ಬೆಂಗಳೂರಿನ ಈ ರಸ್ತೆಯಲ್ಲಿ ಹೊಸ ಫ್ಲೈ ಓವರ್ ನಿರ್ಮಾಣ

ಬೆಂಗಳೂರು, ಫೆಬ್ರವರಿ 18 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ ಮತ್ತೊಂದು ಫ್ಲೈ ಓವರ್ ನಿರ್ಮಿಸುವ ಪ್ರಸ್ತಾವನೆ ಸಿದ್ಧಪಡಿಸಿದೆ. ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿ ನೂತನ ಫ್ಲೈ ಓವರ್ ನಿರ್ಮಾಣವಾಗಲಿದೆ.

ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿ 8 ಕಿ.ಮೀ ಸಿಗ್ನಲ್ ರಹಿತ ಕಾರಿಡಾರ್ ನಿರ್ಮಾಣದ ಭಾಗವಾಗಿ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ. ರಾಜಾಜಿನಗರ ಇಂಡಸ್ಟ್ರಿಯಲ್ ಟೌನ್‌ ಸಂಪರ್ಕಿಸುವಂತೆ 112 ಕೋಟಿ ವೆಚ್ಚದ ಯೋಜನಾ ವರದಿ ತಯಾರಿಸಲಾಗಿದೆ.

ಬಿಬಿಎಂಪಿ ಈಗಾಗಲೇ ಸಿಗ್ನಲ್ ರಹಿತ ಕಾರಿಡಾರ್ ಯೋಜನೆಯಡಿ ಮಂಜುನಾಥ ನಗರ ಫ್ಲೈ ಓವರ್ ನಿರ್ಮಾಣ ಮಾಡಿದೆ. ಯೋಜನೆಯ ಪ್ರಾಥಮಿಕ ವರದಿ ಸಿದ್ಧವಾಗಿದೆ. ಡಿಪಿಆರ್ ಸಿದ್ಧವಾದ ತಕ್ಷಣ ಟೆಂಡರ್ ಕರೆಯಲಾಗುತ್ತದೆ.

West of Chord Road to get new flyover

ನಗರೋತ್ಥಾನ ಯೋಜನೆಯಡಿ ಬಿಬಿಎಂಪಿ ಮತ್ತು ಕರ್ನಾಟಕ ಸರ್ಕಾರ ಜಂಟಿಯಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. 72ನೇ ಕ್ರಾಸ್‌ನಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ.

2018ರ ಆಗಸ್ಟ್‌ನಲ್ಲಿ ಮಂಜುನಾಥ ನಗರ ಫ್ಲೈ ಓವರ್ ಉದ್ಘಾಟನೆಗೊಂಡಿತ್ತು. ಬಸವೇಶ್ವರ ನಗರ 1ನೇ ಮುಖ್ಯರಸ್ತೆ ಫ್ಲೈ ಓವರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 8 ಕಿ.ಮೀ. ಮಾರ್ಗದಲ್ಲಿ ಒಟ್ಟು ನಾಲ್ಕು ಫ್ಲೈ ಓವರ್ ನಿರ್ಮಾಣವಾಗಲಿದ್ದು, ಬಳಿಕ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+