ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತ್ಯಾಜ್ಯದಿಂದ ವಿದ್ಯುತ್ ತಯಾರಿ ಘಟಕ: ಅನಂತ ಕುಮಾರ್ ಚಾಲನೆ

|
Google Oneindia Kannada News

ಬೆಂಗಳೂರು, ಜನವರಿ 20 : ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಘಟಕಕ್ಕೆ ಜಯನಗರದ ಯಡಿಯೂರು ವಾರ್ಡ್ ನಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಶನಿವಾರ ಚಾಲನೆ ನೀಡಿದರು.

ಹಸಿ ಮತ್ತು ಒಣಕಸ ತ್ಯಾಜ್ಯದ ಪೈಕಿ 4.5 ಹಸಿ ತ್ಯಾಜ್ಯದಿಂದ 5 ಟನ್ ಸಾಮರ್ಥ್ಯದ ಜೈವಿಕ ಅನಿಲ ಘಟಕದಿಂದ 125 ಮೆಗಾವ್ಯಾಟ್ ವಿದ್ಯುತ್ ತಯಾರಿಸಲಾಗುತ್ತದೆ. ಕೇವಲ ಒಂದು ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ತಯಾರಿಸಲಾಗುತ್ತಿದೆ. ಇದರಿಂದ ಒಂದು ಕೋಟಿ ರೂ. ಆದಾಯ ಬರಲಿದೆ. ಇದೊಂದು ಮಾದರಿ ಪ್ರಯತ್ನವಾಗಿದ್ದು, ದೇಶದ 4 ಸಾವಿರ ನಗರಪಾಲಿಕೆಗಳಲ್ಲಿ ಜಾರಿಗೆ ತರಬಹುದಾಗಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದರು.

Waste management plant functions in Yediyur

ಬೆಂಗಳೂರು ನಗರದಲ್ಲಿ 13 ಕಡೆ ಜೈವಿಕ ವಿದ್ಯುತ್ ಉತ್ಪಾದನಾ ಘಟಕಗಳಿದ್ದು, ಕೆಲವು ಕಡೆ ಸರಿಯಾಗಿ ಇವುಗಳು ಕಾರ್ಯನಿರ್ವಹಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ವಾರ್ಡ್ ಗಳಲ್ಲಿ ಆರಂಭಿಸಲಾಗುವುದು ಎಂದು ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ.

English summary
Waste Management plant started functioning in Yediyur ward of Jayanagar. Union minister Ananthkumar inaugurated the plant. The plant will generate 125 MW power per day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X