Viral: ಬೆಂಗಳೂರಿನ ಸ್ಲೀಪರ್ ಬಸ್‌ನಲ್ಲಿ ಒಟ್ಟಿಗೆ ಇದ್ದ ಯುವಕ-ಯುವತಿ; ಕಂಡಕ್ಟರ್‌ನಿಂದ ನೈತಿಕ ಪೊಲೀಸ್‌ಗಿರಿ
ಬೆಂಗಳೂರು: ರಾತ್ರಿ ವೇಳೆಯ ಖಾಸಗಿ ಬಸ್ ಪ್ರಯಾಣವು ಕೆಲವೊಮ್ಮೆ ಕಹಿನೆನಪುಗಳನ್ನು ಹುಟ್ಟುಹಾಕುತ್ತದೆ. ಇದೀಗ ಬೆಂಗಳೂರಿನಿಂದ ಖಾಸಗಿ ಎಸಿ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವಕ ಮತ್ತು ಆತನ ಗೆಳತಿಗೆ ಬಸ್ ನಿರ್ವಾಹಕನೊಬ್ಬ (Conductor) ಅನಗತ್ಯವಾಗಿ ನೈತಿಕ ಪೊಲೀಸ್‌ಗಿರಿ (Moral policing) ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಕಹಿ ಅನುಭವವನ್ನು ಯುವಕ ಜನಪ್ರಿಯ ಜಾಲತಾಣವಾದ ರೆಡ್ಡಿಟ್‌ನ 'ಆರ್/ಬೆಂಗಳೂರು' ಪುಟದಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಘಟನೆಯ ಹಿನ್ನೆಲೆ ಏನು?
ಆರಾಮದಾಯಕ ಪ್ರಯಾಣಕ್ಕಾಗಿ ಹಾಗೂ ಹೆಚ್ಚಿನ ಸ್ಥಳಾವಕಾಶವಿರಲಿ ಎಂಬ ಉದ್ದೇಶದಿಂದ ಯುವಕ ಮತ್ತು ಯುವತಿ ಒಟ್ಟು ಮೂರು ಕೆಳಗಿನ ಸ್ಲೀಪರ್ ಬರ್ತ್‌ಗಳನ್ನು (Lower sleeper berths) ಮುಂಗಡವಾಗಿ ಕಾಯ್ದಿರಿಸಿದ್ದರು. ಪ್ರಯಾಣದ ವೇಳೆ ಇಬ್ಬರೂ ಒಟ್ಟಿಗೆ ಒಂದು ಬರ್ತ್‌ನಲ್ಲಿ ಕುಳಿತಿದ್ದನ್ನು ಗಮನಿಸಿದ ನಿರ್ವಾಹಕ, ತಕ್ಷಣವೇ ಅಲ್ಲಿಗೆ ಬಂದು ಇಬ್ಬರಿಗೂ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ತಾಕೀತು ಮಾಡಿದ್ದಾನೆ.

"ನಾವು ತಕ್ಷಣವೇ ಎದ್ದು ಹೋಗದಿದ್ದಾಗ, ಕಂಡಕ್ಟರ್ ನಮ್ಮ ಮೇಲೆ ಅನಗತ್ಯವಾಗಿ ರೇಗಾಡಲು ಶುರುಮಾಡಿದ. 'ನಿಮ್ಮ ಪೋಷಕರಿಗೆ ಕರೆ ಮಾಡುತ್ತೇನೆ', 'ಪೊಲೀಸ್ ಠಾಣೆಗೆ ಹೋಗೋಣ' ಎಂದೆಲ್ಲಾ ಬೆದರಿಕೆ ಹಾಕಿದ. ಇದು ನಮಗೆ ನಿಜಕ್ಕೂ ಮುಜುಗರ ಹಾಗೂ ಆತಂಕ ತರಿಸಿತು. ನಾವು ಮೂರೂ ಸೀಟುಗಳಿಗೆ ಅಧಿಕೃತವಾಗಿ ಟಿಕೆಟ್ ಹಣ ಪಾವತಿಸಿದ್ದೆವು ಮತ್ತು ಬಸ್‌ನಲ್ಲಿದ್ದ ಬೇರೆ ಯಾವ ಪ್ರಯಾಣಿಕರಿಗೂ ನಮ್ಮಿಂದ ಯಾವುದೇ ತೊಂದರೆಯಾಗಿರಲಿಲ್ಲ. ಆದರೂ, ಬಸ್‌ನಲ್ಲಿ ದೊಡ್ಡ ರಂಪಾಟವಾಗುವುದು ಬೇಡ ಎಂದು ಸುಮ್ಮನೆ ಪ್ರತ್ಯೇಕವಾಗಿ ಕುಳಿತುಕೊಂಡೆವು" ಎಂದು ಯುವಕ ತನ್ನ ಪೋಸ್ಟ್‌ನಲ್ಲಿ ಅಳಲು ತೋಡಿಕೊಂಡಿದ್ದಾನೆ.
ಜೊತೆಗೆ, "ಯಾವುದೇ ನಿಯಮಗಳ ಉಲ್ಲಂಘನೆಯಾಗದಿದ್ದರೂ ಕಂಡಕ್ಟರ್ ಈ ರೀತಿ ನಡೆದುಕೊಂಡಿದ್ದು ನಿಜಕ್ಕೂ ನಿಯಮವೋ ಅಥವಾ ಬರೀ ನೈತಿಕ ಪೊಲೀಸ್‌ಗಿರಿಯೋ? ಸಾರಿಗೆ ಸಂಸ್ಥೆಗಳಲ್ಲಿ ಒಟ್ಟಿಗೆ ಯಾರು ಮಲಗಬೇಕು/ಕೂತುಕೊಳ್ಳಬೇಕು ಎಂಬ ಬಗ್ಗೆ ಲಿಖಿತ ನಿಯಮಗಳಿವೆಯೇ? ಯಾರಿಗಾದರೂ ಈ ರೀತಿಯ ಅನುಭವವಾಗಿದೆಯೇ?" ಎಂದು ಆತ ಪ್ರಶ್ನಿಸಿದ್ದಾನೆ.
ಪರ-ವಿರೋಧ ಚರ್ಚೆ
ಯುವಕನ ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನಿರ್ವಾಹಕನ ನಡೆಯನ್ನು ಸಮರ್ಥಿಸಿಕೊಂಡರೆ, ಬಹುತೇಕರು ಆತನ ಉದ್ಧಟತನವನ್ನು ತೀವ್ರವಾಗಿ ಖಂಡಿಸಿದ್ದಾರೆ.
"ಇದು ಕೇವಲ ಹಣದಾಸೆಗೆ ಮಾಡಿದ ತಂತ್ರ. ನೀವು ಮೂರು ಸೀಟು ಬುಕ್ ಮಾಡಿದ್ದೀರಿ, ಒಂದು ಸೀಟು ಖಾಲಿ ಇರುತ್ತದೆ. ಇಬ್ಬರನ್ನೂ ಬೇರೆ ಬೇರೆ ಕೂರಿಸಿ, ಆ ಖಾಲಿ ಸೀಟನ್ನು ದಾರಿಯಲ್ಲಿ ಬೇರೆ ಪ್ರಯಾಣಿಕರಿಗೆ ಮಾರಿ ಹಣ ಮಾಡಿಕೊಳ್ಳುವುದು ಆತನ ಉದ್ದೇಶವಾಗಿರಬಹುದು. ನೀವು ಆತನಿಗೆ ಸರಿಯಾಗಿ ಬುದ್ಧಿ ಕಲಿಸಬೇಕಿತ್ತು" ಎಂದು ಬಳಕೆದಾರರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು ತಮ್ಮದೇ ಕಹಿ ಅನುಭವವನ್ನು ಹಂಚಿಕೊಳ್ಳುತ್ತಾ, "ನನಗೂ ಇದೇ ರೀತಿಯ ಅನುಭವವಾಗಿತ್ತು. ಅಣ್ಣ-ತಂಗಿ ಆಗಿದ್ದರೆ ಮಾತ್ರ ಒಟ್ಟಿಗೆ ಪ್ರಯಾಣಿಸಲು ಅವಕಾಶ, ಇಲ್ಲದಿದ್ದರೆ ಪೋಷಕರಿಗೆ ಕರೆ ಮಾಡುತ್ತೇವೆ ಎಂದು ಬೆದರಿಸಿದ್ದರು. ಪ್ರಯಾಣದುದ್ದಕ್ಕೂ ಕಂಡಕ್ಟರ್ ನಮ್ಮನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಲ್ಲದೆ, ಪದೇ ಪದೇ ಬಂದು ನಾವೇನು ಮಾಡುತ್ತಿದ್ದೇವೆ ಎಂದು ಪರಿಶೀಲಿಸುತ್ತಿದ್ದ" ಎಂದು ಆಕ್ರೋಶ ಹೊರಹಾಕಿದ್ದಾರೆ.
"ನೀವು ಎರಡು ಸೀಟು ಬುಕ್ ಮಾಡಿದ್ದರೆ ಬಹುಶಃ ಆತ ಏನೂ ಕೇಳುತ್ತಿರಲಿಲ್ಲ. ಆದರೆ, ಮೂರು ಸೀಟು ಬುಕ್ ಮಾಡಿದ್ದು ಆತನಿಗೆ ಅನುಮಾನ ಮೂಡಿಸಿರಬಹುದು" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆಯಾಗಿ, ಖಾಸಗಿ ಬಸ್‌ಗಳಲ್ಲಿ ಅಧಿಕೃತ ಟಿಕೆಟ್ ಹೊಂದಿದ್ದರೂ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸದಿದ್ದರೂ ಸಿಬ್ಬಂದಿ ಈ ರೀತಿ ಪ್ರಯಾಣಿಕರ ಖಾಸಗಿತನದಲ್ಲಿ (Privacy) ಹಸ್ತಕ್ಷೇಪ ಮಾಡುವುದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿದೆ. ಪ್ರಯಾಣಿಕರು ಟಿಕೆಟ್ ಖರೀದಿಸಿದ ಬಳಿಕ, ಇತರರಿಗೆ ತೊಂದರೆಯಾಗದಂತೆ ಹೇಗೆ ಪ್ರಯಾಣಿಸಬೇಕು ಎಂಬುದು ಅವರ ಹಕ್ಕು. ಇದು ಯಾವುದೇ ಸಾರಿಗೆ ನಿಯಮಗಳ ಅಡಿಯಲ್ಲಾಗಲಿ ಬರುವುದಿಲ್ಲ, ಬದಲಾಗಿ ಇದು ಸಮಾಜದಲ್ಲಿ ಬೇರೂರಿರುವ 'ನೈತಿಕ ಪೊಲೀಸ್‌ಗಿರಿ'ಯ ಒಂದು ಭಾಗವಷ್ಟೇ ಎಂದು ಹಲವರು ಬಲವಾಗಿ ಪ್ರತಿಪಾದಿಸಿದ್ದಾರೆ.
-
CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ?












Click it and Unblock the Notifications