ಯಶಪಂತಪುರ ಟೋಲ್‌ಗೇಟ್ : ಸಂಚಾರ ಮಾರ್ಗ ಬದಲು

ಬೆಂಗಳೂರು, ಡಿ. 4: ನಗರದ ಯಶವಂತಪುರ ಟೋಲ್ ಗೇಟ್ ಬಳಿ ಸಂಚಾರ ಸುಗಮಗೊಳಿಸಲು ಪೊಲೀಸರು ಪ್ರಾಯೋಗಿಕ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ವಾಹನಗಳಿಗೆ ಹಿಂದಿನ ವ್ಯವಸ್ಥೆ ಬದಲಾಯಿಸಿದ್ದು, ನೂತನ ಸಂಚಾರಿ ಮಾರ್ಗ ಸೂಚಿಸಿದ್ದಾರೆ. [ಬೆಂಗಳೂರಲ್ಲಿ ಆಟೋಗಳಿಗೆ ಪ್ರತ್ಯೇಕ ಪಥ]

ಬದಲಾದ ಮಾರ್ಗ ಹೀಗಿದೆ...

  • ಎಎಚ್ಎಂಟಿ ಮುಖ್ಯರಸ್ತೆ (ಮತ್ತಿಕೆರೆ)ಯಿಂದ ಬರುವ ಎಲ್ಲ ವಾಹನಗಳು ಯಶವಂತಪುರ ವೃತ್ತಕ್ಕೆ ಹೋಗಲು ಇನ್ನು ಮುಂದೆ ಯಶವಂತಪುರ ಟೋಲ್ ಗೇಟ್ ಬಳಿ ಎಡತಿರುವು ಪಡೆಯಬೇಕು. ನಂತರ ಸಿ.ವಿ. ರಾಮನ್ ರಸ್ತೆಯ ಬಿಎಚ್‌ಇಎಲ್ ಜಂಕ್ಷನ್‌ಗೆ (ಸಿಎನ್ಆರ್ ರಾವ್ ಅಂಡರ್‌ಪಾಸ್ ಮೇಲೆ) ಹೋಗಿ ಯು ತಿರುವು ಪಡೆದು ಯಶವಂತಪುರ ಕಡೆ ಸಂಚರಿಸಬೇಕು. [ಬೆಂಗಳೂರಲ್ಲಿ ಶೀಘ್ರ ಭಾರೀ ವಾಹನ ಸಂಚಾರ ನಿರ್ಬಂಧ]
  • ಮಲ್ಲೇಶ್ವರ ಸರ್ಕಲ್ ಮಾರಮ್ಮ ದೇವಸ್ಥಾನ/ ಸದಾಶಿವನಗರ ಪೊಲೀಸ್ ಠಾಣೆ ಕಡೆಯಿಂದ ಬರುವ ವಾಹನಗಳು ಮತ್ತಿಕೆರೆಯತ್ತ (ಎಚ್ಎಂಟಿ ಮುಖ್ಯರಸ್ತೆಗೆ) ತೆರಳಲು ಇನ್ನು ಮುಂದೆ ಯಶವಂತಪುರ ವೃತ್ತ ತಲುಪಿ 'ಯು' ತಿರುವು ಪಡೆಯಬೇಕು. ನಂತರ ಪುನಃ ಯಶವಂತಪುರ ಟೋಲ್ ಗೇಟ್‌ಗೆ ಬಂದು ಮುಕ್ತ ಎಡತಿರುವು ಮೂಲಕ ಸಂಚರಿಸಬೇಕು. [ಸಂಚಾರಿ ನಿಯಮ ಪಾಲಿಸಿದರೆ ಪೆಟ್ರೋಲ್ ಬಹುಮಾನ]
traffic

"ಸಂಚಾರ ಸುಗಮಗೊಳಿಸಲು ಯಶವಂತಪುರ ಟೋಲ್‌ಗೇಟ್‌ನಲ್ಲಿ ಪ್ರಾಯೋಗಿಕವಾಗಿ ಬಲತಿರುವು ನಿಷೇಧಿಸಲಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕು" ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. [ಕಳ್ಳನನ್ನು ಹಿಡಿದ ಸಂಚಾರಿ ಪೊಲೀಸ್ ಪೇದೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+