ನಿರ್ಮಾಪಕರ ಹೋರಾಟದ ಹಿಂದಿನ ಲೆಕ್ಕಾಚಾರನೇ ಬೇರೆ!
ಸ್ಯಾಂಡಲ್ವುಡ್ನಲ್ಲಿ ನಿರ್ಮಾಪಕರ ಹೋರಾಟ 15ನೇ ದಿನಕ್ಕೆ ಕಾಲಿಟ್ಟಿದೆ. ನಿರ್ಮಾಪಕರ ಹಕ್ಕುಗಳಿಗಾಗಿ ಹೋರಾಟ ನಡೆಸ್ತಿದ್ದೀವಿ ಅಂತಿದ್ದಾರೆ ನಿರ್ಮಾಪಕರು. ಅಣ್ಣಾವ್ರು ಹೇಳಿದಂತೆ ಅನ್ನದಾತ ನಿರ್ಮಾಪಕನ ಮಾತಿಗೆ ಬೆಲೆ ಕೊಡ್ಬೇಕು ಅಂತಿದ್ದಾರೆ ಹೋರಾಟದ ಹಾದಿ ಹಿಡಿದಿರೋ ನಿರ್ಮಾಪಕರು.
ದಿನಕ್ಕೆ ಮೂರು ಮಂದಿ ಸದಸ್ಯರಂತೆ ಸತತವಾಗಿ ಐದು ದಿನಗಳಿಂದ ಸರಣಿ ಉಪವಾಸ ನಡೀತಿದೆ. "ಸ್ಟಾರ್ ನಟರು ಮತ್ತು ಕಲಾವಿದರು ನಿರ್ಮಾಪಕರ ಮನವಿಗಳಿಗೆ ಸ್ಪಂದಿಸುತ್ತಿಲ್ಲ. ಯಾವ ಮನರಂಜನಾ ವಾಹಿನಿಗಳು ಸಿನಿಮಾ ಕೊಳ್ಳಲು ಹಿಂದೇಟು ಹಾಕುತ್ತಿವೆಯೋ ಅದೇ ಮನರಂಜನಾ ವಾಹಿನಿಗಳಲ್ಲಿ ಕಾರ್ಯಕ್ರಮ ಹೋಸ್ಟ್ ಮಾಡೋ ಮೂಲಕ ಚಿತ್ರರಂಗದ ಬೆನ್ನಿಗೆ ಚೂರಿ ಹಾಕ್ತಿದ್ದಾರೆ" ಅಂತ ದೂರುತ್ತಿದ್ದಾರೆ.
"ಇಂತಹ ಶೋಗಳಿಂದ ಹಿಂದೆ ಬರ್ಬೇಕು. ಇಂತಹ ಶೋಗಳಿಂದ ಸಿನಿಪ್ರೇಮಿಗಳು ಚಿತ್ರರಂಗದತ್ತ ಮುಖ ಮಾಡುತ್ತಿಲ್ಲ. ಅದ್ರಲ್ಲೂ ಆರು ಗಂಟೆ ನಂತರದ ಸಿನಿಮಾ ಶೋಗಳೇ ನಿರ್ಮಾಪಕನ ಜೇಬು ತುಂಬಿಸೋದು. ಆ ಶೋಗಳೇ ಖಾಲಿ ಹೊಡೀತಿದ್ದು, ಸ್ಟಾರ್ ನಟರು ಕಿರುತೆರೆಗೆ ಕಾಲಿಟ್ಟು ಉಪ್ಪು ತಿಂದ ಮನೆಗೆ ಎರಡು ಬಗೀತಿದ್ದಾರೆ" ಅನ್ನೋದು ಧರಣಿ ನಿರತ ನಿರ್ಮಾಪಕರ ವಾದ.. ಆದ್ರೆ ಇದ್ರ ಹಿಂದಿರೋ ಲೆಕ್ಕಾಚಾರವೇ ಬೇರೆ..

ಡಬ್ಬಿಂಗ್ ಪರ ನಿಂತಿರುವ ನಿರ್ಮಾಪಕರು
ಈಗ ಪ್ರತಿಭಟನೆಗಿಳಿದಿರೋ ಅಷ್ಟೂ ನಿರ್ಮಾಪಕರು ಡಬ್ಬಿಂಗ್ ಪರ ನಿಂತ ನಿರ್ಮಾಪಕರೇ. ಈ ಹಿಂದೆ ಡಬ್ಬಿಂಗ್ ಪರ ಹೋರಾಟಗಳಲ್ಲಿ ಈ ನಿರ್ಮಾಪಕರೇ ಗಟ್ಟಿಯಾಗಿ ಧನಿ ಮಾಡಿದ್ದು.

ಡಬ್ಬಿಂಗ್ ಮಾಡೋಕೆ ತುದಿಗಾಲಲ್ಲಿ
ಸದಾ ನಿರ್ಮಾಪಕರ ಹಿತ ಬಯಸುವ ನಿರ್ಮಾಪಕರ ಸಂಘದ ಅಧ್ಯಕ್ಷ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಡಬ್ಬಿಂಗ್ ಪರವಾಗಿದ್ದಾರೆ. ಹಾಗಾಗಿ ಅವ್ರ ಹಿಂದಿರೋ ಅಷ್ಟೂ ನಿರ್ಮಾಪಕರು ಡಬ್ಬಿಂಗ್ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರೆ.

5ರಿಂದ 8 ಕೋಟಿ ಸಂಭಾವನೆ ಯಾರು ಕೊಡ್ತಾರೆ
ಸ್ಯಾಂಡಲ್ವುಡ್ನ ಸ್ಟಾರ್ ನಟರು 5ರಿಂದ 8 ಕೋಟಿ ಸಂಭಾವನೆ ಕೇಳ್ತಾರೆ. ಈ ಹಣದಲ್ಲಿ 5ರಿಂದ 8 ಸಿನಿಮಾಗಳನ್ನ ಕನ್ನಡಕ್ಕೆ ಡಬ್ ಮಾಡಬಹುದು ಇದ್ರಿಂದ ನಿರ್ಮಾಪಕನಿಗೆ ಕೋಟಿ ಕೋಟಿ ಹಣ ಲಾಭವಾಗುತ್ತೆ ಅನ್ನೋ ಲೆಕ್ಕಚಾರ ನಿರ್ಮಾಪಕರದ್ದು.

ಸ್ಟಾರ್ ನಟರ ಸಿನಿಮಾಗಳಿಗೆ ಸೆಡ್ಡು
ಈ ಮೂಲಕ ಹೆಚ್ಚು ಸಂಭಾವನೆ ಕೇಳೋ ಸ್ಟಾರ್ ನಟರಿಗೆ ಸೆಡ್ಡು ಹೊಡೆಯೋ ಲೆಕ್ಕಚಾರ ನಿರ್ಮಾಪಕರದ್ದು, ಈ ಮೂಲಕ ಡಬ್ಬಿಂಗ್ ಶುರು ಮಾಡೋಕೆ ಪೂರಕವಾಗಿ ಈ ಪ್ರತಿಭಟನೆ ಶುರುವಾಗಿದೆ.

ಕಲಾವಿದರು ಒಪ್ಪದಿದ್ರೆ ಡಬ್ಬಿಂಗ್
ನಿರ್ಮಾಪಕರ ಈ ಬೇಡಿಕೆಗಳಿಗೆ ಕಲಾವಿದರು ಒಪ್ಪದಿದ್ರೆ ಡಬ್ಬಿಂಗ್ ಮಾಡೋ ಮೂಲಕ ಪರಭಾಷಾ ಸಿನಿಮಾಗಳನ್ನ ಕನ್ನಡಕ್ಕೆ ಹರಿಸೋಕೆ ದೊಡ್ಡ ಮಟ್ಟಿನ ತಯಾರಿ ನಡೆದಿದೆ. ಈ ಬಾರಿ ಪ್ರತಿಭಟನೆಯ ತೀವ್ರಗೊಳಿಸಿರುವ ಹಿಂದಿರೋದು ಇದೇ ಕಾರಣ ಅನ್ನೋದು ಸತ್ಯ ಅಂತಿದೆ ನಿರ್ಮಾಪಕರ ಮೂಲಗಳ ಮಾಹಿತಿ.

ಹತ್ತಾರು ಸಿನಿಮಾಗಳು ರೆಡಿ
ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ಪವನ್ ಕಲ್ಯಾಣ್ ಮಹೇಶ್ ಬಾಬುರಂತಹಾ ಸೂಪರ್ಸ್ಟಾರ್ಗಳ ಸಿನಿಮಾಗಳು ಕನ್ನಡ ನಿರ್ಮಾಪಕರ ತೆಕ್ಕೆಯಲ್ಲಿದ್ದು ಡಬ್ಬಿಂಗ್ ಅವಕಾಶ ಸಿಕ್ರೆ ತೆರೆಗಪ್ಪಳಿಸೋದು ಖಂಡಿತ. ಈ ಮೂಲಕ ಕನ್ನಡದ ಹೆಚ್ಚು ಸಂಭಾವನೆ ಕೇಳೋ ಸ್ಟಾರ್ಗಳನ್ನ ಮೂಲೆಗುಂಪು ಮಾಡೋದು ಪಕ್ಕಾ ಅಂತಿದ್ದಾರೆ ನಿರ್ಮಾಪಕರು.

ಸಣ್ಣ ಸಿನಿಮಾಗಳನ್ನೂ ಕೊಂಡುಕೊಳ್ಳಿ
ಈಗ ಕಿರುತೆರೆಯಲ್ಲಿ ಮಿಂಚೋ ಸೂಪರ್ಸ್ಟಾರ್ಗಳು ಸ್ಟಾರ್ಗಳ ಸಿನಿಮಾ ಮಾತ್ರ ಮನರಂಜನಾ ವಾಹಿನಿಗಳಿಂದ ಸ್ಯಾಟಲೈಟ್ ಹಕ್ಕು ಪಡ್ಕೋತಿವೆ. ಆದ್ರೆ ಬಾಕಿ ಇರೋ 300ಕ್ಕೂ ಹೆಚ್ಚು ಸಣ್ಣಪುಟ್ಟ ಸಿನಿಮಾಗಳು ಸೇಲಾದ್ರೆ ಸಾಕು ಅನ್ನೋದು ನಿರ್ಮಾಪಕರ ಬೇಡಿಕೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications