ರೋಷನ್ ಬೇಗ್ ಹೇಳಿಕೆಗೆ ಕಾಂಗ್ರೆಸ್ಸಿಗರು ಫುಲ್ ಗುಸ್ಸಾ: ಕೋಳಿ, ಕಬಾಬ್ ಏನಿದು?
ಬೆಂಗಳೂರು, ಮೇ 21: ಪಕ್ಷದ ಮತ್ತು ಪಕ್ಷದ ಮುಖಂಡರ ವಿರುದ್ದ ಹೇಳಿಕೆ ನೀಡಿದ ಹಿರಿಯ ಮುಖಂಡ, ಶಿವಾಜಿನಗರ ಶಾಸಕ ರೋಷನ್ ಬೇಗ್ ವಿರುದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸಚಿವ ಎಂಟಿಬಿ ನಾಗರಾಜ್ ಕಿಡಿಕಾರಿದ್ದಾರೆ.
ಇಡೀ ಅಲ್ಪಸಂಖ್ಯಾತ ಸಮುದಾಯವನ್ನು ರೋಷನ್ ಬೇಗ್ ಮಾತ್ರ ಪ್ರತಿನಿಧಿಸುತ್ತಿಲ್ಲ, ಅವರಿಗೆ ಸಚಿವ ಸ್ಥಾನ ಕೊಡದಿದ್ದರೆ ಅದು ಹೇಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಮೋಸ ಮಾಡಿದ ಹಾಗಾಗುತ್ತದೆ ಎಂದು ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಎಕ್ಸಿಟ್ ಪೋಲ್ ಬಗ್ಗೆ ಬೇಗ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ದಿನೇಶ್, ಇನ್ನು ಕೋಳಿನೇ ಹುಟ್ಟಿಲ್ಲ, ಆಗಲೇ, ರೋಷನ್ ಬೇಗ್ ಕಬಾಬ್ ತಿನ್ನೋಕೆ ಹೋಗಿದ್ದಾರೆಂದು ಎಂದು ಲೇವಡಿ ಮಾಡಿದ್ದಾರೆ.

ಅವರೂಬ್ಬರು ಹಿರಿಯ ರಾಜಕಾರಣಿ, ತಮ್ಮದೇ ಪಕ್ಷದ ಬಗ್ಗೆ ಈ ರೀತಿ ಮಾತನಾಡಬಾರದಿತ್ತು. ಇದೊಂದು ಅವಕಾಶವಾದಿ ರಾಜಕಾರಣ . ಸೂಕ್ತ ಸಮಯದಲ್ಲಿ ಅವರ ವಿರುದ್ದ ಶಿಸ್ತಿನ ಕ್ರಮ ತೆಗೆದುಕೊಳ್ಲಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇನ್ನೊಂದೆಡೆ, ಸಿದ್ದರಾಮಯ್ಯನವರ ಸರಕಾರವಿದ್ದಾಗ ರೋಷನ್ ಬೇಗ್ ಸಚಿವರಾಗಿದ್ದರು. ಅಧಿಕಾರ ಅನುಭವಿಸಿ ಈಗ ಸಿದ್ದರಾಮಯ್ಯನವರ ವಿರುದ್ದ ಹೇಳಿಕೆ ನೀಡುವುದು ಸರಿಯಲ್ಲ. ಅವರು ಪಕ್ಷ ಬಿಟ್ಟು ಹೋಗುವುದಿದ್ದರೆ ಹೋಗಲಿ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
Karnataka Pradesh Congress Committee chief Dinesh Gundu Rao on Roshan Baig: It's unbecoming of a politician of his stature to be speaking like this, it ranks of pure political opportunism. We will take required action when the time is right. pic.twitter.com/SnMjMOB9FD
— ANI (@ANI) May 21, 2019
ಕೆಪಿಸಿಸಿ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಒಬ್ಬ 'ಬಫೂನ್', ಸಿದ್ದರಾಮಯ್ಯ ಸೊಕ್ಕಿನ ಮನುಷ್ಯ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾದರೆ, ಅದಕ್ಕೆ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರೇ ಕಾರಣ ಎನ್ನುವ ಹೇಳಿಕೆಯನ್ನು ರೋಷನ್ ಬೇಗ್ ನೀಡಿದ್ದರು.












Click it and Unblock the Notifications