ವ್ಯಾಪಂ, ಲಮೋ ಕೇಸ್ ಕಾಂಗ್ರೆಸ್ ಹೋಲಿಕೆ ಸಿಲ್ಲಿ: ಡಿವಿಎಸ್ ಟ್ವೀಟ್ಸ್

ಬೆಂಗಳೂರು, ಜುಲೈ 07: ಮಧ್ಯಪ್ರದೇಶದ ನೇಮಕಾತಿ ಅವ್ಯವಹಾರ ವ್ಯಾಪಂ ಹಗರಣ ಸಕತ್ ಸಿಲ್ಲಿ ವಿಷ್ಯ ಈ ಬಗ್ಗೆ ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಬೇಕಾಗಿಲ್ಲ ಎಂದು ಕಾನೂನು ಸಚಿವ ಡಿವಿ ಸದಾನಂದ ಗೌಡ ಅವರು ಹೇಳಿಕೆ ನೀಡಿರುವುದು ಈಗ ನಗೆಪಟಾಲಿಗೆ ಈಡಾಗಿದೆ. ಟ್ವಿಟ್ಟರ್ ನಲ್ಲಿ ಸದಾನಂದ ಗೌಡರ ಎವರ್ ಗ್ರೀನ್ ಸ್ಮೈಲ್ ಮಾಯವಾಗುವಂತ ಕಾಮೆಂಟ್ ಬಾಣಗಳು ಬೀಳುತ್ತಿವೆ.

ವ್ಯಾಪಂ ಹಗರಣದ ಬಗ್ಗೆ ಪ್ರತಿಕ್ರಿಯಿಸುತ್ತಾ, ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಶೇಷ ತನಿಖಾ ದಳದ ವಿಚಾರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಇಂಥ ಸಿಲ್ಲಿ ವಿಷಯವನ್ನು ಪ್ರಧಾನಿಗಳ ಬಳಿಗೆ ತೆಗೆದುಕೊಂಡು ಹೋಗಿ ಪ್ರತಿಕ್ರಿಯಿಸುವಂತೆ ಪೀಡಿಸುವುದು ಸರಿಯಲ್ಲ ಎಂದು ಡಿವಿಎಸ್ ಹೇಳಿದರು. ['ವ್ಯಾಪಂ ಹಗರಣ, ಸತ್ಯಕ್ಕೆ ತಲೆ ಬಾಗುವೆ, ಸಿಬಿಐ ತನಿಖೆಗೆ ನೀಡಲು ಸಿದ್ಧ']

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕಾಂಗ್ರೆಸ್ ಪಕ್ಷ ನಿರಂತರವಾಗಿ ಆಗ್ರಹಿಸುತ್ತಿದೆ. ಅದರೆ, ರಾಜ್ಯ ಸರ್ಕಾರ ಈ ಬಗ್ಗೆ ಮನವಿ ಸಲ್ಲಿಸಬೇಕಿದೆ. ಸರಣಿ ಸಾವಿನ ಬಗ್ಗೆ ಎಲ್ಲರೂ ಚಿಂತಿಸಬೇಕಿದೆ. ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಸ್ವಯಂಪ್ರೇರಿತವಾಗಿ ಸಿಬಿಐ ತನಿಖೆ ಕೈಗೆತ್ತಿಕೊಳ್ಳುವಂತಿಲ್ಲ. ರಾಜ್ಯ ಸರ್ಕಾರದಿಂದ ಮನವಿ ಬಂದರೆ ಸಿಬಿಐ ತನಿಖೆ ನಡೆಸಲಾಗುವುದು ಎಂದಿದ್ದರು.

ಸಂಜೆ ವೇಳೆಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಅವರು ಕೊನೆಗೂ ಸಿಬಿಐ ತನಿಖೆಗೆ ಶಿಫಾರಸು ಮಾಡಿ ಹೈಕೋರ್ಟಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಈ ನಡುವೆ ಸದಾನಂದ ಗೌಡರ ಮಾನವನ್ನು ಟ್ವೀಟ್ ಮಾಡಿ...

ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಬೇಕಾಗಿಲ್ಲ

ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಬೇಕಾಗಿಲ್ಲ

ವ್ಯಾಪಂ ಹಗರಣ ಸಕತ್ ಸಿಲ್ಲಿ ವಿಷ್ಯ ಈ ಬಗ್ಗೆ ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಬೇಕಾಗಿಲ್ಲ ಎಂದು ಕಾನೂನು ಸಚಿವ ಡಿವಿ ಸದಾನಂದ ಗೌಡ ಅವರು ಹೇಳಿಕೆ ನೀಡಿರುವುದು ಈಗ ನಗೆಪಟಾಲಿಗೆ ಈಡಾಗಿದೆ.

ಸಿಂಪಲ್ ಹಾಗೂ ಸಿಲ್ಲಿ ಕನ್ ಫ್ಯೂಸಿಂಗ್

ಸಿಂಪಲ್ ಹಾಗೂ ಸಿಲ್ಲಿ ಕನ್ ಫ್ಯೂಸಿಂಗ್

ಸಿಂಪಲ್ ಹಾಗೂ ಸಿಲ್ಲಿ ಎಂದು ಬಳಸಿದ ಪದಗಳನ್ನು ಕನ್ ಫ್ಯೂಸ್ ಮಾಡಿಕೊಂಡು ವರದಿ ಮಾಡಲಾಗಿದೆ ಎಂದು ಸರಣಿ ಟ್ವೀಟ್ಸ್ ಮೂಲಕ ಸ್ಪಷ್ಟನೆ ಕೊಟ್ಟ ಸದಾನಂದಗೌಡ.

ಗೌಡ್ರು ಬಹುಶಃ ಲಲಿತ್ ಗೇಟ್ ಬಗ್ಗೆ ಹೇಳಿರಬೇಕು

ಗೌಡ್ರು ಬಹುಶಃ ಲಲಿತ್ ಗೇಟ್ ಬಗ್ಗೆ ಹೇಳಿರಬೇಕು, ಮಾಧ್ಯಮ ಎಲ್ಲೋ ತಪ್ಪು ತಿಳಿದುಕೊಂಡಿದೆ.

ಇದು ಅತ್ಯಂತ ಕೆಟ್ಟ ಸಮರ್ಥನೆ

ಜನಪ್ರತಿನಿಧಿ ನೀಡಿರುವ ಅತ್ಯಂತ ಕೆಟ್ಟ ಸಮರ್ಥನೆ ಹಾಗೂ ಪ್ರತಿಕ್ರಿಯೆ ಇದಾಗಿದೆ.

ಸತ್ತವರ ಬಗ್ಗೆ ಕನಿಕರವಿಲ್ಲದ ಕಾನೂನು ಸಚಿವ

ಸತ್ತವರ ಬಗ್ಗೆ ಕನಿಕರವಿಲ್ಲದ ಕಾನೂನು ಸಚಿವ ತಕ್ಷಣವೇ ಕ್ಷಮೆಯಾಚಿಸಿ, ರಾಜೀನಾಮೆ ನೀಡಲಿ.

ಸದಾನಂದ ಗೌಡರ ಸರಣಿ ಪ್ರತಿಕ್ರಿಯೆ

ಸದಾನಂದ ಗೌಡರು ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದಾರೆ. ನಾನು ಹೇಳಿದ್ದು ಲಲಿತ್ ಮೋದಿ ಕೇಸ್ ಬಗ್ಗೆ ಕಾಂಗ್ರೆಸ್ ಪಕ್ಷ ಎರಡನ್ನು ಹೋಲಿಸುವುದು ಸಿಲ್ಲಿ ಎಂದಿದ್ದೆ.

ಸದಾನಂದ ಗೌಡರ ಟ್ವೀಟ್ ಸರಣಿ ಪ್ರತಿಕ್ರಿಯೆ

ವ್ಯಾಪಂ ಹಗರಣ ತುಂಬಾ ಗಂಭೀರ ವಿಚಾರ ಎಂದಿದ್ದನ್ನು ಮಾಧ್ಯಮಗಳು ಮರೆ ಮಾಚಿವೆ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ಕಾಂಗ್ರೆಸ್ ಈ ಪ್ರಕರಣವನ್ನು ಲಲಿತ್ ಮೋದಿ ಕೇಸಿಗೆ ಹೋಲಿಸುವುದು ಸಿಲ್ಲಿ ವಿಷ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+