• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದ ಹೆಮ್ಮೆಯ ಮಹಿಳಾ ವಾಯುಸೇನಾ ಅಧಿಕಾರಿ ವಿಜಯಲಕ್ಷ್ಮೀ ರಾಮನನ್

|

ಬೆಂಗಳೂರು, ಅಕ್ಟೋಬರ್ 22: ತಮ್ಮ ಜೀವನದ ಅಂತ್ಯದವರೆಗೂ ಯಾರ ನೆರವಿಲ್ಲದೆ ಸ್ವತಂತ್ರವಾಗಿ ಬದುಕಿದ್ದ ಭಾರತದ ಹೆಮ್ಮೆಯ ಮಹಿಳಾ ವಾಯುಸೇನಾ ಅಧಿಕಾರಿ ವಿಜಯಲಕ್ಷ್ಮೀ ರಾಮನನ್ ಇನ್ನು ನೆನಪು ಮಾತ್ರ.

ಭಾರತೀಯ ವಾಯು ಸೇನೆಯಲ್ಲಿ ವಿಂಗ್ ಕಮಾಂಡರ್‌ ಆಗಿ ಸೇವೆ ಸಲ್ಲಿಸಿದ ಮೊದಲ ದಂಪತಿ ಎಂಬ ಹೆಗ್ಗಳಿಕೆ ಇವರದ್ದು.

ವಿಜಯಲಕ್ಷ್ಮೀ ಅವರು ಜನಿಸಿದ್ದು 1924 ರ ಫ್ರೆಬ್ರವರಿ 27 ರಂದು, 1943ರಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಗೆ ಸೇರಿದ ಅವರು, 1948ರಲ್ಲಿ ಅತ್ಯುತ್ತಮ ನಿರ್ಗಮಿತ ವಿದ್ಯಾರ್ಥಿನಿ ಎಂಬ ಗೌರವಕ್ಕೂ ಪಾತ್ರರಾಗಿದ್ದರು.

ಅಲ್ಲದೆ, ವೈದ್ಯಕೀಯ ಕ್ಷೇತ್ರದಲ್ಲಿ ಬಾಲ್‌ಫೋರ್ ಸ್ಮಾರಕ ಪದಕ ಹಾಗೂ ಶಸ್ತ್ರಚಿಕಿತ್ಸೆಗಾಗಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.

ಸ್ತ್ರೀರೋಗ ವಿಭಾಗದಲ್ಲಿ ತಜ್ಞ ವೈದ್ಯರಾಗಿದ್ದ ವಿಜಯಲಕ್ಷ್ಮೀ ಚೆನ್ನೈನ ಎಗ್ಮೋರ್ ಹೆರಿಗೆ ಆಸ್ಪತ್ರೆಯಲ್ಲಿ ಸಹಾಯಕ ಸರ್ಜನ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. 1955ರ ಆಗಸ್ಟ್ 22 ರಂದು ಸೇನೆಗೆ ಸೇರಿದರು. ಅವರ ಕರ್ತವ್ಯದ ಅವಧಿಯಲ್ಲಿ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ವಾಯು ಸೇನೆಯ ಆಸ್ಪತ್ರೆ, ಕಾನ್ಪುರ, ಸಿಕಂದರಾಬಾದ್ ಸೇರಿದಂತೆ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

1977 ರಲ್ಲಿ ವಿಜಯಲಕ್ಷ್ಮೀ ಅವರಿಗೆ ವಿಶಿಷ್ಟ ಸೇವಾಪದಕವನ್ನು ನೀಡಿ ಪುರಸ್ಕರಿಸಲಾಯಿತು. 1979ರಲ್ಲಿ ಅವರು ವಿಂಗ್ ಕಮಾಂಡರ್ ಆಗಿ ನಿವೃತ್ತಿ ಹೊಂದಿದರು. ವೈದ್ಯ ವೃತ್ತಿಯೊಂದಿಗೆ ಅವರು ಕರ್ನಾಟಕ ಸಂಗೀತದಲ್ಲೂ ತರಬೇತಿ ಹೊಂದಿದ್ದರು, 15 ವರ್ಷಗಳಲ್ಲಿ ಅವರ ಪ್ರತಿಭೆ ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗುತ್ತಿತ್ತು.

ಸ್ತ್ರೀರೋಗ ತಜ್ಞೆಯಾಗಿದ್ದ ವಿಜಯಲಕ್ಷ್ಮೀ, ವೈದ್ಯಕೀಯ ಮಂಡಳಿಯ ಆಡಳಿತಾತ್ಮಕ ವಿಯಗಳಲ್ಲೂ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲದೆ, ನರ್ಸ್‌ಗಳಿಗೆ ಸ್ತ್ರೀರೋಗ ವಿಷಯಗಳಿಗೆ ಸಂಬಂಧಿಸಿದಂತೆ ತರಗತಿಗಳನ್ನೂ ಕೂಡ ತೆಗೆದುಕೊಳ್ಳುತ್ತಿದ್ದರು.

1962, 1966,1971ರ ಯುದ್ಧದ ಸಂದರ್ಭದಲ್ಲಿ ಗಾಯಾಳು ಸೈನಿಕರಿಗೆ ಚಿಕಿತ್ಸೆ ನೀಡುವ ಕೆಲಸವನ್ನೂ ಇವರು ಮಾಡಿದ್ದಾರೆ.ಭಾರತೀಯ ವಾಯುಸೇನೆಯಲ್ಲಿ ವಿಂಗ್ ಕಮಾಂಡರ್‌ ಆಗಿ ನೇಮಕಗೊಂಡಿದ್ದ ದೇಶದ ಮೊದಲ ಮಹಿಳಾ ಐಎಎಫ್ ಅಧಿಕಾರಿ ವಿಜಯಲಕ್ಷ್ಮೀ ಅ.18ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು.

   ಮುಂದೆ ಜೆಡಿಎಸ್ ಕಥೆ ಏನು? | Ramachandrappa | Oneindia Kannada

   ವಯೋಸಹಜ ಅನಾರೋಗ್ಯದಿಂದಾಗಿ ಅವರು ಬಳಲುತ್ತಿದ್ದರು. ಜಯನಗರದಲ್ಲಿರುವ ತಮ್ಮ ಪುತ್ರಿಯ ಮನೆಗೆ ಹೋಗಿದ್ದರು. ಹತ್ತು ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಅವರನ್ನು ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಕೊನೆಯುಸಿರೆಳೆದಿದ್ದಾರೆ.

   English summary
   Obituary: Born in February 1924, she did her MBBS and later was commissioned in the Army Medical Corps on August 22, 1955 and was seconded to the Air Force with effect from the same day. Born in February 1924, she did her MBBS and later was commissioned in the Army Medical Corps on August 22, 1955 and was seconded to the Air Force with effect from the same day.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X