ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು:ಇಂದಿನಿಂದ ಉಪನಗರ ರೈಲು ಸಂಚಾರ ಆರಂಭ!

|
Google Oneindia Kannada News

ಬೆಂಗಳೂರು, ಮಾರ್ಚ್ 12: ಬೈಯಪ್ಪನಹಳ್ಳಿ-ವೈಟ್ ಫೀಲ್ಡ್ ನಡುವೆ 4 ಹೊಸ ಮೆಮು(ವಿದ್ಯುತ್ ಚಾಲಿತ) ರೈಲು ಹಾಗೂ ಬಾಣಸವಾಡಿ-ಹೊಸೂರು ನಡುವೆ ನಾಲ್ಕು ಡೆಮು ರೈಲು ಸೋಮವಾರದಿಂದ ಸಂಚರಿಸಲಿದೆ.

ಈ 8 ಹೊಸ ರೈಲು ಸಂಚಾರದಿಂದ ಎಲೆಕ್ಟ್ರಾನಿಕ್ ಸಿಟಿ ಹಾಗೂ ವೈಟ್ ಫೀಲ್ಡ್ ಕಡೆಯ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ನಿರೀಕ್ಷೆ ಇದೆ. ಐಟಿ-ಬಿಟಿ ಕಂಪನಿಗಳು ಹೆಚ್ಚಿರುವ ಈ ಪ್ರದೇಶಗಳಿಗೆ ಹೆಚ್ಚುವರಿ ರೈಲು ಕಲ್ಪಿಸುವ ಬಹುದಿನಗಳ ಬೇಡಿಕೆ ಇದೀಗ ಈಡೇರಿದೆ.

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವೆ ಮೆಮು ರೈಲು ಸಂಚಾರಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವೆ ಮೆಮು ರೈಲು ಸಂಚಾರ

ನೂತನ ರೈಲು ಸಂಪರ್ಕದಿಂದ ಮೆಜೆಸ್ಟಿಕ್ ಕೆಎಸ್ ಆರ್ ರೈಲ್ವೆ ನಿಲ್ದಾಣದಿಂದ ಒಂದು ತಾಸಿನಲ್ಲಿ ವೈಟ್ ಫೀಲ್ಡ್ ತಲುಪಬಹುದು.
ಎಂಟು ಬೋಗಿಗಳ ಎಂಟು ನೂತನ ರೈಲುಗಳು ಭಾನುವಾರ ಹೊರತುಪಡಿಸಿ ಉಳಿದ ಆರು ದಿನ ಈ ಮಾರ್ಗದಲ್ಲಿ ಸಂಚರಿಸಲಿದೆ.

rail

ಪ್ರತಿ ರೈಲು ಒಮ್ಮೆಗೆ 2,400 ಮಂದಿ ಪ್ರಯಾಣಿಸಬಹುದು. ಡೀಸೆಲ್ ಚಾಲಿತ ಮೆಮು ರೈಲುಗಿಂತ ವಿದ್ಯುತ್ ಚಾಲಿತ ಮೆಮು ರೈಲುಗಳ ವೇಗ ಹೆಚ್ಚಿರುತ್ತದೆ.

ಮೆಮು ರೈಲು ವೇಳಾ ಪಟ್ಟಿ: 06568 ಸಂಖ್ಯೆಯ ರೈಲು ಬೈಯಪ್ಪನಹಳ್ಳಿ ಯಿಂದ ವೈಟ್ ಫೀಲ್ಡ್ ಗೆ ಸಂಜೆ 4.45ಗೆ ಹೊರಟು 5.05 ತಲುಪಲಿದೆ. 06556೭ ರೈಲು ವೈಟ್ ಫೀಲ್ಡ್ ನಿಂದ ಬೈಯಪ್ಪನಹಳ್ಳಿ ಬೆಳಗ್ಗೆ 9 ಹೊರಟು 9.20 ತಲುಪಲಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

06569 ಬೈಯಪ್ಪನಹಳ್ಳಿಯಿಂದ ಕೆಎಸ್ ಆರ್ ಗೆ ಸಂಜೆ 6.45ಕ್ಕೆ ಹೊರಟು 7.15ಕ್ಕೆ ತಲುಪಲಿದೆ. 06569 ರೈಲು ಕೆಎಸ್ ಆರ್ ನಿಂದ ಬೈಯಪ್ಪನಹಳ್ಳಿ ಗೆ ಬೆಳಗ್ಗೆ 7.5೦ ಹೊರಟು 8.15ಕ್ಕೆ ತಲುಪಲಿದೆ.

ಡೆಮು ರೈಲು ವೇಳಾ ಪಟ್ಟಿ: 06571ರೈಲು ಬಾಣಸವಾಡಿಯಿಂದ ಹೊಸೂರಿಗೆ ಬೆಳಗ್ಗೆ 9.50ಕ್ಕೆ ಹೊರಟು 11ಕ್ಕೆ ತಲುಪಲಿದೆ. 06572ರೈಲು ಹೊಸೂರಿನಿಂದ ಬಾಣಸವಾಡಿಗೆ ಬೆಳಗ್ಗೆ 11.15ಕ್ಕೆ ಹೊರಟು ಮ.12.15ಕ್ಕೆ ತಲುಪಲಿದೆ.

06573ರೈಲು ಬಾಣಸವಾಡಿಯಿಂದ ಹೊಸೂರಿಗೆ ಮ.12.40ಕ್ಕೆ ಹೊರಟು 1.45ಕ್ಕೆ ತಲುಪಲಿದೆ. 06574ರೈಲು ಹೊಸೂರಿನಿಂದ ಬಾಣಸವಾಡಿಗೆ ಸಂಜೆ 3.20ಕ್ಕೆ ಹೊರಟು 4.40ಕ್ಕೆ ತಲುಪಲಿದೆ.

ಈ ನೂತನ ಸೇವೆಗಳು ಜನರ ಕಚೇರಿಗೆ ಸಮಯಕ್ಕೆ ಹೊಂದಿಕೆಯಾಗುವಂತೆ ವೇಳಾ ಪಟ್ಟಿ ಸಿದ್ಧಪಡಿಸಲಾಗಿದೆ. ಪ್ರಸ್ತುತ 110 ಉಪನಗರ ರೈಲುಗಳು ನಗರದಲ್ಲಿ ಸಂಚರಿಸುತ್ತಿದ್ದು, ಇದೀಗ ಹೆಚ್ಚುವರಿಯಾಗಿ 8 ಹೊಸ ರೈಲುಗಳು ಸೇರ್ಪಡೆಯಾಗಿದೆ.

English summary
Including four DEMU four Memu rails will run from today as South Western Railwa resumes suburban rail service white field, Electroniccity, Baiyappanahalli and more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X