Hebbal Flyover: ಡಿಸಿಎಂ ಜಾಲಿ ರೈಡ್ ಮಾಡಿ ಉದ್ಘಾಟಿಸಿದ ಫ್ಲೈಓವರ್‌ನಿಂದ ಜಲಪಾತದಂತೆ ಸುರಿದ ನೀರು
ಬೆಂಗಳೂರಿನ ಉತ್ತರದ ಹೆಬ್ಬಾಗಿಲು ಎಂದು ಕರೆಸಿಕೊಂಡಿರುವ ಹೆಬ್ಬಾಳ ಮೇಲ್ಸೇತುವೆ ಅತಿ ಹೆಚ್ಚು ಟ್ರಾಫಿಕ್ ಉಂಟಾಗುವ ಜಂಕ್ಷನ್‌ಗಳಲ್ಲಿ ಒಂದು. ಈ ಕಾರಣಕ್ಕಾಗಿ ಇತ್ತೀಚೆಗೆ ಇಲ್ಲಿ 80 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಹೆಬ್ಬಾಳ ಜಂಕ್ಷನ್‌ನಲ್ಲಿ ಕೆ.ಆರ್.ಪುರಂ-ಮೇಖ್ರಿ ವೃತ್ತ ಸಂಪರ್ಕಿಸುವ ನೂತನ ಮೇಲ್ಸೇತುವೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಲೋಕಾರ್ಪಣೆ ಮಾಡಿದ್ದರು. ಈ ಹೆಬ್ಬಾಳದ ಹೊಸ ಮೇಲ್ಸೇತುವೆ ರ‍್ಯಾಂಪ್ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದಾಗಿ ಟ್ರಾಫಿಕ್ ಸಮಸ್ಯೆ ತಗ್ಗಿದರೂ ಜಲಪಾತ ವೀಕ್ಷಿಸುವ ಸೌಭಾಗ್ಯವೂ ಸಾರ್ವಜನಿಕರಿಗೆ ಸಿಕ್ಕಿದೆ.
ಹೌದು, ಒಂದು ಜೋರು ಮಳೆಯಾದರೆ ಇಡೀ ಬೆಂಗಳೂರು ಅಲುಗಾಡುತ್ತೆ. ರಸ್ತೆಗಳಲ್ಲಿ ಗುಂಡಿ ಬಾಯ್ತೆರೆಯುತ್ತವೆ. ಈಗ ಮಳೆಯಿಂದ ಬೆಂಗಳೂರಿನಲ್ಲಿ ಜಲಪಾತಗಳು ಸೃಷ್ಟಿಯಾಗುತ್ತಿವೆ. ಈ ಹಿಂದೆ ಜಾಲಹಳ್ಳಿ ಕ್ರಾಸ್ ಬಳಿ ಇರುವ ಮೇಲ್ಸೇತುವೆಯಿಂದ ಭಾರಿ ಮಳೆಯಿಂದಾಗಿ ನೀರು ಜಲಪಾತದಂತೆ ಸುರಿದಿತ್ತು. ಈಗ ಹೆಬ್ಬಾಳ ಬಳಿ ಉದ್ಘಾಟನೆಗೊಂಡಿರುವ ನೂತನ ಫ್ಲೈಓವರ್‌ನಿಂದಲೂ ಜಲಪಾತದಂತೆ ನೀರು ಸುರಿದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಮೇಲ್ಸೇತುವೆ ಉದ್ಘಾಟನೆಗೂ ಮುನ್ನ ಡಿಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ರೋಡ್‌ಕಿಂಗ್ ಬೈಕ್‌ನಲ್ಲಿ ಜಾಲಿ ರೈಡ್ ಮಾಡಿದ್ದರು. ಫ್ಲೈಓವರ್ ಪರಿಶೀಲಿಸಿ ಅದ್ಧೂರಿಯಾಗಿ ಉದ್ಘಾಟನೆಯೂ ನೆರವೇರಿಸಿದ್ದರು. ಆದರೆ ಟ್ರಾಫಿಕ್ ತಗ್ಗಿತು ಎಂದು ರಿಲೀಫ್ ಆಗುವಷ್ಟರಲ್ಲಿ ಮಳೆ ಕಾಟ ಶುರುವಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಹೆಬ್ಬಾಳದ ಈ ನೂತನ ಫ್ಲೈಓವರ್ ಮೇಲಿಂದ ನೀರು ಜಲಪಾತದಂತೆ ಕೆಳಕ್ಕೆ ಸುರಿದಿದೆ. ಈ ವಿಡಿಯೋ ಹಂಚಿಕೊಂಡಿರುವ ಹಲವರು, ಬ್ರ್ಯಾಂಡ್ ಬೆಂಗಳೂರು ಅಲ್ಲ, ಫಾಲ್ಸ್ ಬೆಂಗಳೂರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
80 ಕೋಟಿ ರೂ. ವೆಚ್ಚದ ಫ್ಲೈಓವರ್
ಇತ್ತೀಚಿನ ಮಳೆಯ ಸಮಯದಲ್ಲಿ ಸುಮಾರು 80 ಕೋಟಿ ರೂ. ವೆಚ್ಚದ 700 ಮೀಟರ್ ಉದ್ದದ ಈ ಫ್ಲೈಓವರ್‌ನ ಹಲವು ಭಾಗಗಳಲ್ಲಿ ನೀರು ಸುರಿಯುತ್ತಿರುವುದು ವಿಡಿಯೋದಲ್ಲಿದೆ. ಫ್ಲೈಓವರ್ ಕೆಳಗೆ ಸಂಚರಿಸುವವರಿಗೆ ಇದು ಅಕ್ಷರಶಃ ಜಲಪಾತದಂತೆಯೇ ಕಾಣುವಂತಿದೆ. ಬೆಂಗಳೂರು ಮಂದಿ ಈಗಾಗಲೇ ಮಳೆಯಿಂದ ಏನೇನೋ ಆಗ್ತಿದೆ, ಈಗ ಇದೊಂದು ಬಾಕಿ ಇತ್ತು ಎಂದು ವ್ಯಂಗ್ಯವಾಡುತ್ತಿದ್ದಾರೆ. ಫ್ಲೈಓವರ್ ನಿರ್ಮಾಣ ಗುಣಮಟ್ಟ ಮತ್ತು ಮಳೆನೀರು ಒಳಚರಂಡಿ ವಿನ್ಯಾಸವನ್ನು ಪ್ರಶ್ನಿಸುತ್ತಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ಹೊಸದಾಗಿ ನಿರ್ಮಿಸಲಾದ ಹೆಬ್ಬಾಳ ಫ್ಲೈಓವರ್ ಲೂಪ್ ನಗರದ ಅತಿ ಹೆಚ್ಚು ಟ್ರಾಫಿಕ್ ಉಂಟಾಗುವ ಈ ಜಂಕ್ಷನ್‌ನಲ್ಲಿ ಸಂಚಾರ ಅಡಚಣೆಗಳನ್ನು ಸುಮಾರು ಶೇ 30ರಷ್ಟು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಕೆ.ಆರ್.ಪುರಂ ಮತ್ತು ಮೇಖ್ರಿ ಸರ್ಕಲ್ ಅನ್ನು ಸಂಪರ್ಕಿಸುವ ಈ ಲೂಪ್, ಕೆಂಪೇಗೌಡ ಏರ್‌ಪೋರ್ಟ್, ಐಟಿ ಕಾರಿಡಾರ್ ಹಾಗೂ ಉತ್ತರದ ಉಪನಗರಗಳಿಂದ ನಗರದ ಮಧ್ಯಭಾಗಕ್ಕೆ ವಾಹನಗಳ ಪ್ರವೇಶಕ್ಕೆ ಅನುಕೂಲ ಕಲ್ಪಿಸಲು ನಿರ್ಮಿಸಲಾಗಿದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications