ಅಮಿತ್ ಶಾ ಕೇಳಿದಾಗ ನೋ, ಈಗ ಓಕೆ ಎಂದಿದ್ಯಾಕೆ ಡಿ.ಕೆ ಶಿವಕುಮಾರ್ ?!
Amul vs Nandini: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಂದಿನಿಯ ಬದಲಾಗಿ ಅಮೂಲ್‌ಗೆ ಅವಕಾಶ ನೀಡುತ್ತಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಆಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಸ್ತಾವನೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರು ಯಾಕೆ ಈಗ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ನಂದಿನಿ ಉಳಿಸಿ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಅನ್ಯ ರಾಜ್ಯದಿಂದ ಒತ್ತಡ ಹಾಗೂ ನಂದಿನಿ ಅಸ್ಮಿತೆ ಪ್ರಶ್ನೆ ಎಂದು ಹೇಳಲಾಗುತ್ತಿತ್ತು. ಈಗ ಕರ್ನಾಟಕವೇ ಅಮೂಲ್ ಹಾಗೂ ಅಮೂಲ್ ಉತ್ಪನ್ನವನ್ನು ಶಾರ್ಟ್ ಲಿಸ್ಟ್ ಮಾಡಿರುವುದೇಕೆ ಎನ್ನುವ ಪ್ರಶ್ನೆ ಎದುರಾಗಿದೆ.
ನಮ್ಮದೇ ಆದ ನಂದಿನಿಯನ್ನು ಪ್ರಚಾರ ಮಾಡುವ ಬದಲು ಬಿಎಂಆರ್‌ಸಿಎಲ್ ನಂದಿನಿಯನ್ನು ಬಿಟ್ಟು ಅಮುಲ್ ಹಾಗೂ ಅಮೂಲ್ ಉತ್ಪನ್ನವನ್ನು ಆಯ್ಕೆ ಮಾಡಿಕೊಂಡಿದ್ದು ಅಥವಾ ಶಾರ್ಟ್ ಲಿಸ್ಟ್ ಮಾಡಿದೆ. ಯಾರ ಆದೇಶ ಅಥವಾ ಒತ್ತಡದ ಮೇರೆಗೆ ನಂದಿನಿಯನ್ನು ಬಿಟ್ಟು ಅಮೂಲ್‌ಗೆ ಅನುಮತಿ ನೀಡಲಾಗಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಅಮೂಲ್ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಅಂದು ಡಿ.ಕೆ ಶಿವಕುಮಾರ್ ಅವರು ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲಿ ನಂದಿನಿಗಿಂತ ಅಮುಲ್‌ಗೆ ಆದ್ಯತೆ ನೀಡುವುದು ಗೃಹ ಸಚಿವರ ಒತ್ತಡ ತಂತ್ರ ಎಂದು ಅಂದು ಕಾಂಗ್ರೆಸ್ ನಾಯಕರು ಹೇಳಿದರು. ಆದರೆ ಇದೀಗ ಅವರದ್ದೇ ಆಡಳಿತದಲ್ಲಿ ಅವರು ಅಮುಲ್ ಉತ್ಪನ್ನಗಳನ್ನು ಮೆಟ್ರೋ ನಿಲ್ದಾಣಗಳಲ್ಲಿ ಮಾರಾಟ ಮಾಡಲು ಅನುಮತಿಸಿದ್ದಾರೆ. ಈ ಆಯ್ದ ಮರೆವು ಏಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
10 ನಿಲ್ದಾಣಗಳಲ್ಲಿ ಅಮೂಲ್: ಇನ್ನು ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣದ 10 ಕಡೆಗಳಲ್ಲಿ ಅಮೂಲ್ ಕಿಯೋಸ್ಕ್ / ಅಮೂಲ್ ಮಳಿಗೆಯನ್ನು ಪ್ರಾರಂಭಿಸುವುದಕ್ಕೆ ಅವಕಾಶ ನೀಡಲಾಗಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ಹಾಗೂ ಅಧಿಕಾರಕ್ಕೆ ಬಂದ ಮೇಲೆ ಒಂದು ರೀತಿ ನಡೆದುಕೊಳ್ಳುತ್ತಿದೆ ಎಂದು ಜನಸಾಮಾನ್ಯರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಬೆಂಗಳೂರಿನ ಪ್ರತಿಷ್ಠಿತ ಮೆಟ್ರೋ ನಿಲ್ದಾಣಗಳ ಮಳಿಗೆಗಳಲ್ಲೇ ಅಮೂಲ್‌ಗೆ ಮಣೆಯಾಕಲಾಗಿದೆ. ಕರ್ನಾಟಕದ ನಂದಿನಿ ಉತ್ಪನ್ನಗಳಿಗೆ ಇಲ್ಲಿ ಅವಕಾಶ ನೀಡಬಹುದಾಗಿತ್ತು. ಆದರೆ ಅಮೂಲ್‌ಗೆ ನೀಡುವ ಮೂಲಕ ಕರ್ನಾಟಕ ಕಾಂಗ್ರೆಸ್ ಪಕ್ಷವು ಇಬ್ಭಗೆಯ ನೀತಿಯನ್ನು ಅನುಸರಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ.












Click it and Unblock the Notifications