ಕನ್ನಡ ಯಾಕಿಲ್ಲ ಅಂದ್ರೆ: ಈ ಮೆಂಟಲ್ ಕನ್ನಡಿಗರಿಗೆ ಏನಾಗಿದೆ ಎಂದ ಮಹಿಳೆ! ಇಲ್ಲಿದೆ ವೈರಲ್ ವಿಡಿಯೋ!
ಬೆಂಗಳೂರಿನಲ್ಲಿ ಕನ್ನಡ ಬಳಸಿ ಎಂದು ಹೇಳಿರುವುದಕ್ಕೆ ಮಹಿಳೆಯೊಬ್ಬಳು ಈ ಮೆಂಟಲ್ ಕನ್ನಡಿಗರಿಗೆ ಏನಾಗಿದೆ ಹೇಳಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮೂಲಕ ಭಾಷಾ ವಿವಾದವು ಬೆಂಗಳೂರಿನಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಳೆದ ಎರಡು ವರ್ಷಗಳಿಂದಲೂ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಭಾಷಾ ವಿಚಾರವಾಗಿ ವಾದ - ವಿವಾದಗಳು ನಡೆಯುತ್ತಲ್ಲೇ ಇವೆ. ವಾರದಲ್ಲಿ ಒಂದಾದರೂ ಈ ರೀತಿಯ ಪ್ರಕರಣಗಳು ವರದಿಯಾಗುತ್ತಿದ್ದು. ಅನ್ಯ ಭಾಷಿಕರು ಹಾಗೂ ಕನ್ನಡೇತರರು ಕನ್ನಡಕ್ಕೆ ಅಗೌರವ ತೋರಿಸುವುದು ಮುಂದುವರಿದಿದೆ. ಇದೇ ರೀತಿ ಇದೀಗ ಮತ್ತೊಂದು ಪ್ರಕರಣ ನಡೆದಿದ್ದು ಕನ್ನಡಿಗರ ಬಗ್ಗೆ ಆ ಮಹಿಳೆ ಬಳಸಿರುವ ಮಾತುಗಳು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಕನ್ನಡಿಗರ ನ್ಯಾಯಯುತ ಆಗ್ರಹಕ್ಕೆ ಮಹಿಳೆ ನೀಡಿರುವ ರಿಪ್ಲೈ ಎಂತವರನ್ನೂ ಕೆರಳಿಸುವಂತೆ ಇದೆ. ಏನಿದು ವೈರಲ್ ವಿಡಿಯೋ ಕನ್ನಡಿಗರ ಪ್ರಶ್ನೆ ಏನು ಎನ್ನುವ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಭಾಷೆ ಹಾಗೂ ಕನ್ನಡವೇ ಸಾರ್ವಭೌಮ ಭಾಷೆ ಎಂದು ಕನ್ನಡಿಗರು ಕೂಗಿ ಕೂಗಿ ಹೇಳುತ್ತಿದ್ದಾರೆ. ಈ ವಿಚಾರ ಈಗಾಗಲೇ ಕೆಲವು ಕನ್ನಡೇತರರಿಗೆ ಅರ್ಥವಾಗಿದೆ. ಆದರೆ ಇನ್ನೂ ಕೆಲವರಿಗೆ ಇನ್ನೂ ಅರ್ಥವಾಗುತ್ತಿಲ್ಲ. ಹೀಗಾಗಿ ಈ ವಿಚಾರವು ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿದೆ. ಇದೀಗ ಹಿರಿಯರೊಬ್ಬರು ನ್ಯಾಯಯುತವಾಗಿ ಕನ್ನಡದ ನಾಮಫಲಕ ಅಳವಡಿಸಿಕೊಳ್ಳುವ ಬಗ್ಗೆ ಮಾತನಾಡಿದ್ದು. ಇದಕ್ಕೆ ಆ ಮಹಿಳೆ ನೀಡಿರುವ ಪ್ರತಿಕ್ರಿಯೆಯು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಆ ಮಹಿಳೆ ಈ ವಿಚಾರವಾಗಿ ಕನ್ನಡಿಗರನ್ನು ಮೆಂಟಲ್ ಪೀಪಲ್ ಎಂದಿರುವುದು ಕನ್ನಡಿಗರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ. ಈ ಸಂಬಂಧ ಕನ್ನಡಪರ ಹೋರಾಟಗಾರರು ಹಾಗೂ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.

ರೂಪೇಶ್ ರಾಜಣ್ಣ ಅವರು ಮೊದಲಿಗೆ ಕನ್ನಡ ಕೇಳೋ ಹಕ್ಕು ನಮ್ಮೆಲ್ಲರದ್ದು ಎಂದು ಕನ್ನಡ ಕೇಳಿದ ಈ ಹಿರಿಯ ಕನ್ನಡಿಗರಿಗೆ ಅಭಿನಂದನೆಗಳು ❤️
ಇವರು ಕೇಳಿರೋದು ನ್ಯಾಯವಾಗಿ ಇದೆ. ಆದರೆ ಎದುರಿರೋ ವಲಸಿಗ ವ್ಯಕ್ತಿ ವಿಡಿಯೋ ಮಾಡಿ ಅದರ ಮೇಲೆ ಬರೆದಿರೋ ದುರಹಂಕಾರದ ಹೇಳಿಕೆ ನೋಡಿ.
ಇಂಡಿಯಾ ಅಂದ್ರೆ ಕನ್ನಡವು ಸೇರಿ ತಾಯಿ ಇದು ಎಲ್ಲಿ ಯಾರಾದ್ರೂ ಮಾಹಿತಿ ಕೊಡಿ ಅಂತ ಪೋಸ್ಟ್ ಮಾಡಿದ್ದಾರೆ.
ಮಹಿಳೆಯ ಸೋಷಿಯಲ್ ಮೀಡಿಯಾ ಪೋಸ್ಟ್: ಇನ್ನು ಗಲಾಟೆಯ ನಂತರ ಮಹಿಳೆಯ ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಇಂದು ನಾನು ಸಹ ಕನ್ನಡಿಗನಲ್ಲ ಎಂಬ ತಾರತಮ್ಯವನ್ನು ಎದುರಿಸಿದೆ. ಈ ಮಾನಸಿಕ ಜನರಿಗೆ ಏನಾಗಿದೆ (Today I also faced discrimination inkes my own Country Not being Kannadiga. What the hell is wrong with these mental people) ಅಂತ ಮಹಿಳೆ ಪೋಸ್ಟ್ ಮಾಡಿದ್ದಾಳೆ ಎನ್ನಲಾಗಿರುವ ಬರಹ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನೆಯ ಹಿನ್ನೆಲೆ ಏನು: ಈ ಮನುಷ್ಯ ನನಗೆ ಟಾರ್ಚರ್ ಕೊಡುತ್ತಿದ್ದಾನೆ. ನನ್ನ ಅಂಗಡಿಯ ಬೋರ್ಡ್ ಅನ್ನು ಕನ್ನಡಕ್ಕೆ ಬದಲಾಯಿಸಿ ಅಂತ ಹೇಳುತ್ತಿದ್ದಾನೆ. ಆದರೆ ನನ್ನ ಬೋರ್ಡ್‌ನಲ್ಲಿ ಈಗಾಗಲೇ ಕನ್ನಡ ಇದೆ ಅಂತ ಮಹಿಳೆ ವಿಡಿಯೋ ಮಾಡಿದ್ದಾಳೆ. ನೀವು ಯಾರು ಇದನ್ನು ಹೇಳುವುದಕ್ಕೆ ಅಂತ ಮಹಿಳೆ ಕೇಳಿದ್ದು ಅದಕ್ಕೆ ಹಿರಿಯ ವ್ಯಕ್ತಿಯು ಇದು ಕರ್ನಾಟಕ ಅಂತ ಹೇಳಿದ್ದಾರೆ. ನಾನು ಕನ್ನಡದವನು. ಈ ನೆಲದವನು ಸರ್ಕಾರದ ಆದೇಶದ ಪ್ರಕಾರ, ಕರ್ನಾಟಕದ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಇರಬೇಕು ಇನ್ನುಳಿದ ಶೇ 40ರಷ್ಟು ಇಂಗ್ಲಿಷ್ ಇರಬಹುದು ಎಂದು ಅತ್ಯಂತ ಸೌಮ್ಯಸ್ವಭಾವದಿಂದ ಹಿರಿಯರು ಆ ಮಹಿಳೆಗೆ ಹೇಳಿರುವುದು ವಿಡಿಯೋದಲ್ಲಿ ಇದೆ.
Every citizen has the right to question & Uncle is right.
— A_Virupaksha (@A_V_Speaks) June 16, 2025
She is not following the rules laid by @BBMPofficial & talks about discrimination!@BBMPCOMM @KDA_Bengaluru ಮಾನ್ಯರೇ ಬೆಂಗಳೂರಿನಲ್ಲಿ ನಾಮಫಲಕಗಳ ನಿಯಮ ಸೂಕ್ತ ರೀತಿಯಲ್ಲಿ ಪಾಲನೆ ಆಗ್ತಿಲ್ಲ. ಕ್ರಮ ತೆಗೆದುಕೊಳ್ಳಿ🙏https://t.co/lIOxgbJ0Xt pic.twitter.com/PUjefa3Lyh
ಘಟನೆಯ ಹಿನ್ನೆಲೆ ಏನು: ಬೆಂಗಳೂರಿನಲ್ಲಿ ನಾಮಫಲಕದಲ್ಲಿ ಶೇ60 ರಷ್ಟು ಕನ್ನಡ ಇರಬೇಕು ಎಂದು ಕರ್ನಾಟಕ ಸರ್ಕಾರವೇ ಕಾನೂನೂ ರೂಪಿಸಿರುವ ವಿಚಾರ ನಿಮಗೆಲ್ಲ ತಿಳಿದೇ ಇದೆ. ಆದರೆ, ಕರ್ನಾಟಕ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ಕೆಲವರು ಕೋರ್ಟ್ ಮೊರೆಯೂ ಹೋಗಿದ್ದರು. ಆದರೆ ಕರ್ನಾಟಕದಲ್ಲಿ ಬಹುತೇಕ ಉದ್ದಿಮೆಗಳು ನಾಮಫಲಕದಲ್ಲಿ ಶೇ 60ರಷ್ಟು ಕನ್ನಡವನ್ನು ಅಳವಡಿಸಿಕೊಂಡಿದ್ದಾರೆ. ಈ ವಿಚಾರವನ್ನು ಹಿರಿಯರು ಪ್ರಶ್ನೆ ಮಾಡಿದಾಗ ಈ ವಿಷಯ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ.












Click it and Unblock the Notifications