ವಿಜಯನಗರ-ಎಲೆಕ್ಟ್ರಾನಿಕ್ ಸಿಟಿ ನಡುವೆ ವೋಲ್ವೋ ಸೇವೆ

volvo bus
ಬೆಂಗಳೂರು, ಅ.3 : ಎಲೆಕ್ಟ್ರಾನಿಕ್‌ ಸಿಟಿ ಕಡೆಗೆ ಪ್ರಯಾಣಿಸುವ ಜನರಿಗೆ ಸಿಹಿ ಸುದ್ದಿಯೊಂದು ಕಾದಿದೆ. ವಿಜಯನಗರ ಮೂಲಕ ನೈಸ್ ರಸ್ತೆಯಲ್ಲಿ ಸಾಗಿ ಎಲೆಕ್ಟ್ರಾನಿಕ್‌ ಸಿಟಿ ತಲುಪುವ ನೂತನ ವೋಲ್ವೋ ಬಸ್ ಸೇವೆಯನ್ನು ಬಿಎಂಟಿಸಿ ಪ್ರಾರಂಭಿಸಿದೆ.

ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸಲು ಸಂಚಾರದಟ್ಟಣೆಯಲ್ಲಿ ಸಿಲುಕಿ ಗಂಟೆಗಟ್ಟಲೆ ವ್ಯರ್ಥ ಮಾಡುತ್ತಿದ್ದವರು ಇನ್ನು ಮುಂದೆ ನೂತನ ಸೇವೆಯ ಮೂಲಕ ಐವತ್ತು ನಿಮಿಷಗಳಲ್ಲಿ ಎಲೆಕ್ಟ್ರಾನಿಕ್‌ ಸಿಟಿಯನ್ನು ತಲುಪಬಹುದಾಗಿದೆ.

ವಿಜಯನಗರದಿಂದ ಎಲೆಕ್ಟ್ರಾನಿಕ್‌ ಸಿಟಿಗೆ ನೈಸ್‌ ರಸ್ತೆಯ ಮೂಲಕ ಮಾರ್ಗ ಸಂಖ್ಯೆ ವಿ 600 ಎನ್‌ಎಲ್‌ನಲ್ಲಿ ನೂತನ ವೋಲ್ವೊ ಬಸ್‌ಗಳ ಸಂಚಾರ ಪ್ರಾರಂಭಿಸಲಾಗಿದೆ. ಇದರಿಂದಾಗಿ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣ ಮತ್ತಷ್ಟು ಸುಲಭವಾಗಿದೆ.

ಈ ಬಸ್ ಚಂದ್ರ ಲೇಔಟ್‌, ನಾಗರಬಾವಿ ವೃತ್ತ, ನಾಯಂಡಹಳ್ಳಿ ಜಂಕ್ಷನ್‌, ಹೊಸಕೆರೆಹಳ್ಳಿ ನೈಸ್‌ ರೋಡ್‌ ಜಂಕ್ಷನ್‌, ಕನಕಪುರ ನೈಸ್‌ ರೋಡ್‌ ಜಂಕ್ಷನ್‌, ಗೊಟ್ಟಿಗೆರೆ ನೈಸ್‌ ರೋಡ್‌ ಜಂಕ್ಷನ್‌ ಮೂಲಕ ಎಲೆಕ್ಟ್ರಾನಿಕ್‌ ಸಿಟಿಗೆ ತಲುಪಲಿದೆ.

ವಿಜಯನಗರದಿಂದ-ಎಲೆಕ್ಟ್ರಾನಿಕ್ ಸಿಟಿಗೆ ರೂ.125 ರೂ. ದರ ನಿಗದಿಗೊಳಿಸಲಾಗಿದೆ. ಮಾಸಿಕ ಮತ್ತು ದಿನದ ಪಾಸು ಹೊಂದಿರುವ ಪ್ರಯಾಣಿಕರು ರೂ.30ದರವನ್ನು ಪ್ರತಿ ಪ್ರಯಾಣಕ್ಕೆ ಪಾವತಿ ಮಾಡಬೇಕಾಗುತ್ತದೆ.

ವಿಜಯನಗರದಿಂದ ಬೆಳಿಗ್ಗೆ 7.30, 8, 8.30, 9 ಗಂಟೆಗೆ ಹಾಗೂ ಎಲೆಕ್ಟ್ರಾನಿಕ್‌ ಸಿಟಿಯಿಂದ 5.30, 6, 6.30 ಹಾಗೂ 7 ಗಂಟೆಗೆ ಬಸ್ ಹೊರಡಲಿದೆ. ಈ ಮೂಲಕ ನೈಸ್ ರಸ್ತೆಯಲ್ಲಿ ಬಿಎಂಟಿಸಿ ಬಸ್ ಸಂಚಾರ ಪ್ರಾರಂಭವಾಗಿದೆ. (ವೋಲ್ವೋ ಪ್ರಯಾಣ ದರ ಹೆಚ್ಚಳ)

ದರಗಳ ವಿವರ
ವಿಜಯನಗರ-ಎಲೆಕ್ಟ್ರಾನಿಕ್‌ ಸಿಟಿ ರೂ.125
ಹೊಸಕೆರೆಹಳ್ಳಿ ನೈಸ್‌ ಟೋಲ್‌-ಎಲೆಕ್ಟ್ರಾನಿಕ್‌ ಸಿಟಿ ರೂ.115
ಕನಕಪುರ ರೋಡ್‌ ಜಂಕ್ಷನ್‌-ಎಲೆಕ್ಟ್ರಾನಿಕ್‌ ಸಿಟಿ ರೂ.100
ಗೊಟ್ಟಿಗೆರೆ ರೋಡ್‌ ಜಂಕ್ಷನ್‌-ಎಲೆಕ್ಟ್ರಾನಿಕ್‌ ಸಿಟಿ ರೂ.85
ಗೊಟ್ಟಿಗೆರೆ ರೋಡ್‌ ಜಂಕ್ಷನ್‌-ವಿಜಯನಗರ ರೂ.115
ಕನಕಪುರ ರೋಡ್‌ ಜಂಕ್ಷನ್‌-ವಿಜಯನಗರ ರೂ.10

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+