ಬೆಂಗಳೂರಿಗರೆ ಗಮನಿಸಿ: ಡಿ.26 ರಂದು ಯಾವ ಭಾಗದಲ್ಲಿ ನೀರು ವ್ಯತ್ಯಯ ಎಂದು ತಿಳಿಯಿರಿ
ಬೆಂಗಳೂರು, ಡಿಸೆಂಬರ್ 23: ಬಿಬಿಎಂಪಿ ನಡೆಸುತ್ತಿರುವ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಡಿಸೆಂಬರ್ 26ರಂದು ಇಡಿ ದಿನ ಕುಡಿಯುವ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯವಾಗಲಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನೀರಿನ ಪೈಪ್ ಹಾದು ಹೋಗಿರುವ ಸುರಂಜನ್‌ದಾಸ್ ರಸ್ತೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆ ಜಂಕ್ಷನ್‌ನಲ್ಲಿ ಬಿಬಿಎಂಪಿ ರಸ್ತೆ ಅಂಡರ್‌ಪಾಸ್ ಕಾಮಗಾರಿ ನಡೆಸುತ್ತಿದೆ. ಈ ಕಾರಣದಿಂದ ಸದರಿ ಸ್ಥಳದಲ್ಲಿ 1200 ಎಂಎಂ ವ್ಯಾಸದ ಕಾವೇರಿ ನೀರು ಪೂರೈಕೆ ಮಾಡುವ ಕೊಳವೆಯನ್ನು ಮರು ಜೋಡಣೆ ಮಾಡಬೇಕಿದೆ.
ಹೀಗಾಗಿ ಅಂದು ಸೋಮವಾರ ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆವರೆಗೆ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಕಟಣೆ ತಿಳಿಸಿದೆ.

ನೀರು ವ್ಯತ್ಯಯದ ಸ್ಥಳಗಳು
ನಗರದ ಎಂ.ಪಿ.ಕ್ಯಾಂಪ್, ಕೆ.ಆರ್.ಗಾರ್ಡನ್, ವಿನಾಯಕನಗರ, ಶ್ರೀರಾಂನಗರ ಸ್ಲಂ, ನಂಜಾರೆಡ್ಡಿ ಕಾಲೋನಿ, ಎಸ್.ಆರ್ ಬಡಾವಣೆ, ಏರ್‌ವ್ಯೂ ಕಾಲೋನಿ, ಮಂಜುನಾಥ ಬಡಾವಣೆ, ಇಂದಿರಾನಗರ, ಮೋಟಪ್ಪನಪಾಳ್ಯ, ಅಪ್ಪಾರೆಡ್ಡಿ ಪಾಳ್ಯ, ಡಿಫೆನ್ಸ್ ಕಾಲೋನಿ, ಮೈಕೆಲ್ ಪಾಳ್ಯ, ಎಚ್.ಕಾಲೋನಿ, ಬಿನ್ನಮಂಗಲ ಒಂದನೇ ಹಂತ, ಜಿ.ಎಂ.ಪಾಳ್ಯ, ಕಾವೇರಿ ಬಡಾವಣೆ, ಮಲ್ಲೇಶ್‌ಪಾಳ್ಯ, ಸುದಗುಂಟೆ ಪಾಳ್ಯ, ಕಗ್ಗದಾಸಪುರ, ಹೊಸ ತಿಪ್ಪಸಂದ್ರ, ಎಚ್‌ಎಎಲ್ ಮೂರನೇ ಹಂತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications