Get Updates
Get notified of breaking news, exclusive insights, and must-see stories!

ಇನ್ಮೇಲೆ ಬೆಂಗಳೂರನ್ನು ಗುಂಡಿನಗರವೆಂದು ಕರೆಯಿರಿ!

ಬೆಂಗಳೂರು, ಸೆ. 28 : ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿದಿರುವ ಲೋಕಸತ್ತಾ ಪಕ್ಷ, ನಾಗರಿಕರ ಕೈಕಾಲು ಮುರಿದು ಆಸ್ಪತ್ರೆಗೆ ಸೇರಿಸುತ್ತಿರುವ ಬೆಂಗಳೂರಿನ ರಸ್ತೆ ಕುಖ್ಯಾತ ಗುಂಡಿಗಳ ವಿರುದ್ಧ ಬಸವನಗುಡಿಯ ನ್ಯಾಷನಲ್ ಕಾಲೇಜ್ ವೃತ್ತದಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಭಾರೀ ಪ್ರತಿಭಟನೆ ನಡೆಸಿತು.

"ಬೆಂದಕಾಳೂರಿನ ರಸ್ತೆಗಳ ಮೇಲೆ ವಾಹನ, ಬೆನ್ನು ನೋವು, ಅಪಘಾತಗಳಿಗೆ ಆಹ್ವಾನ", "ಎಲ್ಲಿಗೆ ಪಯಣ ಯಾವುದೋ ದಾರಿ, ಪಾಪ ಸಂಚಾರಿ :-(", "ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ, ರಸ್ತೆಯೊಳು ಗುಂಡಿಯೋ ಗುಂಡಿಯೊಳು ರಸ್ತೆಯೋ", "We love to trek, but not on road" ಮುಂತಾದ ಫಲಕಗಳನ್ನು ಹಿಡಿದುಕೊಂಡಿದ್ದ ಉತ್ಸಾಹಿ ಯುವಕರು ರಸ್ತೆ ದುರಸ್ತಿ ಮಾಡದ ಬಿಬಿಎಂಪಿಗೆ ತಮ್ಮದೇ ಸ್ಟೈಲಿನಲ್ಲಿ ಛೀಮಾರಿ ಹಾಕಿದರು.

ಮಳೆಗಾಲದ ಆರಂಭದಿಂದಲೂ ಪರಿಸ್ಥಿತಿ ಹದಗೆಟ್ಟಿದ್ದು, ನಗರದ ಉಸ್ತುವಾರಿ ವಹಿಸಿರುವ ಸಚಿವರು, ಮಹಾಪೌರರು, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಒಂದುವಾರ, ಹದಿನೈದು ದಿವಸ, ತಿಂಗಳು ಎಂದು ಗಡುವು ನೀಡುತ್ತಲೇ ಬಂದಿದ್ದಾರೆ. ಆದರೆ ಅನೇಕ ಕಡೆ ಗುಂಡಿ ಮುಚ್ಚಿದ್ದರೂ ಮತ್ತೆ ತೆರೆದುಕೊಂದಿರುತ್ತವೆ. ಇದಕ್ಕೆ ಕಾರಣ ಪಾಲಿಕೆಯಲ್ಲಿರುವ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ಎಂದು ಕಿರಣ್ ಕುಮಾರ್ ಕೆ ಎಸ್ ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪಕ್ಷದ ರಾಜ್ಯಾದ್ಯಕ್ಷರಾದ ಡಾ. ಅಶ್ವಿನ್ ಮಹೇಶ್ ರವರು ಮುಖ್ಯಮಂತ್ರಿಗಳು, ಮೇಯರ್ ಹಾಗೂ ಆಯುಕ್ತರಿಗೆ ಪತ್ರ ಬರೆದು ಈ ವಿಷಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಪ್ರಸ್ತುತ, ನಗರದ ರಸ್ತೆಗಳ ಪರಿಸ್ಥಿತಿಯನ್ನು ನೋಡಿದರೆ ನಗರವು ಗುಂಡಿನಗರವಾಗಿರುವುದನ್ನು ಕಂಡು, ಬೆಂಗಳೂರಿಗೆ "ಗುಂಡಿನಗರ" ಎಂದು ಮತ್ತು ಪಾಲಿಕೆಯನ್ನು "ಬೃಹತ್ ಗುಂಡಿನಗರ ಮಹಾನಗರ ಪಾಲಿಕೆ" ಎಂದು 'ಮರು ನಾಮಕರಣ' ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು. ಗುಂಡಿನಗರ ನಾಮಫಲಕವನ್ನು ಡಾ. ಮೀನಾಕ್ಷಿ ಭರತ್, ಶಾಂತಲಾ ದಾಮ್ಲೆ ಮತ್ತು ವನಜಾಂಬ ಅವರಿಂದ ಅನಾವರಣ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕಾರಿ ಸಮಿತಿ ಸದಸ್ಯ ರವಿ ಕೃಷ್ಣಾ ರೆಡ್ಡಿ, ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದರ ಪ್ರತಿಫಲವೇ ಈ ಗುಂಡಿಗಳು. ಗುಂಡಿ ಮುಚ್ಚುವುದರಲ್ಲು ಹಗರಣಗಳೇ ಎದ್ದು ಕಾಣುತ್ತಿವೆ. ಹಾಗು ಪಾಲಿಕೆಯಲ್ಲಿನ ಭ್ರಷ್ಟಾಚಾರ, ಅಕ್ರಮಗಳು ನಿಲ್ಲುವವರೆಗೂ ಮತ್ತು ಉತ್ತಮರು ಪಾಲಿಕೆಯ ಸದಸ್ಯರಾಗುವವರೆಗೂ ನಾವು ಇದೇ ಪರಿಸ್ಥಿತಿಯಲ್ಲಿ ಒದ್ದಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಾಂತಲಾ ದಾಮ್ಲೆ ಮಾತಾನಾಡಿ, "ಪಾಲಿಕೆಯಲ್ಲಿನ ಅವ್ಯವಸ್ಥೆಯಿಂದ ಸಾಮಾನ್ಯ ಜನರು ನರಳುವಂತಾಗಿದೆ. ಪಾಲಿಕೆಯ ಇಂಜಿನಿಯರುಗಳು ರಸ್ತೆ ಇತಿಹಾಸವನ್ನು ಕಾಪಾಡುತ್ತಿಲ್ಲ. ಇದು ಅಕ್ರಮವನ್ನು ಮುಂದುವರಿಸುವ ತಂತ್ರವಾಗಿದೆ. ನಗರದ ಜನತೆಗೆ ಉತ್ತಮ ರಸ್ತೆಗಳನ್ನು ನೀಡುವುದು ಪಾಲಿಕೆಯ ಆದ್ಯ ಕರ್ತವ್ಯ ವಾಗಿದ್ದು, ಇದರಲ್ಲಿ ಪಾಲಿಕೆಯು ದಯನೀಯವಾಗಿ ಸೋತಿದೆ" ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಲೋಕಸತ್ತಾ ಪಕ್ಷದ ಕಾರ್ಯಕರ್ತರು, ಕಾರ್ಯಕಾರಿ ಸಮಿತಿ ಸದಸ್ಯರು, ಬಸವನಗುಡಿ ಕ್ಷೇತ್ರದ ನಾಗರೀಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡಲಾದರೂ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚಿ ಬೆಂಗಳೂರು ನಗರದ ಮಾನ ಕಾಪಾಡುತ್ತಾರೆ ಎಂಬುದು ಪ್ರತಿಭಟನೆಗೆ ಬಂದಿದ್ದವರ ಆಶಯ.

ಬಿಬಿಎಂಪಿ ಈ ಪ್ರತಿಭಟನೆಗೆ ಸ್ಪಂದಿಸುವುದಾ?

ಬಿಬಿಎಂಪಿ ಈ ಪ್ರತಿಭಟನೆಗೆ ಸ್ಪಂದಿಸುವುದಾ?

1990ರಲ್ಲಿ ಗಾರ್ಡನ್ ಸಿಟಿ, 2012ರಲ್ಲಿ ಗಾರ್ಬೇಜ್ ಸಿಟಿ, 2013ರಲ್ಲಿ ಗುಂಡಿ ನಗರ ಎಂದು ಬಿರುದು ಪಡೆದುಕೊಂಡಿರುವ ಬೆಂಗಳೂರಿಗೆ ಬಿಬಿಎಂಪಿ ಗತಕಾಲದ ವೈಭವವನ್ನು ತಂದುಕೊಡುವುದಾ?

ದಾರಿಕಾಣದಾಗಿದೆ ಸಿದ್ರಾಮಣ್ಣನೆ

ದಾರಿಕಾಣದಾಗಿದೆ ಸಿದ್ರಾಮಣ್ಣನೆ

'ದಾರಿಕಾಣದಾಗಿದೆ ಸಿದ್ರಾಮಣ್ಣನೆ' ಈ ಫಲಕವೇ ಬೆಂಗಳೂರಿನ ನಾಗರಿಕರು ಮುಖ್ಯಮಂತ್ರಿ ಸಿದ್ದರಾಮಣ್ಣನವರನ್ನು ಏನು ಬೇಕೆಂದು ಕೇಳುತ್ತಿದ್ದಾರೆ. ನಗರಕ್ಕೆ ಶೋಭೆಯಾಗಿರಬೇಕಾದ ರಸ್ತೆಗಳು, ರಸ್ತೆ ಗುಂಡಿಗಳಿಂದ ತುಂಬಿಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿರುವಂತಿವೆ.

ಬಸವನಗುಡಿಯಲ್ಲಿ ಕೂಗಿದ ಕೂಗು

ಬಸವನಗುಡಿಯಲ್ಲಿ ಕೂಗಿದ ಕೂಗು

ಬಸವನಗುಡಿಯಲ್ಲಿ ಯುವಜನರು ಕೂಗಿದ ಕೂಗು ಕಾರ್ಪೋರೇಷನ್ ನಲ್ಲಿ ಕುಳಿತಿರುವ, ಬಸವನಗುಡಿಯವರೇ ಆದ ಮೇಯರ್ ಕಟ್ಟೆ ಸತ್ಯನಾರಾಯಣ ಅವರನ್ನು ತಲುಪುವುದಾ ಅಥವಾ ವಿಧಾನಸೌಧದ ಮೂರನೇ ಮಹಡಿಯನ್ನು ತಲುಪುವುದಾ?

ಇದು ಲೋಕಸತ್ತಾ ಪಕ್ಷದ ದನಿ ಮಾತ್ರವಲ್ಲ

ಇದು ಲೋಕಸತ್ತಾ ಪಕ್ಷದ ದನಿ ಮಾತ್ರವಲ್ಲ

ಲೋಕಸತ್ತಾ ಪಕ್ಷ ಇಂದು ಪ್ರತಿಭಟಿಸಿರುವುದು ಆ ಪಕ್ಷದ ದನಿ ಮಾತ್ರವಲ್ಲ, ಇದು ಇಡೀ ಬೆಂಗಳೂರಿನ ಜನತೆಯ ಆತಂಕದ ಕೂಗು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ರಸ್ತೆ ಗುಂಡಿಗಳನ್ನು ಮುಚ್ಚಬೇಕಾದ ಜವಾಬ್ದಾರಿ ಬಿಬಿಎಂಪಿ ಮೇಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+