ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀಕ್ಷಿಸಿ: ಬೆಂಗಳೂರಿನ ಈ 3 ನಿಲ್ದಾಣಗಳಲ್ಲಿ ಇ-ಬಸ್‌ಗಳಿಗೆ ಚಾರ್ಜ್‌ ವ್ಯವಸ್ಥೆ

|
Google Oneindia Kannada News

ಬೆಂಗಳೂರು ನವೆಂಬರ್ 3: ಬೆಂಗಳೂರು ನಗರದ ರಸ್ತೆಗಳಲ್ಲಿ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ಬಸ್‌ಗಳು ಸಂಚರಿಸುತ್ತಿವೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಬಸ್‌ಗಳನ್ನು ಹೇಗೆ ಚಾರ್ಜ್‌ ಮಾಡಲಾಗುತ್ತದೆ ಎನ್ನುವುದು ನಮಗೆ ತಿಳಿಯದ ಸಂಗತಿ. ಆದರೀಗ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಬಸ್‌ಗಳಿಗೆ ಚಾರ್ಜ್‌ ಹೇಗೆ ಮಾಡಲಾಗುತ್ತದೆ ಎಂದು ತೋರಿಸಲಾಗಿದೆ.

ಎಲೆಕ್ಟ್ರಿಕ್ ಬಸ್‌ಗಳನ್ನು ಮೆಜೆಸ್ಟಿಕ್, ಪುಟ್ಟೇನಹಳ್ಳಿ ಮತ್ತು ಯಲಹಂಕ ಬಸ್ ನಿಲ್ದಾಣಗಳಲ್ಲಿ ಪ್ರತಿದಿನ ಚಾರ್ಜ್ ಮಾಡಲಾಗುತ್ತದೆ. ಯಲಹಂಕ ಬಸ್ ನಿಲ್ದಾಣದಲ್ಲಿ ಈ ಬಸ್‌ಗಳು ಚಾರ್ಜ್ ಆಗುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ವಿಚಾರ: ಪರಿಶೀಲನೆ ಹೊಣೆ NHAIಗೆಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ವಿಚಾರ: ಪರಿಶೀಲನೆ ಹೊಣೆ NHAIಗೆ

ಬೆಂಗಳೂರು ರಸ್ತೆಗಳಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ಚಾಲಿತ ಬಸ್‌ಗಳು ಪ್ರಾರಂಭವಾದಾಗಿನಿಂದ ನಿವಾಸಿಗಳ ಅದರಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಎಲೆಕ್ಟ್ರಿಕ್ ಬಸ್‌ಗಳು ಮೆಜೆಸ್ಟಿಕ್, ಪುಟ್ಟೇನಹಳ್ಳಿ ಮತ್ತು ಯಲಹಂಕ ಬಸ್ ನಿಲ್ದಾಣಗಳಲ್ಲಿ ಪ್ರತಿದಿನ ಚಾರ್ಜ್ ಆಗುತ್ತಿದ್ದು, ಯಲಹಂಕ ಬಸ್ ನಿಲ್ದಾಣದಲ್ಲಿ ಈ ಬಸ್‌ಗಳು ಚಾರ್ಜ್ ಆಗುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇ-ಬಸ್‌ಗಳಿಗೆ ಚಾರ್ಜ್‌ ವ್ಯವಸ್ಥೆ

ವಿಡಿಯೋದಲ್ಲಿ ಬೆಂಗಳೂರು ಮೆಟ್ರೋ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಅಧಿಕಾರಿಗಳು ನಿಲ್ದಾಣಗಳಲ್ಲಿ ಫಾಸ್ಟ್ ಚಾರ್ಜರ್ ಅಳವಡಿಸಿ ಬಸ್‌ಗಳಿಗೆ ಚಾರ್ಜ್ ಮಾಡುತ್ತಿರುವುದು ಕಂಡು ಬರುತ್ತದೆ. ಬಸ್ ಸಂಪೂರ್ಣ ಚಾರ್ಜ್ ಆಗಲು 45 ನಿಮಿಷದಿಂದ 1 ಗಂಟೆ ತೆಗೆದುಕೊಳ್ಳುತ್ತದೆ. ಬಳಿಕ ಬಸ್ 200 ಕಿಲೋಮೀಟರ್ ದೂರ ಓಡಾಡುತ್ತದೆ.

40 ಜನರು ಕುಳಿತುಕೊಳ್ಳುವ ಸಾಮರ್ಥ್ಯ

40 ಜನರು ಕುಳಿತುಕೊಳ್ಳುವ ಸಾಮರ್ಥ್ಯ

ಕಳೆದ ತಿಂಗಳು ಬೆಂಗಳೂರಿನಲ್ಲಿ 100 ಎಲೆಕ್ಟ್ರಿಕ್ ಬಸ್‌ಗಳನ್ನು ಪ್ರಾರಂಭಿಸಲಾಯಿತು. ದೇಶದ ಟೆಕ್ ರಾಜಧಾನಿಯಲ್ಲಿ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಬಸ್ಸುಗಳು ನಾನ್-ಎಸಿ ಮತ್ತು 12 ಮೀಟರ್ ಉದ್ದವಿದ್ದು ಚಾಲಕನನ್ನು ಹೊರತುಪಡಿಸಿ 40 ಜನರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಬಸ್‌ ವೀಲ್‌ಚೇರ್ ಯಾಂತ್ರಿಕತೆಯ ಸೌಲಭ್ಯವನ್ನು ಸಹ ಹೊಂದಿದ್ದು ಅದು ವಿದ್ಯುತ್ ಚಾಲಿತವಾಗಿದೆ. ಈ ಸೌಲಭ್ಯ ಬೆಂಗಳೂರಿನ ದೈಹಿಕ ವಿಕಲಚೇತನ ಪ್ರಯಾಣಿಕರಿಗೆ ಲಭ್ಯವಿರುತ್ತದೆ. ಈ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳು, ಎಲ್‌ಇಡಿ ದೀಪಗಳು ಮತ್ತು ತುರ್ತು ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗಿದೆ. ಬಿಎಂಟಿಸಿ ಈ ಹಿಂದೆ ನಗರಕ್ಕೆ 300 ಎಲೆಕ್ಟ್ರಿಕ್ ಬಸ್‌ಗಳನ್ನು ಘೋಷಿಸಿತ್ತು. ಈ ವರ್ಷ ಸ್ವಾತಂತ್ರ್ಯ ದಿನದಂದು ನಗರದಲ್ಲಿ ಈಗಾಗಲೇ ಎಪ್ಪತ್ತೈದು ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲಾಗಿದೆ.

ವಾಯುಮಾಲಿನ್ಯ ನಿಯಂತ್ರಣಕ್ಕೆ ಇ-ಬಸ್‌ಗಳ ಆಯ್ಕೆ

ವಾಯುಮಾಲಿನ್ಯ ನಿಯಂತ್ರಣಕ್ಕೆ ಇ-ಬಸ್‌ಗಳ ಆಯ್ಕೆ

ಇಂಧನ, ಡೀಸೆಲ್ ಬೆಲೆಗಳು ಪ್ರತಿದಿನ ಹೆಚ್ಚುತ್ತಿವೆ. ನಾವು ನಷ್ಟವನ್ನು ಅನುಭವಿಸುತ್ತಿದ್ದೇವೆ. 2030ರ ವೇಳೆಗೆ ನಮ್ಮ ಎಲ್ಲಾ ಬಸ್‌ಗಳು ಎಲೆಕ್ಟ್ರಿಕ್ ಆಗಬೇಕೆಂದು ನಾವು ಬಯಸುತ್ತೇವೆ. ಇದರಿಂದ ನಾವು ಲಾಭ ಗಳಿಸಲು ಪ್ರಾರಂಭಿಸುತ್ತೇವೆ. ಅದು ನಮ್ಮ ಸಂಕಲ್ಪ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ಇಂಧನ ಬೆಲೆಗಳು ಗಗನಕ್ಕೇರುತ್ತಿದ್ದು, ಕರ್ನಾಟಕದ ವಿವಿಧ ರಸ್ತೆ ಸಾರಿಗೆ ಸಂಸ್ಥೆಗಳ (ಆರ್‌ಟಿಸಿ) ಆರ್ಥಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ ಸಮಿತಿಯು ಕ್ರಮೇಣ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು 50 ಕ್ಕಿಂತ ಹೆಚ್ಚು ಡೀಸೆಲ್ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ನಿವೃತ್ತ ಐಎಎಸ್ ಅಧಿಕಾರಿ ಎಂಆರ್ ಶ್ರೀನಿವಾಸ ಮೂರ್ತಿ ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಿಂದೆ ಸಲ್ಲಿಸಿದ ವರದಿಯಲ್ಲಿ ಪ್ರಸ್ತುತ ತಂತ್ರಜ್ಞಾನದೊಂದಿಗೆ ಇಂಧನ ದಕ್ಷತೆಯನ್ನು ಸುಧಾರಿಸಲು ಕಡಿಮೆ ಅವಕಾಶವಿದೆ. ಆರು ವರ್ಷಗಳ ಅವಧಿಯಲ್ಲಿ (2013-14 ಮತ್ತು 2019-20) ಇಂಧನ ವೆಚ್ಚದಲ್ಲಿ ಹೆಚ್ಚಳವಾಗಿದೆ. 321 ಕೋಟಿ ವೆಚ್ಚವನ್ನು ಇಂಧನಕ್ಕಾಗಿ ಮಾಡಿದೆ. ಇದು ಸಾರಿಗೆ ಸಂಸ್ಥೆಗಳ ವೆಚ್ಚದ 13 ಪ್ರತಿಶತದಷ್ಟಿದೆ ಎಂದು ಸಮಿತಿ ಹೇಳಿದೆ.

ಬಿಎಂಟಿಸಿ ವ್ಯಾಪ್ತಿಯಲ್ಲಿವೆ 6,700 ಬಸ್‌ಗಳು

ಬಿಎಂಟಿಸಿ ವ್ಯಾಪ್ತಿಯಲ್ಲಿವೆ 6,700 ಬಸ್‌ಗಳು

ಕರ್ನಾಟಕದಲ್ಲಿ ಸುಮಾರು 24,000 ಬಸ್‌ಗಳಿದ್ದು, ಇದರಲ್ಲಿ 6,700 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳು ಬೆಂಗಳೂರಿನಲ್ಲಿ ಸಂಚರಿಸುತ್ತಿವೆ. ಪ್ರತಿ ಲಕ್ಷ ಜನಸಂಖ್ಯೆಗೆ 36 ಬಸ್‌ಗಳನ್ನು ಹೊಂದಿರುವ ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಸರ್ಕಾರಿ ಸ್ವಾಮ್ಯದ ಬಸ್‌ಗಳನ್ನು ಹೊಂದಿದೆ. ನಂತರ ಆಂಧ್ರಪ್ರದೇಶ (26.5), ತಮಿಳುನಾಡು (28.4), ಮಹಾರಾಷ್ಟ್ರ (22.8) ಮತ್ತು ಕೇರಳ (16.9) ಪ್ರತಿ ಒಂದು ಲಕ್ಷ ಜನರಿಗೆ ಬಸ್‌ ಹೊಂದಿದೆ.

English summary
Eco-friendly battery operated buses are plying on the roads of Bangalore city and charging arrangements have been made at 3 stations. A video of charging e-buses has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X