ಅನಂತ ನಮನದಲ್ಲಿ ಸಹಸ್ರಾರು ಕಂಠಗಳಿಂದ ವಂದೇ ಮಾತರಂ ಗಾಯನ
ಬೆಂಗಳೂರು, ಜನವರಿ 1: ಅದಮ್ಯ ಚೇತನ ಸಂಸ್ಥೆಯು ಹಲವಾರು ವರ್ಷಗಳಿಂದ ಅದಮ್ಯ ಚೇತನ ಉತ್ಸವವನ್ನು ಆಯೋಜಿಸುತ್ತಾ ಬಂದಿದೆ. ಆದರೆ ಈ ಬಾರಿ ಏಕಕಾಲಕ್ಕೆ ಅಹಸ್ರಾರು ಸಂಖ್ಯೆಯಲ್ಲಿ ವಂದೇ ಮಾತರಂ ಹಾಡುತ್ತಿರುವುದು ವಿಶೇಷವಾಗಿದೆ.
ಅದಮ್ಯ ಚೇತನ ಸಂಸ್ಥೆಯ ಪ್ರಧಾನ ಪೋಷಕರಾಗಿದ್ದ ಹಾಗೂ ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ ನೆನಪಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಅನಂತ ನಮನ ಚಿತ್ರ ನಮನ-ಗೀತ, ನಮನ-ನುಡಿ ನಮನ ಕಾರ್ಯಕ್ರಮವು ಈಗಾಗಲೇ ಆರಂಭಗೊಂಡಿದ್ದು, ಜನವರಿ 1ರಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲು ಮೈದಾನದಲ್ಲಿ ಕಾರ್ಯಕ್ರಮ ಮುಂದುವರೆಯಲಿದೆ.

ವಂದೇ ಮಾತರಂ ಗಾಯನ ಹಾಗೂ ಓ ನನ್ನ ಚೇತನ ಆಗು ನೀ ಅನಿಕೇತನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಆಗಮಿಸಲಿದ್ದಾರೆ.












Click it and Unblock the Notifications