'ಕಾಂಗ್ರೆಸ್ ಕಳೆ' ವಿವಾದ: ಇಬ್ಬರು ಸಚಿವರ ಬಹಿರಂಗ ಕಿತ್ತಾಟ
Recommended Video

ಬೆಂಗಳೂರು, ಸೆ.25: ಕಾಂಗ್ರೆಸ್ ಕಳೆಯನ್ನು ಬುಡಸಮೇತ ಕಿತ್ತು ಹಾಕಬೇಕೆನ್ನುವ ಶಿಕ್ಷಣ ಸಚಿವ ಎನ್ ಮಹೇಶ್ ಹೇಳಿಕೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ ಪುಟ್ಟರಂಗ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎನ್ ಮಹೇಶ್ ವಿರುದ್ಧ ಏಕವಚನದಲ್ಲಿ ದಾಳಿ ನಡೆಸಿರುವ ಪುಟ್ಟರಂಗಶೆಟ್ಟಿ 'ಅವನ್ಯಾರು ಕಿತ್ತುಹಾಕುವುದಕ್ಕೆ, ಕಾಂಗ್ರೆಸ್ ಮನಸ್ಸು ಮಾಡಿದರೆ ಅವನೇ ನಿರ್ನಾಮವಾಗುತ್ತಾನೆ' ಎಂದು ಎದಿರೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ 80 ಸಿಟು ಗೆದ್ದಿಗೆ ಜೆಡಿಎಸ್ 38 ಸೀಟು ಗೆದ್ದಿದೆ ಬಿಎಸ್ ಪಿಯಿಂದ ಅವರೊಬ್ಬರೇ ಗೆದ್ದಿರುವುದು ಕಾಂಗ್ರೆಸ್ ಮನಸ್ಸು ಮಾಡಿದರೆ ಅವರನ್ನು ಕಿತ್ತುಹಾಕುವುದು ಕಷ್ಟವಲ್ಲ ಅವರು ಒನ್ ಮ್ಯಾನ್ ಆರ್ಮಿ ಎನ್ನುವುದನ್ನು ಮರೆಯಬಾರದು, ಕಾಂಗ್ರೆಸ್ ವಿರುದ್ಧ ಮಾತನಾಡಬೇಕಾದರೆ ಎಚ್ಚರದಿಂದಿರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಸಚಿವ ಎನ್. ಮಹೇಶ್ ಮೊದಲು ಸಾಧನೆ ಮಾಡಲಿ ಆಮೇಲೆ ಮಾತನಾಡಲಿ, ರಾಜಕಾರಣದಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ ಕೂಸು, ಮೊದಲ ಬಾರಿಗೆ ಗೆದ್ದು ಇಷ್ಟೊಂದು ಆಟವಾಡುತ್ತಿರುವುದು ಸರಿಯಲ್ಲ, ಕಾಂಗ್ರೆಸ್ ಮನಸ್ಸು ಮಾಡಿದ್ದರಿಂದಲೇ ಮಹೇಶ್ ಸಚಿವರಾಗಿದ್ದಾರೆ ಅದನ್ನು ನೆಪಿಟ್ಟುಕೊಂಡು ಎಚ್ಚರದಿಂದ ಮಾತನಾಡಲಿ ಎಂದು ಹೇಳಿದ್ದಾರೆ.












Click it and Unblock the Notifications