ಜೆಡಿಎಸ್‌ನ ಒಂದು ಪರಿಷತ್ ಸ್ಥಾನ ಯಾರ ಪಾಲಿಗೆ?
ಬೆಂಗಳೂರು, ನವೆಂಬರ್ 28: ಜೆಡಿಎಸ್ ಪಾಲಿನ ಒಂದು ಪರಿಷತ್ ಸ್ಥಾನ ಯಾರ ಪಾಲಿಗೆ ಒಲಿಯುತ್ತದೆ ಎನ್ನುವುದು ಸಧ್ಯದ ಕುತೂಹಲವಾಗಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಮೂರು ಸ್ಥಾನಗಳ ನಾಮ ನಿರ್ದೇಶನ ಪ್ರಕ್ರಿಯೆ ಈಗಾಗಲೇ ಅರ್ಧ ಮುಗಿದಿದ್ದು, ಕಾಂಗ್ರೆಸ್ ಪಾಲಿನ ಎರಡು ಸ್ಥಾನ ಭರ್ತಿಯಾಗಿದೆ. ಜೆಡಿಎಸ್ ಪಾಲಿನ ಒಂದು ಸ್ಥಾನಕ್ಕಾಗಿ ಕಸರತ್ತು ಆರಂಭವಾಗಿದೆ.
ಕಾಂಗ್ರೆಸ್‌ನಲ್ಲಿ ಪ್ರಕಾಶ್ ರಾಠೋಡ್ ಹಾಗೂ ಯುಬಿ ವೆಂಕಟೇಶ್ ಅವರನ್ನು ನೇಮಕ ಮಾಡಲಾಗಿದೆ. ಜೆಡಿಎಸ್ ನಲ್ಲಿ ಮಾತ್ರ ಇನ್ನೂ ಆಲೋಚಿಸುತ್ತಿದೆ. ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಯನ್ನು ಪರಿಷತ್‌ಗೆ ನೇಮಕ ಮಾಡಬೇಕಿದೆ.

ಪರಿಷತ್‌ಗೆ ಯಾರು ಸೂಕ್ತ, ದೇವೇಗೌಡರ ಅಭಿಪ್ರಾಯ
ಜೆಡಿಎಸ್ ಮೂಲಗಳ ಪ್ರಕಾರ ಬಿಳಿಗಿರಿ ರಂಗನಬೆಟ್ಟದಲ್ಲಿ ಸೋಲಿಗರ ಶ್ರೇಯೋಭಿವೃದ್ಧಿಗೆ ದಶಕಗಳಿಂದ ಶ್ರಮಿಸುತ್ತಿರುವ ಡಾ. ಎಚ್ ಸುದರ್ಶನ್ ಸೂಕ್ತ ಎನ್ನುವುದು ದೇವೇಗೌಡರ ಅಭಿಪ್ರಾಯವಾಗಿದೆ.

ಮಧು ಬಂಗಾರಪ್ಪ ಅವರ ಹೆಸರೂ ಇದೆ
ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧಿಸಿ ಉತ್ತಮ ಪ್ರತಿಸ್ಪರ್ಧೆಯೊಡ್ಡಿದ್ದ ಮಧು ಬಂಗಾರಪ್ಪ ಅವರ ಹೆಸರೂ ಕೇಳಿಬರುತ್ತಿದೆ. ಈಗಾಗಲೇ ಮಧು ಬಂಗಾರಪ್ಪ ಅವರ ಹೆಸರು ಪ್ರಸ್ತಾಪವಾಗಿದ್ದರೂ ಹಿಂಬಾಗಿಲಿನ ರಾಜಕಾರಣಕ್ಕೆ ಅವರು ಆಸಕ್ತಿ ತೋರಿರಲಿಲ್ಲ.
ಆಷಾಢ ಮಾಸ ಕಳೆಯುವವರೆಗೂ ಸಂಪುಟ ವಿಸ್ತರಣೆ ಇಲ್ಲ

ರಾಜಕೀಯ ಪರಿಸ್ಥಿತಿ ಬದಲಾಗಿದೆ
ಇದೀಗ ರಾಜಕೀಯ ಪರಿಸ್ಥಿತಿ ಬದಲಾಗಿದೆ.ಪರಿಷತ್‌ಗೆ ನೇಮಕಗೊಂಡರೆ ಸಂಪುಟದಲ್ಲೂ ಸ್ಥಾನ ಸಿಗುವ ಲಕ್ಷಣಗಳಿರುವುದರಿಂದ ಒಪ್ಪಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಒಪ್ಪದಿದ್ದರೆ ಮಾಜಿ ಶಾಸಕರಾದ ನಾರಾಯಣ ರಾವ್ ಹಾಗೂ ವೈಎಸ್‌ವಿ ದತ್ತಾ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ.

ಕೋನರೆಡ್ಡಿ ಹೆಸರು ಕೂಡ ಇದೆ
ಉತ್ತರ ಕರ್ನಾಟಕಕ್ಕೂ ಆದ್ಯತೆ ನೀಡಬೇಕೆಂಬ ದೃಷ್ಟಿಯಿಂದ ಮಾಜಿ ಶಾಸಕ ಎನ್‌ಎಚ್ ಕೋನರೆಡ್ಡಿ ಅವರಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಮಾತೂ ಕೇಳಿಬರುತ್ತಿದೆ. ಹಿರಿಯ ನಾಯಕ ಪಿಜಿಆರ್ ಸಿಂಧ್ಯ ವಿಧಾನಸಭೆ ಚುನಾವಣೆಯಲ್ಲಿ ಬಸವ ಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.












Click it and Unblock the Notifications