ರಂಗಶಂಕರದಲ್ಲಿ 'ಮಾಗಡಿ ಡೇಸ್' ನೋಡಿ ಆನಂದಿಸಿ

ಬೆಂಗಳೂರು, ಏಪ್ರಿಲ್ 30: ಅಮೆರಿಕಾದ ಕ್ಯಾಲಿಫೋರ್ನಿಯಾ ಹಾಗು ಭಾರತದ ವಿವಿಧೆಡೆ ಪ್ರದರ್ಶನ ಕಂಡ ಬಳಿಕ 'ಮಾಗಡಿ ಡೇಸ್; ಮತ್ತೊಮ್ಮೆ ಬೆಂಗಳೂರಿನಲ್ಲಿ ಪ್ರದರ್ಶನವಾಗುತ್ತಿದೆ.

ವಿಮೂವ್ ಥೀಯೇಟರ್ ತಂಡದ, 'ಮಾಗಡಿ ಡೇಸ್' ನಾಟಕವನ್ನು ಮೇ 3ರಂದು ರಂಗಶಂಕರದಲ್ಲಿ ಪ್ರದರ್ಶಿಸುತ್ತಿದೆ. ಅಭಿಷೇಕ್ ಅಯ್ಯಂಗಾರ್ ಈ ನಾಟಕವನ್ನು ಬರೆದು ನಿರ್ದೇಶನ ಮಾಡಿದ್ದಾರೆ.

We Move Magadi days Kannada Play at Rangashankara

ಮಾಗಡಿ ಡೇಸ್ : ಕಲಾವಿದರಿಗ್ಯಾಕೆ ರಾಜಕೀಯ ? ಅನ್ನೋ ಪ್ರಶ್ನೆಗೆ ಸರಳ ಉತ್ತರ, ಸಾಮಾಜಿಕ ಕಳಕಳಿಯಷ್ಟೇ , ಮತ್ಯಾವ ಉದ್ದೇಶವೂ ಎಲ್ಲ ಎನ್ನುವ ವಿಮೂವ್ ಥೀಯೇಟರ್ ನ ಈ ನಾಟಕ ಯಾವುದೇ ಪಕ್ಷ ಅಥವಾ ಸಂಘಟನೆಯ ಪರ ಅಥವಾ ವಿರೋಧವಾಗಿಲ್ಲ. ಇದು ಬರಹಗಾರನ ಒಂದು ಕಾಲ್ಪನಿಕ ಕಥೆಯಾಗಿದ್ದು ಇಂದಿನ ನೈಜ ಜೀವನಕ್ಕೆ ಹಾಗೂ ಪ್ರಸ್ತುತ ರಾಜಕೀಯಕ್ಕೆ ತುಂಬಾ ಹತ್ತಿರವಾಗಿದೆ.

We Move Magadi days Kannada Play at Rangashankara

ಸಾಫ್ಟವೇರ್ ಇಂಜಿನೀಯರ್ 'ಅನಂತ್' ಕೆಲಸ ಬಿಟ್ಟು ರಾಜಕಾರಣ ಸೇರಿ, ಮುಖ್ಯಮಂತ್ರಿಯಾಗಿ 'ಸ್ಪೆಂಡ್ ಲೆಸ್ ಗವೆರ್ಮೆಂಟ್ 'ಅಂತ ಕರೆಸಿಕೊಳ್ಳೋ ಯೋಜನೆಗಳನ್ನು ಜಾರಿಗೊಳಿಸಿ, ನಂತರ ಜನರಿಗೆ ಹತ್ತಿರವಾಗೋ ದೃಷ್ಟಿಯಿ೦ದ ರಾಜಕಾರಣದಲ್ಲಿ 'ಫೇಸ್ ಬುಕ್' ನ ಬಳಕೆ ಕಡ್ಡಾಯಗೊಳಿಸಲು ಹೋಗಿ ಅದರಿಂದ ಆವಾಂತರಗಳಿಗೆ ಸಿಕ್ಕಿಹಾಕಿಕೊಂಡು, ಸರಳವಾಗಿದ್ದ ಮನುಷ್ಯ ನಿಧಾನವಾಗಿ ಇಂದಿನ ರಾಜಕಾರಣಿಗಳಂತೆ 'ಚುನಾವಣೆಗೆ ಮುನ್ನ'ವೇ ಜನರ 'ಬೇಡಿಕೆ'ಗಳನ್ನು ಈಡೇರಿಸುವ ರಾಜಕಾರಣಿಯಾಗಿ ಬದಲಾಗುತ್ತಾನೆ. ಆದರೆ ಆ ಆವಾಂತರಗಳಿಗೆ 'ಅನಂತ' ನೇ ಕಾರಣವೇ ಅಥವಾ ಅನಂತನ ಹಿಂದಿರುವ ಅನೇಕರೇ? ಎನ್ನುವುದು ನಾಟಕದ ಕಥೆ

ನಮ್ಮ ಮೆಟ್ರೋ, ನನ್ನವಳ ಕಾಗದ, ಪಿ.ಎಸ್ ಐ ಡೋಂಟ್ ಲವ್ ಯು, ತತ್ಯನ ಮೋಹ, ಮಾಗಡಿ ಡೇಸ್, ಕಾಕ್ ಟೇಲ್ ಮುಂತಾದ ನಾಟಕಗಳ ಮೂಲಕ ಬೆಂಗಳೂರು, ಮೈಸೂರು, ಚೆನ್ನೈ ಹಾಗೂ ಹೈದರಾಬಾದಿನ ನಾಟಕ ಪ್ರಿಯರ ಮನಸ್ಸಿನಲ್ಲಿ ವಿಮೂವ್ ಥೀಯೇಟರ್ ತಂಡ ಮನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+