ಕೆಂಪೇಗೌಡ ಏರ್‌ಪೋರ್ಟ್‌ಗೆ ವಾಯುವಜ್ರ ಬಸ್ ಸೇವೆ ಅಬಾಧಿತ
ಬೆಂಗಳೂರು, ಜನವರಿ 8: ವಿಮಾನ ಪ್ರಯಾಣಿಕರಿಗೆ ಭಾರತ ಬಂದ್‌ನಿಂದ ಸಮಸ್ಯೆಯಾಗದಂತೆ ತಡೆಯಲು ಬಿಎಂಟಿಸಿ ವಾಯುವಜ್ರ ಬಸ್ ವ್ಯವಸ್ಥೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಂದುವರೆಸಿದೆ.
ಪ್ರತಿದಿನ ಸಾವಿರಾರು ಪ್ರಯಾಣಿಕರು ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಹಾಗೂ ವಿಮಾನ ನಿಲ್ದಾಣದಿಂದ ನಗರಕ್ಕೆ ಸಂಚರಿಸುತ್ತಾರೆ. ಕ್ಯಾಬ್ ಸೇವೆಗಳೂ ಇರದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಾಣಿಕರು ತೆರಳುವುದು ದೊಡ್ಡ ಸಮಸ್ಯೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆಯಿಂದ ವಿಮಾನ ನಿಲ್ದಾಣ ಸೇವೆಯನ್ನು ಮುಂದುವರೆಸಕು ಬಿಎಂಟಿಸಿ ನಿರ್ಧರಿಸಿದೆ.

ಇನ್ನು ಮೆಜೆಸ್ಟಿಕ್ ಸುತ್ತಮುತ್ತ ಪ್ರಯಾಣಿಕರು ಬಸ್, ಆಟೋಗಳಿಲ್ಲದೆ ಪರದಾಡುವಂತಾಗಿದೆ, ಊರಿಗೆ ವಾಪ್ ಹೋಗುವುದಕ್ಕೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆಟೋ ಗಳು ಕೆಲವು ಸಂಚರಿಸುತ್ತಿದ್ದು, ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ.
ಮನೆಯಿಂದ ಹೊರಗಡೆ ಹೋದರೆ ಗಲಾಟೆ ನಡೆಯಬಹುದು ಎಂದು ಹೆದರಿ ಎಲ್ಲರೂ ಮನೆಯಲ್ಲೇ ಕುಳಿತಿದ್ದಾರೆ, ನಿನ್ನೆ ಬೇರೆಡೆಯಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದವರಿಗೆ ಸಾಕಷ್ಟು ತೊಂದರೆಯಾಯಿತು. ಹಾಗಾಗಿ ಬಿಎಂಟಿಸಿ ವಾಯುವಜ್ರ ಬಸ್ ವ್ಯವಸ್ಥೆಯನ್ನು ಮುಂದುವರೆಸಿದೆ.












Click it and Unblock the Notifications