ಡಿಕೆ ಶಿವಕುಮಾರ್ ಗೆ ರಾಖಿ ಕಟ್ಟಿದ ಗುಜರಾತಿ ಶಾಸಕಿಯರು
ಬೆಂಗಳೂರು, ಆಗಸ್ಟ್ 07: ಗುಜರಾತಿನಿಂದ ಬಂದಿದ್ದ ಕಾಂಗ್ರೆಸ್ ಶಾಸಕ, ಶಾಸಕಿಯರು ತಮ್ಮ ಊರಿನ ಹಾದಿ ಹಿಡಿಯುವ ಮುನ್ನ ರಕ್ಷಾಬಂಧನ ಆಚರಣೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.
ಬೆಂಗಳೂರಿನಲ್ಲಿ ಇರುವಷ್ಟು ಕಾಲ ಸೋದರನಂತೆ ನಡೆದುಕೊಂಡು ರಕ್ಷಣೆ ನೀಡಿದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಅವರಿಗೆ ಕಾಂಗ್ರೆಸ್ ಶಾಸಕಿಯರು ಧನ್ಯವಾದಗಳನ್ನು ಅರ್ಪಿಸಿ, ರಾಖಿ ಕಟ್ಟಿದ್ದಾರೆ.

ಶಾಸಕಿ ಕಾಮಿನಿಬೇನ್ ಬಿ ರಾಥೋರ್ ಅವರು ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ರಾಖಿ ಕಟ್ಟಿದವರಲ್ಲಿ ಮೊದಲಿಗರು. ದೆಹೆಗಾಮ್ ಕ್ಷೇತ್ರದ ಶಾಸಕಿ ನಂತರ ಉಳಿದ ಶಾಸಕಿಯರು ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಅವರಿಗೆ ರಾಖಿ ಕಟ್ಟಿ ಸೋದರತ್ವ ಸಂಬಂಧಕ್ಕೆ ನಾಂದಿ ಹಾಡಿದರು.












Click it and Unblock the Notifications