BBMP: ಕಾರ್ಮಿಕರಿಗೆ ಬಾಕಿ ಹಣ ನೀಡುವಂತೆ ತ್ಯಾಜ್ಯ ನಿರ್ವಹಣಾ ಸಂಸ್ಥೆ ಅರ್ಜಿ ಸಲ್ಲಿಸಿ ಆಗ್ರಹ
ಬೆಂಗಳೂರು,ಜೂನ್ 02: ಒಂದು ವರ್ಷದಿಂದ ಬಾಕಿ ಬಿಲ್ ಪಾವತಿಯಾಗದ ಹಿನ್ನಲೆಯಲ್ಲಿ ನಗರದ ತ್ಯಾಜ್ಯ ನಿರ್ವಹಣಾ ಸಂಸ್ಥೆಗಳು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಸಿವೆ. ಬಾಕಿ ಹಣ ಬಿಡುಗಡೆಗೆ ಮನವಿ ಮಾಡಿವೆ.
ನಗರದ ತ್ಯಾಜ್ಯ ನಿರ್ವಹಣಾ ಸಂಸ್ಥೆಗಳಿಗೆ ಒಂದು ವರ್ಷದಿಂದ ಬಿಲ್ ಪಾವತಿ ಆಗಿಲ್ಲ. ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳ (ಡಿಡಬ್ಲ್ಯುಸಿಸಿ) ನಿರ್ವಹಣೆಯ ಹೊಣೆ ಹೊತ್ತಿರುವ ತ್ಯಾಜ್ಯ ವಿಲೇವಾರಿ ತೆಗೆಯುವವರು ಮತ್ತು ಸ್ವಸಹಾಯ ಗುಂಪುಗಳಿಗೆ ಬಿಲ್ ಪಾವತಿಸುವ ಬಿಬಿಎಂಪಿ ವಿಫಲವಾಗಿದೆ. ಈ ಕಾರಣಕ್ಕೆ ಸಂಘಟನೆಗಳು ಮೇ 30ರಿಂದ ಮನವಿ ಸಲ್ಲಿಸುತ್ತಿವೆ.

ಆನ್‌ಲೈನ್ ಅರ್ಜಿಗೆ ಲಗತ್ತಿಸಲಾದ ದಾಖಲೆಯು ಬಿಬಿಎಂಪಿಯು 46 ವಾರ್ಡ್‌ಳಲ್ಲಿ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳ ಶ್ರಮಿಕರಿಗೆ 9,41,03,212 ರೂಪಾಯಿ ನೀಡಬೇಕಿದೆ. ಒಟ್ಟು 980 ತಿಂಗಳ ಮೌಲ್ಯದ ಬಾಕಿ ಪಾವತಿ ಉಳಿದಿದೆ. ಈ ಬಾಕಿ ಪಾವತಿಯನ್ನು ಕೂಡಲೇ ನೀಡಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.
ಬಾಕಿ ಬಿಲ್ ಪಾವತಿ ಜೊತೆಗೆ ಎಲ್ಲಾ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳ (DWCC) ವ್ಯಾಪ್ತಿಯ ಶ್ರಮಿಕರಿಗೆ 'ಅಗ್ನಿವಿಮೆ'ಯನ್ನು ಒದಗಿಸಬೇಕು. ಕಾರ್ಮಿಕರಿಗೆ ಸುರಕ್ಷಿತೆ ಭದ್ರತೆ ಒದಗಿಸುವಂತೆ ಆಗ್ರಹಿಸಿದರು. ಬಿಬಿಎಂಪಿ ಮತ್ತು ಈ ಡಿಡಬ್ಲ್ಯೂಸಿಸಿಗಳ ನಿರ್ವಾಹಕರ ನಡುವಿನ ಒಪ್ಪಂದದ ಪ್ರಕಾರ, ಆರು ತಿಂಗಳ ಕಾರ್ಯಾಚರಣೆಗೆ ಒಟ್ಟು ರೂ 56,316 ಮತ್ತು ಬಿಬಿಎಂಪಿಯು ವಿಲೇವಾರಿಗೆ ವಾಹನಗಳನ್ನು ನೀಡದಿದ್ದರೆ ತಿಂಗಳಿಗೆ ರೂ 23,316 ನಿರ್ವಹಣೆಗೆ ಪಾವತಿಸಲು ಸಂಸ್ಥೆಗಳು ಉದ್ದೇಶಿಸಿವೆ.

ತ್ಯಾಜ್ಯ ಮರುಬಳಕೆ ಹಣ ಕೇಂದ್ರಗಳ ನಿರ್ವಹಣೆಗೆ
ತ್ಯಾಜ್ಯ ಸಂಗ್ರಹಣೆ ಕಾರ್ಮಿಕರು ಮೂರನೇ ವ್ಯಕ್ತಿಯ ಸಂಪನ್ಮೂಲ ಸಂಸ್ಥೆಗಳಾದ ಹಸಿರು ದಳ, ಸ್ವಚ್ಛ ಮತ್ತು ಗಿಲ್ಗಲ್‌ಗಳಿಂದ ಬೆಂಬಲವನ್ನು ಪಡೆಯುತ್ತಾರೆ. DWCC ನಿರ್ವಾಹಕರು ಒಣ ತ್ಯಾಜ್ಯವನ್ನು ಮರುಬಳಕೆ ಮಾಡುವವರಿಗೆ ಮಾರಾಟ ಮಾಡುವ ಮೂಲಕ ಹಣ ಸಂಗ್ರಹಿಸುತ್ತಾರೆ. ಇದು ಕೇಂದ್ರಗಳ ನಿರ್ವಹಣೆಗೆ, ಅದರ ಉಳಿವಿಗೆ ನೆರವಾಗುತ್ತದೆ ಎಂದು ಸಂಘಟನೆಗಳು ಮುಖ್ಯಸ್ಥರು ಹೇಳುತ್ತಾರೆ.
ಅರ್ಜಿದಾರರು, ಡಿಡಬ್ಲ್ಯೂಸಿಸಿ ನಿರ್ವಾಹಕರ ಜೊತೆಗೆ ಜೂನ್ 5 ರಂದು ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ. ಈ ಮೂಲಕ ಉಪಮುಖ್ಯಮಂತ್ರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರೊಂದಿಗೆ ಸಂಭಾವ್ಯ ಸಭೆಯನ್ನು ಏರ್ಪಡಿಸುವ ಮೊದಲು ಸಮಸ್ಯೆ ಪರಿಹರಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications