ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ರಸ್ತೆಗಳು ರಾತ್ರಿ ವೇಳೆ ಸುರಕ್ಷಿತವೇ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 06 : ಬೆಂಗಳೂರು ನಗರದಲ್ಲಿ ರಾತ್ರಿ ಸಾಕಷ್ಟು ಗಸ್ತು ತಿರುಗುವ ವಾಹನಗಳಿವೆಯೇ?. ಮಡಿವಾಳ ಪೊಲೀಸರು ಈ ಪ್ರಶ್ನೆಗೆ ಉತ್ತರ ನೀಡಬೇಕು. 22 ವರ್ಷದ ಕಾಲ್ ಸೆಂಟರ್ ಉದ್ಯೋಗಿ ಮೇಲೆ ಟೆಂಪೋ ಟ್ರಾವೆಲರ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಬಳಿಕ ಬೆಂಗಳೂರಿನ ರಸ್ತೆಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

ರಸ್ತೆಯಲ್ಲಿ ಸಾಗುವ ಎಲ್ಲಾ ವಾಹನಗಳ ಮೇಲೆ ಕಣ್ಣಿಡಲು ಪೊಲೀಸರಿಗೆ ಸಾಧ್ಯವಾಗುವುದಿಲ್ಲ ಎಂಬುದು ಸತ್ಯವಾದರೂ ಎಲೆಕ್ಟ್ರಾನಿಕ್ ಸಿಟಿಗೆ ಸಾಗುವ ರಸ್ತೆಗಳಲ್ಲಿ ಪೊಲೀಸರು ಇರುವುದಿಲ್ಲ ಎಂಬುದು ಸತ್ಯ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಪೊಲೀಸರು ಕಾವಲು ಕಾಯುತ್ತಿರುತ್ತಾರೆ. ಆದರೆ, ಉಳಿದ ರಸ್ತೆಗಳ ಕಥೆ ಏನು? [ಗ್ಯಾಂಗ್ ರೇಪ್ ಪ್ರಕರಣ : ಮೂವರು ಶಂಕಿತರು ವಶಕ್ಕೆ]

bangalore police

ಎಲೆಕ್ಟ್ರಾನಿಕ್ ಸಿಟಿಗೆ ತಲುಪುವ ರಸ್ತೆಗಳಲ್ಲಿ ಪೊಲೀಸರ ಕಾವಲು ಇರುವುದಿಲ್ಲ. ಮಹಿಳೆಯಲ್ಲ ಈ ರಸ್ತೆಗಳಲ್ಲಿ ಪುರುಷರೂ ಒಂಟಿಯಾಗಿ ಸಂಚಾರ ನಡೆಸುವುದು ಅಪಾಯಕಾರಿ. ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುವ ಹಲವು ಯುವತಿಯರು ಈ ರಸ್ತೆಗಳಲ್ಲಿ ಸಂಚಾರ ನಡೆಸುತ್ತಿರುತ್ತಾರೆ. ವಿವಿಧ ಶಿಫ್ಟ್‌ಗಳಲ್ಲಿ ಕೆಲಸ ಮಾಡುವ ಹಲವು ಉದ್ಯೋಗಿಗಳು ಸಂಚಾರ ನಡೆಸುತ್ತಿರುತ್ತಾರೆ.[ಕಾಲ್ ಸೆಂಟರ್ ಉದ್ಯೋಗಿ ಮೇಲೆ ಗ್ಯಾಂಗ್ ರೇಪ್]

ದೆಹಲಿಯಲ್ಲಿ ನಿರ್ಭಯಾ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೂ ಬೆಂಗಳೂರಿನಲ್ಲಿ ನಡೆದ ಈ ಪ್ರಕರಣಕ್ಕೂ ಹಲವಾರು ಸಾಮ್ಯತೆಗಳಿವೆ. ಆದರೆ, ಒಂದೇ ವ್ಯತ್ಯಾಸವೆಂದರೆ ಇಲ್ಲಿ ಕಾಮುಕರಿಂದ ಜೀವನ್ನು ಉಳಿಸಿಕೊಳ್ಳಲು ಯುವತಿ ಯಶಸ್ವಿಯಾಗಿದ್ದಾಳೆ. ಸುಮಾರು ನಾಲ್ಕು ಗಂಟೆ ಒಂದು ಟಿಟಿ ವಾಹನ ರಸ್ತೆಗಳಲ್ಲಿ ಸಂಚಾರ ನಡೆಸುತ್ತಿದ್ದರೂ ಯಾವ ಪೊಲೀಸರಿಗೂ ಅನುಮಾನ ಬಂದಿಲ್ಲವೇ? ಎಂಬುದು ಸದ್ಯ ಎದ್ದಿರುವ ಪ್ರಶ್ನೆ.

ಹಲವು ದೂರುಗಳಿವೆ : ಮಡಿವಾಳ ಪ್ರದೇಶದಲ್ಲಿ ರಾತ್ರಿ ವೇಳೆ ಸರಿಯಾದ ಸುರಕ್ಷತೆ ಇಲ್ಲ ಎಂಬ ಬಗ್ಗೆ ಹಿಂದಿನಿಂದಲೂ ಹಲವಾರು ದೂರುಗಳಿವೆ. ಮಡಿವಾಳ ಬೆಂಗಳೂರು ನಗರದ ಪ್ರಮುಖ ಪ್ರದೇಶವಾಗಿದ್ದು, ಹೊಸೂರು ರಸ್ತೆ, ಬಿಟಿಎಂ ಲೇಔಟ್ ಮುಂತಾದ ಪ್ರದೇಶಗಳಿಗೆ ಇಲ್ಲಿಂದ ತೆರಳಬಹುದಾಗಿದೆ. ಬೇರೆ ರಾಜ್ಯಗಳಿಂದ ಆಗಮಿಸುವ ವಾಹನಗಳು ಇಲ್ಲಿಗೆ ಬಂದು ಹೋಗುತ್ತವೆ.

ಮಡಿವಾಳದಲ್ಲಿ ಸರಗಳ್ಳತನದ ಪ್ರಕರಣಗಳು ಹೆಚ್ಚುತ್ತಿವೆ ಅಗತ್ಯ ಪೊಲೀಸ್ ವ್ಯವಸ್ಥೆ ಕಲ್ಪಿಸಿ ಎಂಬುದು ಸ್ಥಳೀಯರು ಹಿಂದಿನಿಂದಲೂ ಮಾಡುತ್ತಿರುವ ಒತ್ತಾಯವಾಗಿದೆ. ಕಳೆದ ಕೆಲವು ವರ್ಷಗಳಿಂದ ಮಡಿವಾಳ ಠಾಣೆಯಲ್ಲಿ ದಾಖಲಾಗುತ್ತಿರುವ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. 20 ವಾಹನ ಕಳ್ಳತನ, 19 ಮನೆಗಳ್ಳತನ, 13 ಸರಗಳ್ಳತನ ಸೇರಿದಂತೆ ವಿವಿಧ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ದಾಖಲಾಗಿವೆ.

English summary
Is there sufficient police patrolling in Bengaluru city in the night? This is a question that the Madiwala police need to answer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X