾರೆ ಇಲ್ಲ ಅಂತಲ್ಲ. ಮತ್ತೆ ಆ ತಪ್ಪುಗಳನ್ನು ತಿದ್ದಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಮಾದರಿಯಾಗಿದ್ದನ್ನು ನಾವು ನೋಡಿರುತ್ತೇವೆ.
ಆದರೆ ಮಾಡಿದ ತಪ್ಪನ್ನೇ ಮತ್ತೆ ಮಾಡಿಕೊಂಡು, ಎಷ್ಟು ಬಾರಿ ಯಾರೇ ಬುದ್ಧಿವಾದ ಹೇಳಿದರೂ ಕೂಡ ತಿದ್ದಿಕೊಳ್ಳದೇ, ನಡೆದಿದ್ದೇ ದಾರಿ ಎನ್ನುವವರು ಮಾತ್ರ ಯಾವತ್ತಿಗೂ ಸಮಾಜಕ್ಕೆ ಕಂಟಕನೇ ಅನ್ನುವುದನ್ನು ಮರೆಯಬೇಡಿ. ಹಾಗಂತ ರೇಣುಕಾಸ್ವಾಮಿ ಮಾಡಿದ್ದು ಸರಿಯಂತಲ್ಲ, ಆತ ಒಂದು ಹೆಣ್ಣಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದು ದೊಡ್ಡ ತಪ್ಪೇ. ಹಲವು ಮಾರ್ಗಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ಇಲ್ಲದಿದ್ದರೆ, ಆ ಜಿಲ್ಲೆಯ ಎಸ್ಪಿ ಅವರಿಗೆ ಹೇಳಿ ಆತನಿಗೆ ವಾರ್ನ್ ಮಾಡಿಸಬಹುದಿತ್ತು. ಅದನ್ನು ಬಿಟ್ಟು ಕೊಲ್ಲುವ ಹಂತಕ್ಕೆ ಹೋಗಿರುವುದು ಕೂಡ ದೊಡ್ಡ ಅಪರಾಧವೆ.
ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದರ್ಶನ್ ಬಗ್ಗೆ ಅಂಧಾಭಿಮಾನಿಗಳು ಜೈಕಾರ ಹಾಕುತ್ತಿದ್ದರೆ, ಮತ್ತೊಂದೆಡೆ ಬಹುತೇಕ ಮಂದಿ ಸಾಮಾಜಿಕ ಜಾಲತಾಣಗಲ್ಲಿ ರೇಣುಕಾಸ್ವಾಮಿಯಂತೆ ಆಗ್ತಾರೆ ಅಂತಲೂ ಆಕ್ರೋಶ ಹೊರಹಾಕುತ್ತಿದ್ದಾರೆ. ಈಗಾಗಲೇ ದರ್ಶನ್ ಮುಖ ಬಾಡಿಹೋದ ಬಾಳೆಹಣ್ಣಿನ ಸಿಪ್ಪೆಯಂತಾಗಿದೆ. ಇನ್ನು ಇದೀಗ ಜೈಲು ಸೇರಿದ್ದು, ಸೊರಗಿ ರೇಣುಕಾಸ್ವಾಮಿಯಂತೆ ಆಗಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.











Click it and Unblock the Notifications