ಬೆಂಗಳೂರಲ್ಲಿ ಹಾಡುಹಗಲೇ ಭೀಕರ ಕೊಲೆ: ಭಯ ಹುಟ್ಟಿಸುವಂತಿದೆ

ಬೆಂಗಳೂರು, ನವೆಂಬರ್ 14: ಬೆಂಗಳೂರಿನ ವಿಜಯನಗರದಲ್ಲಿ ಸಿಗರೇಟ್ ಖರೀಸಿದ ಹಣ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಸಂಭವಿಸಿ ಯುವಕರ ಗುಂಪೊಂದು ವ್ಯಕ್ತಿಯನ್ನು ಹಾಡಹಗಲೆ ಹತ್ಯೆಗೈದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಉಂಟು ಮಾಡಿದೆ.

ವಿಜಯನಗರದ ವಾಟರ್ ಟ್ಯಾಂಕ್ ಬಳಿ ಕಳೆದ ಅಕ್ಟೋಬರ್ 4ರಂದು ಹಾಡಹಗಲೇ ಈ ಘಟನೆ ನಡೆದಿದ್ದು, ಯುವಕರ ಗುಂಪೊಂದು ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಇರಿಯುತ್ತಿದ್ದ ವೇಳೆ ಸುತ್ತಮುತ್ತಲಿನ ಜನ ಗಾಬರಿಗೊಂಡು ಓಡಾಡುತ್ತಿದ್ದ ದೃಶ್ಯವನ್ನು ದಾರಿಹೋಕರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ಈ ಚಿತ್ರೀಕರಣ ವೇಳೆ ಹತ್ಯೆ ನಡೆಯುತ್ತಿದ್ದ ದೃಶ್ಯ ನೋಡಿ ಗಾಬರಿಗೊಂಡು ಓಡಾಡುತ್ತಿದ್ದರೂ ಹಲ್ಲೆ ತಡೆಯಲು ಯಾರೂ ಮುಂದಾಗಿಲ್ಲ, ಅಲ್ಲದೆ ವಾಟರ್ ಟ್ಯಾಂಕ್ ಬಳಿಯ ಮೈದಾನದಲ್ಲಿ ಆಟವಾಡುತ್ತಿದ್ದ ಯುವಕರು ಬೈಕ್‌ಗಳನ್ನು ಹತ್ತಿ ಓಡಿಹೋಗುತ್ತಿದ್ದ ದೃಶ್ಯವು ಚಿತ್ರೀಕರಣಗೊಂಡಿದೆ. ಬೆಳಗ್ಗೆಯೇ ಹತ್ಯೆ ನಡೆದಿದ್ದರೂ ಈ ಪ್ರದೇಶದಲ್ಲಿ ಪೊಲೀಸರೇ ಇರಲಿಲ್ಲ ಎಂಬುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

Video viral of barbaric murder in Vijaya nagar recently

ಘಟನೆಯಲ್ಲಿ ಮಹದೇವಯ್ಯ ಎಂಬ ವ್ಯಕ್ತಿ ಸಾವಿಗೀಡಾಗಿದ್ದು, ವಿನಯ್ ಎಂಬಾತ ತನ್ನ ಸಹಚರರೊಂದಿಗೆ ಹಲ್ಲೆ ನಡೆಸಿದ್ದಾನೆ ಎಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಕಳೆದು ತಿಂಗಳೇ ಕಳೆದರೂ ಹಾಡಹಗಲೇ ನಡೆದ ಬೀದಿ ಜಗಳ ಹತ್ಯೆಯಲ್ಲಿ ಅಂತ್ಯಗೊಂಡಿದೆ ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ.

ಘಟನೆ ಹಿನ್ನೆಲೆ: ವಿನಯ್ ಮತ್ತು ಆತನ ಸ್ನೇಹಿತರು ಅಂಗಡಿಗೆ ಬಂದು ಸಿಗರೇಟ್ ಖರೀದಿಸಿದ್ದಾರೆ, ಆ ವೇಳೆ ಸಿಗರೇಟ್ ಹಣವನ್ನು ಪೆಡಿಎಂ ನಲ್ಲಿ ಹಾಕುತ್ತೇನೆ ಎಂದು ಹೇಳಿದಾಗ ಇಲ್ಲ ಸಿಗರೇಟಿನ ಹಣವೆಲ್ಲಾ ಯಾರಾದರೂ ಪೆಟಿಎಂ ನಲ್ಲಿ ಹಾಕುತ್ತಾರಾ ಎಂದು ಅಂಗಡಿಯ ಹುಡುಗ ಪ್ರಶ್ನಿಸಿದ್ದಾನೆ. ಇದೇ ಮಾತು ತಾರಕಕ್ಕೆ ಹೋಗಿದೆ ಅಂಗಡಿ ಮಾಲೀಕ ಮತ್ತು ವಿನಯ್ ನಡುವೆ ಜಗಳ ಮುಂದುವರೆದು ಮಾಲೀಕನನ್ನು ಕೊಲೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+