ಬೆಂಗಳೂರು: ಪತ್ನಿಗೇ ಬ್ಲಾಕ್ ಮೇಲ್ ಮಾಡುತ್ತಿದ್ದ ಕ್ರೂರ ಪತಿ!
ಬೆಂಗಳೂರು, ಆಗಸ್ಟ್ 1: ಪತ್ನಿಯನ್ನೇ ಬ್ಲಾಕ್ ಮೇಲ್ ಮಾಡುತ್ತಿದ್ದ ವಿಕೃತ ಪತಿಯ ವಿರುದ್ಧ ಪತ್ನಿ ದೂರು ನೀಡಿದ ಘಟನೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದೆ.
2016 ರ ಏಪ್ರಿಲ್ ನಲ್ಲಿ ಬೆಂಗಳೂರಿನ ಚಾಮರಾಜಪೇಟೆ ನಿವಾಸಿ ಶಿವಮ್(ಹೆಸರು ಬದಲಾಯಿಸಿದೆ) ಎನ್ನುವವರನ್ನು ಮದುವೆಯಾಗಿದ್ದ 24 ವರ್ಷದ ಯುವತಿಗೆ ಮದುವೆಯಾದ ದಿನದಿಂದಲೂ ಕಿರುಕುಳ ನೀಡಲಾಗುತ್ತಿತ್ತು.

ಆಕೆಗೆ ಮದ್ಯಸೇವನೆ ಮಾಡುವಂತೆ ಪತಿ ಒತ್ತಾಯಿಸುತ್ತಿದ್ದ. ಅಲ್ಲದೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅದನ್ನು ಅನುಕರಿಸುವಂತೆ ಪೀಡಿಸುತ್ತಿದ್ದ. ಜೊತೆಗೆ ಅಸಹಜ ಲೈಂಗಿಕತೆಯಲ್ಲಿ ತೊಡಗುವಂತೆ ಹೇಳುತ್ತಿದ್ದ. ಈ ಎಲ್ಲದರೊಂದಿಗೆ ಆತನ ಕುಟುಂಬದ ಇತರರೂ ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಆಕೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಆತನ ಮಾತನ್ನು ಕೇಳದಿದ್ದರೆ ಆಕೆಯ ಬೆತ್ತಲೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಮಾನ ಹರಾಜು ಮಾಡುವುದಾಗಿಯೂ ಬ್ಲಾಕ್ ಮೇಲ್ ಮಾಡುತ್ತಿದ್ದ. ವರದಕ್ಷಿಣೆ ನಿಷೇಧ ಕಾಯ್ದೆಯನ್ವಯ ಶಿವಮ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications