ಲೋಕಸಭೆ ಫಲಿತಾಂಶಕ್ಕೆ ಬೆಂಗಳೂರಲ್ಲಿ ಸಿದ್ಧತೆ ಹೇಗಿದೆ?
ಬೆಂಗಳೂರು,
ಮೇ 21: ಮೇ 23ರಂದು ಲೋಕಸಭಾ ಫಲಿತಾಂಶಕ್ಕೆ ಬೆಂಗಳೂರು ಸಿದ್ಧಗೊಳ್ಳುತ್ತಿದೆ. ಮತ ಎಣಿಕೆ ಕುರಿತು ಸೋಮವಾರ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳನ್ನು ತಿಳಿಸಿದರು. id="toptextpromo"> id='are-slot-1' class='oiad oi-axt oiadv'>ಒಂದು
ವೇಳೆ ಇವಿಎಂನಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ಮತಗಟ್ಟೆಯ ವಿವಿ ಪ್ಯಾಟ್‌ನಲ್ಲಿರುವ ಮತಪತ್ರ ಎಣಿಸಿ ಫಲಿತಾಂಶ ಪ್ರಕಟಣೆಗೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಒಂದು ವಿವಿ ಪ್ಯಾಟ್ ನ ಮತಪತ್ರ ಎಣಿಕೆಗೆ ಸುಮಾರು 45 ನಿಮಿಷಗಳು ಬೇಕಾಗುತ್ತದೆ ಎಂದು ಅವರು ತಿಳಿಸಿದರು. id='are-slot-2' class='oiad oi-axt oiadv'>
ಬೆಂಗಳೂರಲ್ಲಿ ಮತಎಣಿಕೆಗೆ 1500 ಸಿಬ್ಬಂದಿಗಳು
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎಣಿಕೆ ಕಾರ್ಯಕ್ಕೆ 1500ಕ್ಕೂ ಹೆಚ್ಚು ಅಧಿಕಾರಿಗಳನ್ನು ನೇಮಿಸಲಾಗಿದೆ.

ಬೆಂಗಳೂರಿನ ಯಾವ್ಯಾವ ಪ್ರದೇಶದಲ್ಲಿ ಮತ ಎಣಿಕೆ
ಬೆಂಗಳುರು ಕೇಂದ್ರ ಲೋಕಸಭಾ ಕ್ಷೇತ್ರದ ಮತ ಎಣಿಕೆ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು ಉತ್ತರ ಕ್ಷೇತ್ರದ ಮ ಎಣಿಕೆ ಮಲ್ಯ ಆಸ್ಪತ್ರೆ ರಸ್ತೆಯ ಸೇಂಟ್ ಜೋಸೆಫ್ ಪ್ರೌಢಶಾಲೆ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ನಡೆಯಲಿದೆ.

ಮತ ಎಣಿಕೆ ಮಾಡುವ ಸಿಬ್ಬಂದಿಗಳಿಗೆ ಮಾತ್ರ ಮೊಬೈಲ್
ಮತ ಎಣಿಕೆ ಕಾರ್ಯದಲ್ಲಿ ಭಾಗಿಯಾಗುವ ಸಿಬ್ಬಂದಿ ಹಾಗೂ ಮಾಧ್ಯಮದವರು ಮಾತ್ರ ಮೊಬೈಲ್ ತೆಗೆದುಕೊಂಡು ಹೋಗಬಹುದಾಗಿದೆ.ಚುನಾವಣಾ ಆಯೋಗದ ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಮತ ಎಣಿಕಾ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತದೆ.

ವಾಹನ ನಿಲುಗಡೆ ಮಾಡಲು ರಸ್ತೆಗಳು
ಒಟ್ಟು 10 ಕಡೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
-ಟಿ ಚೌಡಯ್ಯ ರಸ್ತೆ, ಎಲ್‌ಆರ್‌ಡಿಇ ಯಿಂದ ರಾಜಭವನ ರಸ್ತೆಯ ಒಂದು ಬದಿ
-8ನೇ ಮೈನ್ ವಸಂತನಗರರಸ್ತೆಯ ಒಂದು ಬದಿ
-ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮತೆಣಿಕೆಗೆ ಹಾಜರಾಗುವ ಕಾರ್ಯಕರ್ತರು ವಾಹನಗಳು ಮುಖ್ಯ ಅರಮನೆ ಮೈದಾನದ ಆವರಣದಲ್ಲಿ ನಿಲುಗಡೆ ಮಾಡಬಹುದು
-ವಿಕಾಸ ಸೌಧ ವಾಹನ ನಿಲುಗಡೆ ಸ್ಥಳ ಮುಂಭಾಗ
-ಕಂಠೀರವ ಕ್ರೀಡಾಂಗಣ
-ಕೆಎಸ್‌ಆರ್‌ಟಿಸಿ ಮೈದಾನ ಪಾರ್ಕಿಂಗ್
-ಪೊಲೀಸ್ ಇಲಾಖೆಯ ಅಧಿಕಾರಿಗಳ ವಾಹನ ನಿಲುಗಡೆ
-ಕಾರ್ಮೆಲ್ ಕಾನ್ವೆಂಟ್ ಶಾಲೆಯ ಆವರಣ ವಾಹನ ನಿಲುಗಡೆ ಚುನಾವಣಾ ಅಭ್ಯರ್ಥಿಗಳು
-ಮೇವಾ ಶಾಲೆಯ ಆವರಣ ವಾಹನ ನಿಲುಗಡೆ ಚುನಾವಣಾ ಅಬ್ಯರ್ಥಿಗಳು ಮತ್ತು ಅವರ ಬೆಂಬಲಿಗರು
-ಸಾರ್ವಜನಿಕ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ನಿಲುಗಡೆ

ಬೆಂಗಳೂರಲ್ಲಿ ಮದ್ಯ ಮಾರಾಟ ನಿಷೇಧ
ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಮಾತನಾಡಿ, ಮತೆಣಿಕೆಯ ಸಿನದಂದು ಮೂರು ಮತ ಎಣಿಕೆ ಕೇಂದ್ರಗಳ ಭದ್ರತೆಗೆ 2300 ಪೊಲೀಸ್ ಅಧಿಕಾರಿ ಸಿಬ್ಬಂದಿ ನಿಯೋಜಿಸಲಾಗಿದೆ. ಮೇ 23ರ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ನಗರದಲ್ಲಿ ನಿಷೇಧಾಜ್ಞೆ, ಮೇ 23ರ ಬೆಳಗ್ಗೆ 6ರಿಂದ ಮೇ 24ರ ಬೆಳಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

11 ಸಾವಿರ ಅಂಚೆ ಮತಪತ್ರ
ಬೆಂಗಳೂರು ನಗರ ಜಿಲ್ಲೆಯ ಮೂರು ಲೋಕಸಭಾ ಕ್ಷೇತ್ರಕ್ಕೆ ಈವರೆಗೆ 11,626 ಅಂಚೆ ಮತ ಪತ್ರ ಸ್ವೀಕೃತವಾಗಿದೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ 4,640, ಕೇಂದ್ರದಲ್ಲಿ 2878, ದಕ್ಷಿಣ ಕ್ಷೇತ್ರಕ್ಕೆ 4,408 ಅಂಚೆ ಮತಪತ್ರ ಸ್ವೀಕೃತವಾಗಿದೆ.












Click it and Unblock the Notifications