ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದನವನ್ನು ಎದುರಿಸುವ ಧೈರ್ಯ ಕಾಂಗ್ರೆಸ್‌ಗೆ ಇಲ್ಲ: ಶೋಭಾ ಕರಂದ್ಲಾಜೆ

By Manjunatha
|
Google Oneindia Kannada News

ಬೆಂಗಳೂರು, ಮೇ 18: ರಾಜ್ಯಪಾಲ ವಜುಭಾಯಿ ವಾಲಾ ಅವರು ಬಿಜೆಪಿಯ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿರುವುದಕ್ಕೆ ವಿರೋಧಿಸುತ್ತಿರುವ ಕಾಂಗ್ರೆಸ್‌ ಪಕ್ಷದ ಮೇಲೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹರಿಹಾಯ್ದರು.

ಕೆ.ಜಿ.ಬೋಪಯ್ಯ ಅವರು ಈಗಾಗಲೇ ಮೂರು ಬಾರಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ ಆದರೆ ಅವರ ಆಯ್ಕೆಯನ್ನೂ ಕಾಂಗ್ರೆಸ್‌ ವಿರೋಧಿಸುತ್ತಿರುವುದು ನೋಡಿದರೆ ಅವರಿಗೆ ಸದನವನ್ನು ಎದುರಿಸುವ ಧೈರ್ಯವಿದ್ದಂತಿಲ್ಲ ಎಂದು ಅವರು ಹೇಳಿದರು.

ಹಂಗಾಮಿ ಸ್ಪೀಕರ್ ಆಯ್ಕೆ ಬಿಜೆಪಿಯ ಕೆ.ಜಿ. ಬೋಪಯ್ಯ ನೇಮಕ ಹಂಗಾಮಿ ಸ್ಪೀಕರ್ ಆಯ್ಕೆ ಬಿಜೆಪಿಯ ಕೆ.ಜಿ. ಬೋಪಯ್ಯ ನೇಮಕ

ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ವಲುಭಾಯಿ ವಾಲಾ ಅವರು ಕೆಜಿ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ಪ್ರಮಾಣ ವಚನ ಬೋಧಿಸಿದ್ದು ಅವರೇ ನಾಳೆ ಅಧಿವಶನದಲ್ಲಿ ಪ್ರಮಾಣವಚನ ಬೋಧಿಸಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

Why congress opposing speaker Boppaiah: Sobha Karandlaje

ಈ ಮುಂಚೆ ಉಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯಪಾಲರಾಗಿದ್ದ ಹಂಸರಾಜ್ ಅವರು ಕೂಡಾ ಕೆ.ಜಿ.ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಿದ್ದರು ಆಗ ಏಕೆ ಕಾಂಗ್ರೆಸ್‌ ನವರು ಪ್ರಶ್ನೆ ಮಾಡಿರಲಿಲ್ಲ ಈಗ ವಿರೋಧಿಸುತ್ತಿರುವುದಕ್ಕೆ ಕಾರಣ ಏನು ಎಂದು ಶೋಭಾ ಅವರು ಪ್ರಶ್ನೆ ಮಾಡಿದರು.

ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ನೇಮಕ ಪ್ರಶ್ನಿಸಿ ಸುಪ್ರೀಂಗೆ ಕಾಂಗ್ರೆಸ್ ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ನೇಮಕ ಪ್ರಶ್ನಿಸಿ ಸುಪ್ರೀಂಗೆ ಕಾಂಗ್ರೆಸ್

ನಾಳೆ ಸದನದಲ್ಲಿ ಬಿಜಪಿಯು ಬಹುಮತ ಸಾಬೀತು ಮಾಡುವುದು ಖಾಯಂ ಎಂದ ಶೋಭಾ ಅವರು ಬಿಜೆಪಿ ಮಾಡುತ್ತಿರುವ ತಂತ್ರಗಳನ್ನು ಹೇಳಲು ಒಪ್ಪಲಿಲ್ಲ. ನಾಳೆ 120ಕ್ಕೂ ಹೆಚ್ಚು ಮತ ಬಿಜೆಪಿ ಪರ ಇರಲಿವೆ ಎಂದು ಅವರು ಹೇಳಿದರು.

English summary
Karnataka Governor appointed BJP MLA KG Bopaiah as pro-term speaker. congress opposing this decision of Governor. BJP leader Shobha Karandlaje lambasted on congress for opposing KG Bopaiah as speaker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X