ಸಿಎಂ ಗೃಹ ಕಚೇರಿಯಲ್ಲಿ ಅತ್ಯಾಧುನಿಕ ಸ್ಟುಡಿಯೋ 'ವರುಣಾ' ಉದ್ಘಾಟನೆ
ಎಲ್ಲಾ ಮಾಧ್ಯಮಗಳ ಜತೆ ಮುಖ್ಯಮಂತ್ರಿಗೆ ಸಂವಾದ ಕಲ್ಪಿಸಲು ಅನುಕೂಲವಾಗುವಂತೆ ಈ ಸ್ಟುಡಿಯೋ ವಿನ್ಯಾಸ ಮಾಡಲಾಗಿದೆ. ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಉದ್ದೇಶದಿಂದ ಇದನ್ನು ಅಸ್ತಿತ್ವಕ್ಕೆ ತರಲಾಗಿದೆ.

ಬೆಂಗಳೂರು, ಮೇ 11: ಗೃಹ ಕಚೇರಿ 'ಕೃಷ್ಣ' ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಅತ್ಯಾಧುನಿಕ ಸ್ಟುಡಿಯೋ 'ವರುಣಾ'ದ ಉದ್ಘಾಟನೆ ನಡೆಯಿತು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಟುಡಿಯೋ ಉದ್ಘಾಟಿಸಿದರು.

ಎಲ್ಲಾ ಮಾಧ್ಯಮಗಳ ಜತೆ ರಾಜ್ಯದ ಮುಖ್ಯಮಂತ್ರಿಗೆ ಸಂವಾದ ಕಲ್ಪಿಸಲು ಅನುಕೂಲವಾಗುವಂತೆ ಈ ಸ್ಟುಡಿಯೋ ವಿನ್ಯಾಸ ಮಾಡಲಾಗಿದೆ. ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಉದ್ದೇಶದಿಂದ ಈ 'ವರುಣಾ' ಸ್ಟುಡಿಯೋ ಅಸ್ತಿತ್ವಕ್ಕೆ ತರಲಾಗಿದೆ.
ಸದ್ಯ ಇರುವ ಮುಖ್ಯಮಂತ್ರಿಗಳ ವಸತಿ ಮತ್ತು ಗೃಹ ಕಚೇರಿಗಳಲ್ಲಿ ಸ್ಥಳಾವಕಾಶದ ಕೊರತೆ ಇದೆ. ಈ ಕಾರಣಕ್ಕೆ ಗೃಹ ಕಚೇರಿ ಕೃಷ್ಣಾ ಸಮೀಪದಲ್ಲಿ ಸುಸಜ್ಜಿತ ಸ್ಟುಡಿಯೋ ನಿರ್ಮಿಸಲಾಗಿದೆ. ಎಲ್ಲಾ ಮಾಧ್ಯಮಗಳ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡು ಅತ್ಯಾಧುನಿಕ ತಂತ್ರಜ್ಞಾನದ ಜತೆ ಈ ಸ್ಟುಡಿಯೋ ನಿರ್ಮಿಸಲಾಗಿದೆ.

ಈ ಸ್ಟುಡಿಯೋದಲ್ಲಿ ಮುಖ್ಯಮಂತ್ರಿಗಳನ್ನು ಸಂದರ್ಶಿಸಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾದ ಹಿನ್ನೆಲೆ ಪರದೆ, ಟೆಲಿಪ್ರಾಂಪ್ಟರ್, ರೆಕಾರ್ಡಿಂಗ್ ಸಲಕರಣೆಗಳು, ಕಂಪ್ಯೂಟರ್ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಮುಖ್ಯಮಂತ್ರಿಗಳು ಕಾಲ ಕಾಲಕ್ಕೆ ನೀಡುವ ಸಂದೇಶಗಳು, ಹೇಳಿಕೆಗಳ ರೆಕಾರ್ಡಿಂಗ್ ಕೂಡಾ ಈ ಸ್ಟುಡಿಯೋದಲ್ಲಿ ನಡೆಸಲಾಗುತ್ತದೆ. ಜತೆಗೆ ಎಲೆಕ್ಟ್ರಾನಿಕ್ ಮಾಧ್ಯಮಗಳ ವರದಿಗಾರರು ತಮ್ಮ ಕ್ಯಾಮೆರಾಗಳ ಜತೆ ನೇರವಾಗಿ ಬಂದು ಈ ಸ್ಟುಡಿಯೋದಲ್ಲಿ ಸಂದರ್ಶನಗಳನ್ನೂ ನಡೆಸಬಹುದು.

Click it and Unblock the Notifications