ನನ್ನ ಮತದಾರರಿಗೆ ಎಂದೂ ಅಗೌರವ ತಂದಿಲ್ಲ: ಸದಾನಂದಗೌಡ
Recommended Video

ಬೆಂಗಳೂರು, ಏಪ್ರಿಲ್ 08: ಜನಪ್ರತಿನಿಧಿ ಲಂಚಕೋರನಾದರೆ ಚುನಾಯಿಸಿದ ಪ್ರಜೆಗಳಿಗೆ ಅಪಮಾನವಾಗುತ್ತದೆ. ಆದ್ದರಿಂದ ಭ್ರಷ್ಟರನ್ನು ದೂರವಿರಿಸಿ ಪ್ರಜಾಪ್ರಭುತ್ವ ಮೌಲ್ಯವನ್ನು ಉಳಿಸಬೇಕು ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಹೇಳಿದರು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಚಿಕ್ಕಜಾಲದ ಕೆ.ಎನ್.ಎಸ್. ಕನ್ವೆನ್‍ಷನ್ ಹಾಲ್‌ನಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇತ್ತೀಚೆಗೆ ಹೋಟೆಲ್ ಒಂದರಲ್ಲಿ ಲಂಚ ಪಡೆಯುತ್ತಿದ್ದವರು ಪೊಲೀಸರಿಗೆ ಸಿಕ್ಕಿಬಿದ್ದರು. ಇದು ಯಾವ ಇಲಾಖೆಗೆ ಸೇರಿದ್ದು ಎಂದು ಅವರು ಹೇಳಿಕೆ ನೀಡಿದ್ದರಿಂದ ಅದು ಜಗಜ್ಜಾಹೀರಾಗಿದೆ. ನಿಮಗೆ ಇಂತಹ ಜನಪ್ರತಿನಿಧಿ ಬೇಕೇ ಎಂದು ಪ್ರಶ್ನಿಸಿದರು.
ನಿಮಗೆ ಅಗೌರವ ಬರುವಂತೆ ನಾನು ಯಾವಾಗಲಾದರೂ ನಡೆದುಕೊಂಡಿದ್ದೇನೆಯೇ ? ಭ್ರಷ್ಟಾಚಾರ ನಡೆಸಿದ್ದೇನೆಯೇ ? ನಿಮ್ಮ ಕೆಲಸಗಳನ್ನು ಮಾಡಿಕೊಡಲು ನಾಳೆ ಬನ್ನಿ ಎಂದಿದ್ದೇನೆಯೇ ? ಜಾತಿ ಆಧಾರದಲ್ಲಿ ತಾರತಮ್ಯ ಮಾಡಿದ್ದೇನೆಯೇ ? ನನ್ನ ಕೆಲಸವನ್ನು ನೋಡಿ ಮೌಲ್ಯಮಾಪನ ಮಾಡಿ ಎಂದು ಮನವಿ ಮಾಡಿದರು. ಸಂಸದರ ಅನುದಾನವನ್ನು ಶೇ.100 ರಷ್ಟು ಬಳಸಿಕೊಂಡು ನಿಮಗೆ ಗೌರವ ಬರುವಂತೆ ಮಾಡಿಲ್ಲವೇ ? ಕಾರ್ಯಕರ್ತರು, ಮುಖಂಡರಿಗೆ ಯಾವಾಗಲಾದರೂ ನೋವುಂಟು ಮಾಡಿದ್ದೇನೆಯೇ ? ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತಿಲ್ಲವೇ ? ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರದ ವಿರುದ್ಧ ಸಮರ ಸಾರೋಣ. ಇದಕ್ಕಾಗಿ ನೀವೆಲ್ಲರೂ ನನಗೆ ಕೈಜೋಡಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರೂ ಭ್ರಷ್ಟಾಚಾರದ ಕಡುವಿರೋಧಿಗಳಾಗಿದ್ದು ಅವರನ್ನು ಪುನಃ ಪ್ರಧಾನಿ ಮಾಡೋಣ ಎಂದು ಕರೆ ನೀಡಿದರು.
ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?
ನನಗೆ ನಗುವುದನ್ನು ಬಿಟ್ಟರೆ ಬೇರೇನೂ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ನಾನು ನಗದೇ ಅವರಂತೆ ಯಾವಾಗಲೂ ಮುಖ ಊದಿಸಿಕೊಂಡು ಇರಬೇಕಿತ್ತೇ. ಅವರಂತೆ ದುರಹಂಕಾರದ ಮಾತುಗಳನ್ನಾಡುವುದು ನನಗೆ ಬರುವುದಿಲ್ಲ ಎಂದು ಸದಾನಂದಗೌಡರು ವಾಗ್ದಾಳಿ ನಡೆಸಿದರು. ನನ್ನನ್ನು ಪುತ್ತೂರಿಗೆ ಓಡಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಿಂದಲೇ ಜನರು ಅವರನ್ನು ಓಡಿಸಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದವನಾಗಿ ನಾನು ಕೆಲಸ ಮಾಡುತ್ತಿಲ್ಲವೇ ಎಂದು ತಿರುಗೇಟು ನೀಡಿದರು.
ಕಳೆದ ಚುನಾವಣೆಯಲ್ಲಿ ಜಾಲದಲ್ಲಿ ನನಗೆ 37 ಸಾವಿರಕ್ಕೂ ಅಧಿಕ ಮತಗಳ ಲೀಡ್ ಸಿಕ್ಕಿತ್ತು. ಈ ಬಾರಿ ಅದು 50 ಸಾವಿರವನ್ನು ದಾಟಬೇಕು. ಇದಕ್ಕಾಗಿ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು. ನನ್ನ ಸಾಧನೆಗಳನ್ನು ಮತದಾರರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಪರಿಷತ್ ಸದಸ್ಯ ಎ.ರವಿ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಪಿ.ಕೆ.ರಾಜಗೋಪಾಲ್, ಮುಖಂಡರಾದ ದೊಡ್ಡ ಬಸವರಾಜು, ಪ್ರಕಾಶ್, ದೀಪು, ರಮೇಶ್ ಗೌಡ, ಅಮುದಾ ಮತ್ತಿತರರು ಹಾಜರಿದ್ದರು.
ನಂತರ ಸದಾನಂದಗೌಡರು ಕೊಡಿಗೇಹಳ್ಳಿಯಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ಕಳೆದ ಐದು ವರ್ಷದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ವಿವರಿಸಿದರು.
-
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral -
ವಾರ ಭವಿಷ್ಯ: ಈ ರಾಶಿಯ ಪ್ರೇಮಿಗಳು ಮತ್ತೆ ಒಂದಾಗುತ್ತಾರೆ! ಸೂರ್ಯನಿಗೆ ಅರ್ಘ್ಯದಿಂದ ಭಾಗ್ಯ ಬದಲಾವಣೆ -
ಹುಡುಗಿಯರೇ ಎಚ್ಚರ: ಟಾಕ್ಸಿಕ್ ಗಂಡಸರ ಲಕ್ಷಣಗಳಿವು, ಮೆಚ್ಚಿ ಒಲಿದರೆ ಬಲಿಯಾಗುವಿರಿ -ಡಾ ರೂಪಾ ರಾವ್ ಬರಹ -
Ragi Ambli: ಬೇಸಿಗೆಯ ಬಿಸಿಲಿಗೆ ತಂಪೆರೆಯುವ 'ರಾಗಿ ಅಂಬಲಿ'; ಮನೆಯಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ -
KSRTC ನೌಕರರ ಹಿಂಬಾಕಿ 1271 ರೂ ಬಿಡುಗಡೆ; ವೇತನ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಏ.17ಕ್ಕೆ ನಿರ್ಣಾಯಕ ಸಭೆ -
Jowar Price: ಕರ್ನಾಟಕದ ಮಾರುಕಟ್ಟೆಗಳಲ್ಲಿ ಜೋಳದ ದರ ಏರಿಳಿತ; ಇಲ್ಲಿದೆ ಜಿಲ್ಲಾವಾರು ಬೆಲೆ ಪಟ್ಟಿ -
April 7 Horoscope: ಸ್ಪರ್ಧೆಯಲ್ಲಿ ಜಯ ಮತ್ತು ಹೊಸ ಉದ್ಯೋಗ ಅವಕಾಶಗಳು -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Zomato: ಬೆಂಗಳೂರು Vs ಚೆನ್ನೈ ಸಾಂಬಾರ್ ಎಂದ ಝೊಮ್ಯಾಟೊ; ನಮಗೆ ಸ್ವಿಗ್ಗಿ ಸಾಕು ಎಂದ ನೆಟ್ಟಿಗರು -
Karnataka Rain Updates: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ 3ದಿನ ಮಳೆ












Click it and Unblock the Notifications