ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಮಧುರ ವಾರಾಂತ್ಯಕ್ಕಾಗಿ ಬೆಂಗಳೂರಿನಲ್ಲಿ ವಿನೂತನ ಕಾರ್ಯಕ್ರಮ

|
Google Oneindia Kannada News

ಬೆಂಗಳೂರು, ಜೂನ್ 21: ವಾರಪೂರ್ತಿ ಆಫೀಸು, ಕೆಲಸ, ತಲೆಬಿಸಿ, ಒತ್ತಡ ಎನ್ನುತ್ತಲೇ ಕಾಲಕಳೆದ ಬೆಂಗಳೂರಿನ ಜನರಿಗೆ ಈ ವಾರಾಂತ್ಯದಲ್ಲಿ ಕೊಂಚ ನಿರಾಳತೆ ನೀಡಲು, ಸುಮಧುರ ಅನುಭವ ನೀಡಲು ಬೆಂಗಳೂರಿನ ಮಹದೇವಪುರದಲ್ಲಿರುವ ಫಿನಿಕ್ಸ್ ಮಾಲ್ ಸಜ್ಜಾಗಿದೆ. ಅದಕ್ಕೆಂದೇ ಜೂನ್ 23 ಶುಕ್ರವಾರದಿಂದ ಜೂನ್ 25 ಶನಿವಾರ, ಸಂಜೆ 6 ಗಂಟೆಯಿಂದ ರಾತ್ರಿ 9ರವರೆಗೆ ವಿವಿಧ ಮನರಂಜನೀಯ ಕಾರ್ಯಕ್ರಮ ನೀಡಲು ಮುಂದಾಗಿದೆ.

ಭಾರತದ ಪ್ರಸಿದ್ಧ ಪಿಟಿಲು ವಾದಕ ಅನೀಶ್ ವಿದ್ಯಾಶಂಕರ್ ಪಿಟಿಲು ವಾದನವನ್ನು ಜೂನ್ 23 ಮತ್ತು 25 ರಂದು ಹಮ್ಮಿಕೊಳ್ಳಲಾಗಿದ್ದು, ಸಹೃದಯರು ಪಾಲ್ಗೊಳ್ಳಬಹುದು.

ವೈರ್ ಲೆಸ್ ವಾಕಿಂಗ್ ವಯೋಲಿನಿಸ್ಟ್ ಎಂದೇ ಪ್ರಸಿದ್ಧಿ ಪಡೆದ ಅನೀಶ್ ನಮ್ಮ ಬೆಂಗಳೂರು ಮೂಲದವರು ಎಂಬುದು ಮತ್ತೊಂದು ಹೆಮ್ಮೆಯ ವಿಷಯ. ಇಲ್ಲಿನ ಆರ್ ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಪದವಿ ಪಡೆದ ಅನೀಶ್ ತಾಯ್ನೆಲದಲ್ಲಿ ಪಿಟಿಲು ವಾದನ ಮಾಡುತ್ತಿರುವುದು ಮತ್ತಷ್ಟು ಹುರುಪು ಮೂಡಿಸಿದೆ.

ಯೋಗದಿನದಲ್ಲಿ ಮಿಂದೆದ್ದ ಉದ್ಯಾನ ನಗರಿ ಬೆಂಗಳೂರುಯೋಗದಿನದಲ್ಲಿ ಮಿಂದೆದ್ದ ಉದ್ಯಾನ ನಗರಿ ಬೆಂಗಳೂರು

ಪ್ರಸಿದ್ಧ ಸಿನೆಮಾ ತಾರೆಯರು, ದೇಶ-ವಿದೇಶದ ಗಣ್ಯಾತಿಗಣ್ಯ ನಾಯಕರುಗಳನ್ನೂ ತಮ್ಮ ಅಭಿಮಾನಿಗಳನ್ನಾಗಿ ಮಾಡಿಕೊಂಡಿರುವ ಅನೀಶ್ , ಆರು ವರ್ಷವಿರುವಾಗಿನಿಂದಲೇ ವಯೋಲಿನ್ ವಾದನ ಮಾಡುತ್ತಿರುವವರು. ಇದುವರೆಗೂ 23 ದೇಶಗಳಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆಯೂ ಇವರ ಮೇಲಿದೆ.

ಗೆರೆ ದಾಟಿದರೆ ಅನಾಹುತವಾದೀತು, ಪೊಲೀಸರ ವಿನೂತನ ಟ್ವೀಟ್!ಗೆರೆ ದಾಟಿದರೆ ಅನಾಹುತವಾದೀತು, ಪೊಲೀಸರ ವಿನೂತನ ಟ್ವೀಟ್!

ತಂದೆಗೆ ಕೀರ್ತಿ ತಂದ ಮಗ

ತಂದೆಗೆ ಕೀರ್ತಿ ತಂದ ಮಗ

ಆರು ವರ್ಷ ವಯಸ್ಸಿನಿಂದಲೇ ವಯೋಲಿನ್ ವಾದನ ಆರಂಭಿಸಿದ ಅನೀಶ್, ಪ್ರಖ್ಯಾತ ವಯೋಲಿನ್ ವಾದಕ ಎಸ್.ಆರ್.ವಿದ್ಯಾಶಂಕರ್ ಅವರ ಪುತ್ರ. ದೇಶ-ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿ, ವಿಶ್ವ ಪ್ರಸಿದ್ಧ ವಯೋಲಿನ್ ವಾದಕರಾಗಿ ತಂದೆಯ ಹೆಸರಿಗೆ ಮತ್ತಷ್ಟು ಕೀರ್ತಿ ತರುವ ಕೆಲಸ ಮಾಡುತ್ತಿದ್ದಾರೆ.

ಡ್ರಮ್ ಜ್ಯಾಂ!

ಡ್ರಮ್ ಜ್ಯಾಂ!

ಡ್ರಮ್ ನುಡಿಸುವಲ್ಲಿ ಪರಿಣಿತಿ ಪಡೆದ ಆಫ್ರೋ ಡಿ ಏಷ್ಯಾ ತಂಡದ ಡಾ. ಶ್ಯಾಂ ರಾಕ್, ಎಮ್ಯುನಲ್ ಅವುಕು, ಜಾರ್ಜ್ ಅಬ್ಬಾನ್, ಸ್ಯಾನ್ ಪಾಂಥರ್ ಈ ನಾಲ್ವರು ಜೂನ್ 24 ಶನಿವಾರದಂದು ಡ್ರಮ್ ನುಡಿಸಿ, ಹಾಡಿ, ಕುಣಿದು, ಪ್ರೇಕ್ಷಕರನ್ನೂ ಹಾಡಿ-ಕುಣಿಯುವಂತೆ ಮಾಡಲಿದ್ದಾರೆ.

ಹೈವೆ 69

ಹೈವೆ 69

2012 ರಲ್ಲಿ ಹುಟ್ಟಿಕೊಂಡ ಹೈವೆ 69 ತಂಡ ಸಹ ರಾಕ್ ಸಾಂಗ್ ಗಳ ಮೂಲಕ ಜನರಿಗೆ ವಾರಾಂತ್ಯದ ಸವಿ ಉಣಬಡಿಸಲಿದೆ. ವಯಸ್ಸಿನ ಭೇದ ಮರೆತು, ಎಲ್ಲ ವಯಸ್ಸಿನ ಜನರನ್ನೂ ಒಂದೇ ಸೂರಿನಡಿ ಸೇರಿಸಿ, ಮನರಂಜನೆ ನೀಡುವ ಗುರಿ ಈ ಕಾರ್ಯಕ್ರಮದ್ದು.

ಫಿನಿಕ್ಸ್ ಮಾಲ್ ನಲ್ಲಿ ವಾರಾಂತ್ಯ

ಫಿನಿಕ್ಸ್ ಮಾಲ್ ನಲ್ಲಿ ವಾರಾಂತ್ಯ

ಕಲಾರಸಿಕರಿಗೆ, ಸಹೃದಯ ಸಂಗೀತ ಪ್ರೇಮಿಗಳಿಗಾಗಿ ಬೆಂಗಳೂರಿನ ಮಹದೇವಪುರದ, ವೈಟ್ ಫೀಲ್ಡ್ ಮುಖ್ಯರಸ್ತೆಯಲ್ಲಿರುವ ಫಿನಿಕ್ಸ್ ಮಾಲ್ ನಲ್ಲಿ ಈ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 23 ರಿಂದ 25 ರವರೆಗೆ, ಸಂಜೆ 6 ಗಂಟೆಯಿಂದ ರಾತ್ರಿ 9ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸಹೃದಯರು ಭಾಗವಹಿಸಬಹುದು.

English summary
Weekend Musical Galore will be held on 23rd to 25th June, 6 pm to 9 pm at Phoenix Marketcity Mall, Bengaluru. World famous Wireless walking violinist, Bengaluru's Aneesh Vidyashankar Aneesh Vidhyashankar will play violin and some more programmes also will be there. Interested can attend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X