ಬೆಂಗಳೂರಲ್ಲಿ ಮಾಸ್ಕ್ ಹಾಕಿಕೊಳ್ಳೋದು ಕಡ್ಡಾಯ; ತಪ್ಪಿದರೆ ದಂಡ
ಬೆಂಗಳೂರು, ಮೇ 01 : ಬಹೃತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ನಗರದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಮಾಸ್ಕ್ ಹಾಕಿಲ್ಲದಿದ್ದಲ್ಲಿ ಮೊದಲ ಬಾರಿಗೆ 1 ಸಾವಿರ ರೂ. ದಂಡ ಹಾಕಲು ಅನುಮತಿ ನೀಡಲಾಗಿದೆ.
ಶುಕ್ರವಾರ ಈ ಕುರಿತು ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಮಾಹಿತಿ ನೀಡಿದರು. "ನಗರದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಉಗುಳುವುದು, ಎಲ್ಲೆಂದರಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ದಂಡ ಹಾಕಲಾಗುತ್ತದೆ" ಎಂದರು.
ಲಾಕ್ ಡೌನ್ ; ವಲಸೆ ಕಾರ್ಮಿಕರ ನೆರವಿಗೆ ನಿಂತ ಬಿಬಿಎಂಪಿ
ಮಾಸ್ಕ್ ಹಾಕದೇ ಸಂಚಾರ ನಡೆಸಿದರೆ ಮೊದಲ ಬಾರಿಗೆ 1000, 2ನೇ ಬಾರಿಗೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಬಿಬಿಎಂಪಿಯ ಮಾರ್ಷಲ್‌ಗಳಿಗೆ ದಂಡ ವಿಧಿಸುವ ಅಧಿಕಾರವನ್ನು ನೀಡಲಾಗಿದೆ ಎಂದು ಪಾಲಿಕೆಯ ಪ್ರಕಟಣೆ ಹೇಳಿದೆ.
ಬೆಂಗಳೂರು ಲಾಕ್: ವಲಸೆ ಕಾರ್ಮಿಕರ ಬದುಕಿಗೆ ಎಐಎಫ್ಓ ಆಶಾಕಿರಣ
ಸಾರ್ವಜನಿಕ ಸ್ಥಳದಲ್ಲಿ ಮತ್ತು 5ಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಪ್ರದೇಶದಲ್ಲಿ ಬಾಯಿ ಮತ್ತು ಮೂಗು ಮುಚ್ಚುವಂತೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಯಾವುದಾದರೂ ಕಚೇರಿಗಳು ಇದನ್ನು ಪಾಲಿಸದಿದ್ದಲ್ಲಿ ದಂಡ ಹಾಕಲಾಗುತ್ತದೆ, ಪ್ರಕರಣ ದಾಖಲು ಮಾಡಲಾಗುತ್ತದೆ.
ಪಿಪಿಇ ಕಿಟ್ ಉತ್ಪಾದನೆ; ದೇಶಕ್ಕೆ ಮಾದರಿಯಾದ ಬೆಂಗಳೂರು
ಬಳಸಿದ ಮಾಸ್ಕ್‌ಗಳನ್ನು ಸರಿಯಾಗಿ ಸೀಲ್ ಮಾಡಿ ಕಸ ಸಂಗ್ರಹ ಮಾಡುವವರಿಗೆ ನೀಡಿ. ಸರಿಯಾಗಿ ಮಾಸ್ಕ್ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿ ಬಿಸಾಕಿದರೆ ಸಹ ದಂಡ ಹಾಕಲಾಗುತ್ತದೆ. ಶುಕ್ರವಾರದಿಂದ ಈ ನಿಯಮ ಜಾರಿಗೆ ಬಂದಿದೆ.
ಎಲ್ಲೆಂದರಲ್ಲಿ ಉಗುಳುವುದು ಮಲ, ಮೂತ್ರ ವಿಸರ್ಜನೆ ಮಾಡುವುದನ್ನು ಸಾರ್ವಜನಿಕ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ.
ಬಿಬಿಎಂಪಿ ಮೇಯರ್ ಟ್ವೀಟ್
MASK UP or PAY FINE!
— M Goutham Kumar (@BBMP_MAYOR) May 1, 2020
- Wearing of facial mask is now compulsory in public place & in any working space with more than 5 people
- Used facial masks & gloves should be disposed of properly
- Spitting, urinating, littering in public will be considered as offence.
More details👇 pic.twitter.com/JRYMu3TLVw