ಹೆಂಡತಿಯನ್ನು ಇನ್ನೊಬ್ಬನ ಪಲ್ಲಂಗಕ್ಕೆ ಕಳಿಸಿ ವಿಡಿಯೋ ಮಾಡಿದ್ದ ಮಹಾನುಭಾವ ಸೆರೆ!
ಬೆಂಗಳೂರು, ಫೆ. 04: ತನ್ನ ಪತ್ನಿಯನ್ನು ಇನ್ನೊಬ್ಬನ ಪಲ್ಲಂಗಕ್ಕೆ ಕಳಿಸುವುದು. ಪತ್ನಿ ಹಾಗೂ ಪರ ಪುರುಷನ ಪಲ್ಲಂಗದಾಟವನ್ನು ಈತ ನೋಡಿ ವಿಡಿಯೋ ಮಾಡಿಕೊಳ್ಳುವುದು! ಇಂಥದ್ದೊಂದು ದಂಧೆ ಬೆಂಗಳೂರಿನಲ್ಲಿ ಸದ್ದಿಲ್ಲದೇ ತಲೆಯೆತ್ತಿದೆ. ವೈಫ್ ಸ್ವಾಪಿಂಗ್ ಹೆಸರಿನ ಈ ಹಲ್ಕಟ್ ದಂಧೆಯಲ್ಲಿ ಗ್ರಾಮೀಣ ಭಾಗದ ದಂಪತಿ ಸಿಕ್ಕಿ ಬಿದ್ದಿದ್ದಾರೆ.
ಪಾಶಿಮಾತ್ಯ ದೇಶದಲ್ಲಿರುವ ವೈಫ್ ಸ್ವಾಫಿಂಗ್ ವೇಶ್ಯಾವಾಟಿಕೆ ದಂಧೆ ಬೆಂಗಳೂರಿನಲ್ಲಿ ತಲೆಯೆತ್ತಿದೆ. ತನ್ನ ಪತ್ನಿಯನ್ನು ಇನ್ನೊಬ್ಬನ ಪಲ್ಲಂಗಕ್ಕೆ ಕಳಿಸಿ ವಿಕೃತಿ ಮೆರೆಯುವ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಯನ್ನು ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ವಿನಯ್ ಕುಮಾರ್ ಬಂಧಿತ ಆರೋಪಿ. ಬಂಧಿತನ ಮೊಬೈಲ್ ಹಿಸ್ಟರಿ ನೋಡಿ ಪೊಲೀಸರೇ ದಂಗಾಗಿದ್ದಾರೆ.
ಎಲೆಕ್ಟ್ರಾನಿಕ್ ಶಾಫ್ ಸೇಲ್ಸ್ಮೆನ್ ಆಗಿರುವ ವಿನಯ್ ಕುಮಾರ್ ತನ್ನ ಸಹೋದ್ಯೋಗಿಯನ್ನೇ ಪ್ರೀತಿಸಿ ಮದುವೆಯಾಗಿದ್ದ. ದಂಪತಿ ಅನೋನ್ಯದಿಂದಲೇ ಇದ್ದರು. ಇನ್ನು ಪತ್ನಿಯನ್ನು ಫ್ಯಾಂಟಸಿ ಸೆಕ್ಸ್‌ಗೆ ಬಳಸುವ ಇಂಗಿತವನ್ನು ವಿನಯ್ ಕುಮಾರ್ ವ್ಯಕ್ತಪಡಿಸಿದ್ದಾನೆ. ಅದಕ್ಕೆ ಪತ್ನಿಯೂ ಸಮ್ಮತಿ ಸೂಚಿಸಿದ್ದಾಳೆ. ಇಬ್ಬರ ಬಯಕೆ ಈಡೇರುವ ಜತೆಗೆ ಆರ್ಥಿಕ ಲಾಭವೂ ಇದೆ ಎಂದು ಯೋಚಿಸಿದ್ದ ದಂಪತಿ ಆನ್‌ಲೈನ್‌ನಲ್ಲಿ ಸಮಾನ ಮನಸ್ಕ ವಯಸ್ಕರರಿಗೆ ಗಾಳ ಹಾಕಿದ್ದಾರೆ. ಟ್ವಿಟ್ಟರ್, ಟೆಲಿಗ್ರಾಂ ಆಪ್ ಮೂಲಕ ವೈಫ್ ಸ್ವಾಪಿಂಗ್ ದಂಧೆಗೆ ಆಹ್ವಾನಿಸಿದ್ದಾರೆ.

ಈ ವೈಫ್ ಸ್ವಾಪಿಂಗ್ ದಂಧೆಯ ಬಗ್ಗೆ ವ್ಯಕ್ತಿಯೊಬ್ಬ ಮಾಹಿತಿ ಸಂಗ್ರಹಿಸಿ ಬೆಂಗಳೂರು ಪೊಲೀಸರಿಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದ. ಈ ವಿಲಕ್ಷಣ ಆಫರ್ ಕೊಟ್ಟಿದ್ದ ಟ್ವಿಟ್ಟರ್ ಖಾತೆಯ ಬಗ್ಗೆಯೂ ಮಾಹಿತಿ ನೀಡಿದ್ದ. ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
ಸಿಂಗಸಂದ್ರದ ಬಳಿ ಆಕ್ಟೀವ್ ಆಗಿದ್ದ ಟ್ವಿಟ್ಟರ್ ಖಾತೆ ಬೆನ್ನಟ್ಟಿ ವಿನಯ್ ಕುಮಾರ್ ನನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಗಂಡ ಹೆಂಡತಿ ಈಗಾಗಲೇ ಹಲವರ ಜತೆ ಲೈಂಗಿಕ ಸಂಪರ್ಕ ಹೊಂದಿರುವುದು ಬಯಲಾಗಿದೆ. ಕೆಲವರಿಂದ ಹಣ ಕೂಡ ಪಡೆದಿದ್ದಾರೆ. ಆರೋಪಿತನ ಮೊಬೈಲ್‌ನಲ್ಲಿ ಕೆಲವು ವಿಡಿಯೋ ಸಿಕ್ಕಿದ್ದು, ಪತ್ನಿ ಸರಸವಾಡುವ ದೃಶ್ಯಗಳನ್ನು ಮುಖ ಕಾಣದಂತೆ ವಿಡಿಯೋ ಮಾಡಿದ್ದಾನೆ. ಪರ ಪುರುಷನ ಸಮ್ಮತಿ ಪಡೆದಿದ್ದು, ಆತನ ಮುಖ ಕಾಣದಂತೆ ವಿಡಿಯೋ ಮಾಡಿದ್ದು, ಇವನ್ನು ನೋಡಿ ಪೊಲೀಸರೇ ಗಾಬರಿಯಾಗಿದ್ದಾರೆ. ಈ ಪ್ರಕರಣ ಬೆನ್ನಟ್ಟಿ ಜಾಲ ಬೇಧಿಸಿಲು ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಮುಂದಾಗಿದ್ದಾರೆ.

Recommended Video
ಕೇರಳದಲ್ಲಿ ಭಯಾನಕ ದಂಧೆಯಿದು: ಇತ್ತೀಚೆಗೆ ಕೇರಳದಲ್ಲಿ ವೈಫ್ ಸ್ವಾಪಿಂಗ್ ದೊಡ್ಡ ಜಾಲವನ್ನೇ ಅಲ್ಲಿನ ಪೊಲೀಸರು ಪತ್ತೆ ಮಾಡಿದ್ದರು. ಆರು ಮಂದಿಯನ್ನು ಕೂಡ ಬಂಧಿಸಿದ್ದರು. ಕೊಟ್ಟಾಯಂನಲ್ಲಿ ಸುಮಾರು ಒಂದು ಸಾವಿರ ಮಂದಿ ಸದಸ್ಯರಿದ್ದ ವೈಪ್ ಸ್ವಾಪಿಂಗ್ ಸಾಮಾಜಿಕ ಜಾಲ ತಾಣದ ಕೂಟವನ್ನು ಬಯಲಿಗೆ ಎಳೆದಿದ್ದರು. ಪತ್ನಿಯರನ್ನು ಒಪ್ಪಿಗೆ ಬೇರೆ ಬೇರೊಬ್ಬರಿಗೆ ಹಸ್ತಾಂತರಿಸಿ ಅವರ ಪತ್ನಿಯನ್ನು ಇವರು ಕರೆದುಕೊಂಡು ಹೋಗುವ ಈ ಜಾಲದ ಪ್ರಕರಣ ಇಡೀ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಬೆಂಗಳೂರಿನಲ್ಲಿ ಸಹ ಅಂತದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಪೊಲೀಸರ ನಿದ್ದೆ ಗೆಡಿಸಿದೆ.












Click it and Unblock the Notifications