• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ವಾರಂಟೈನ್ ಡೈರಿ: ಹೋಟೆಲ್ ಶುಲ್ಕ, ವೈದ್ಯರ ನೆರವು ಹೇಗಿದೆ?

|

ಬೆಂಗಳೂರು, ಮೇ 13: ವಂದೇ ಭಾರತ್ ಮಿಷನ್ ಮೂಲಕ ವಿದೇಶದಲ್ಲಿದ್ದ ವಿದ್ಯಾರ್ಥಿಗಳು, ಉದ್ಯೋಗಿಗಳನ್ನು ಭಾರತಕ್ಕೆ ವಿಶೇಷ ವಿಮಾನ ಮೂಲಕ ಕರೆಸಿಕೊಳ್ಳಲಾಗಿದೆ. ಲಂಡನ್ನಿಂದ ಬೆಂಗಳೂರಿಗೆ ಬಂದು ಕ್ವಾರಂಟೈನ್ ಆಗಿರುವವರು ಈಗ ಹಲವು ವಿವಿಧ ಸ್ಟಾರ್ ಹೋಟೆಲ್ ಗಳಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ. ಸ್ಟಾರ್ ಹೋಟೆಲ್ ನಲ್ಲಿ ತಂಗಿರುವವರ ಕ್ವಾರಂಟೈನ್ ಡೈರಿ ವಿವರ ಇಲ್ಲಿದೆ...

ಮೇ 10ರಂದು ಬೆಳಗ್ಗೆ 9.45 ಕ್ಕೆ ಲಂಡನ್ ವಿಮಾನ ನಿಲ್ದಾಣದಿಂದ ಹೊರಟ ವಿಶೇಷ ವಿಮಾನ AI 1803 ಸುರಕ್ಷಿತವಾಗಿ ಬೆಂಗಳೂರಿನ ವಿಮಾನ ನಿಲ್ದಾಣವನ್ನು ಮೇ.11ರ ಮಧ್ಯರಾತ್ರಿ 3 ಗಂಟೆಗೆ ತಲುಪಬೇಕಾಗಿತ್ತು. ಆದರೆ, ಒಂದೂವರೆ ಗಂಟೆ ತಡವಾಗಿ ವಿಮಾನ ನಿಲ್ದಾಣ ತಲುಪಿದೆ.

ವಂದೇ ಭಾರತ್ ಮಿಷನ್; ದೇಶಕ್ಕೆ ವಾಪಸ್ ಆದವರು ಎಷ್ಟು ಜನ?

ಏರ್ ಇಂಡಿಯಾ, ನಾಗರಿಕ ವಿಮಾನಯಾನ ಸಚಿವಾಲಯ, ಕರ್ನಾಟಕ ಸರ್ಕಾರ, ಇಂಗ್ಲೆಂಡಿನ ರಾಯಭಾರ ಕಚೇರಿ ಜೊತೆಗೆ ವಿದೇಶಾಂಗ ಸಚಿವಾಲಯವು ಪ್ರಯಾಣಿಕರ ಸುರಕ್ಷಿತ ಪ್ರಯಾಣವನ್ನು ಖಾತ್ರಿ ಪಡಿಸಿವೆ. ಏರ್ ಇಂಡಿಯಾ ವಿಶೇಷ ವಿಮಾನದಲ್ಲಿ ಪ್ರಯಾಣಿಕರಿಗೆ ನೀಡಿದ ಸೌಲಭ್ಯದ ಬಗ್ಗೆ ಬೆಂಗಳೂರು ನಿವಾಸಿ ಮೇಘನಾ ಅವರು ತಮ್ಮ ಅಪ್ಡೇಟ್ ಮುಂದುವರೆಸಿದ್ದಾರೆ.

ವಂದೇ ಭಾರತ್ ಮಿಷನ್ 2: ಈ ಸಲ ಎಷ್ಟು ಮಂದಿ ಭಾರತಕ್ಕೆ ಬರಲಿದ್ದಾರೆ?

ಪ್ರಯಾಣಿಕರ ಸಂಪೂರ್ಣ ಪರೀಕ್ಷೆ, ಸ್ಕ್ರೀನಿಂಗ್ ವ್ಯವಸ್ಥೆಯ ಪರಿಶೀಲನೆ ನಂತರ ಹಲವು ಬಿಎಂಟಿಸಿ ಬಸ್ ಗಳ ಮೂಲಕ ಕ್ವಾರಂಟೈನ್ ನಿಗದಿತ ಹೋಟೆಲ್ ಗೆ ಕರೆದೊಯ್ಯಲಾಗಿದೆ. ಇಲ್ಲಿ ಪ್ರಯಾಣಿಕರಿಗೆ ಆಯ್ಕೆ ಸೌಲಭ್ಯಗಳಿಲ್ಲ. ಹೋಂ ಕ್ವಾರಂಟೈನ್ ನೀಡಲಾಗುವುದಿಲ್ಲ ಎಂದಿದ್ದಾರೆ. ಹೋಟೆಲ್ ನಲ್ಲಿರುವ ಸೌಲಭ್ಯ, ವೈದ್ಯಕೀಯ ನೆರವು, ಊಟದ ವ್ಯವಸ್ಥೆ, ಖರ್ಚು ವೆಚ್ಚದ ಬಗ್ಗೆ ಮಾಹಿತಿಯನ್ನು ಸರಣಿ ಟ್ವೀಟ್ ಮೂಲಕ ನೀಡಿದ್ದಾರೆ. ಚಿತ್ರ, ಮಾಹಿತಿ ಕೃಪೆ: ಮೇಘನಾ

ಕೆಐಎಎಲ್ ನಿಂದಲೇ ಶುರು ಮಾಡೋಣ

ಕೆಐಎಎಲ್ ನಿಂದಲೇ ಶುರು ಮಾಡೋಣ

ಮೊದಲಿಗೆ ಏರ್ ಇಂಡಿಯಾಕ್ಕೆ ಮತ್ತೊಮ್ಮೆ ಧನ್ಯವಾದಗಳು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿಬ್ಬಂದಿಗೆ ಕೂಡಾ. ಪಿಪಿಇ ಕಿಟ್ ಧರಿಸಿ ನಮಗಾಗಿ ಶ್ರಮವಹಿಸಿ ಎಲ್ಲವನ್ನು ಮಾಡುತ್ತಿದ್ದಾರೆ. ನಮಗೆ ಸ್ಯಾಂಡ್ವಿಚ್, ನೀರಿನ ಬಾಟೆಲ್ ನೀಡಿದ್ದಾರೆ. ಇದಾದ ಬಳಿಕ ನಾವು ಕ್ವಾರಂಟೈನ್ ಹೋಟೆಲ್ ಗೆ ಹೋಗಲು ಸಿದ್ಧರಾದೆವು. ಬಜೆಟ್, 3 ಸ್ಟಾರ್, 5 ಸ್ಟಾರ್ ಹೋಟೆಲ್ ಇರುತ್ತದೆ. ಆರೋಗ್ಯ ತಪಾಸಣೆ ವಿವರದ ಅಧಾರದ ಮೇಲೆ ಪ್ರಯಾಣಿಕರಿಗೆ ಕ್ವಾರಂಟೈನ್ ಸ್ಥಳ ನಿಗದಿ ಮಾಡಲಾಗಿದೆ. ನಮಗೆ ಆಯ್ಕೆಗಳಿಲ್ಲ. ಯಾರಿಗೂ ಹೋಂ ಕ್ವಾರಂಟೈನ್ ಸೌಲಭ್ಯವಿಲ್ಲ.

ಬಹುದಿನಗಳ ಬಳಿಕ ಬಿಎಂಟಿಸಿ ಬಸ್ ಹತ್ತಿದೆ

ಬಹುದಿನಗಳ ಬಳಿಕ ಬಿಎಂಟಿಸಿ ಬಸ್ ಹತ್ತಿದೆ

ಕೆಐಎಎಲ್ ನಿಂದ ಹೋಟೆಲ್ ತನಕ ಪ್ರಯಾಣಕ್ಕೆ ಬಿಎಂಟಿಸಿ ಬಸ್ ಬಳಸಲಾಗುತ್ತಿದೆ. 20 ಜನ ಮಾತ್ರ ಕುಳಿತುಕೊಳ್ಳಬಹುದು. ಯಾವುದೆ ಪೇಮೆಂಟ್ ಇಲ್ಲ. ಹೋ ಹೇಳೋದು ಮರೆತ್ತಿದ್ದೆ.. ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆದ ಬಳಿಕ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ನಂತರ ಇಮಿಗ್ರೇಷನ್ ಚೆಕ್, ಬ್ಯಾಗೇಜ್ ಪಡೆಯಲು ಅವಕಾಶ, ಹೋಟೆಲ್ ಬುಕ್ಕಿಂಗ್ ವಿವರ ನೀಡಲಾಗುತ್ತದೆ. ಈ ನಡುವೆ ಕಾಯುವ ಕುಳಿತಾಗ ಸ್ಯಾಂಡ್ವಿಚ್ ತಿಂದು, ನೀರು ಕುಡಿದೆ. ಹಾಗೆ ಕ್ವಾರಂಟೈನ್ ಸೀಲ್ ಕೂಡಾ ಬೀಳುತ್ತೆ. ಆರೋಗ್ಯವಾಗಿದ್ದರೂ ಕ್ವಾರಂಟೈನ್ ನಲ್ಲಿರಬೇಕಾದರೆ ಸೀಲ್ ಕಡ್ಡಾಯ.

ವಿದೇಶದಿಂದ ಭಾರತಕ್ಕೆ ಬರಲು, ಇಲ್ಲಿಂದ ವಿದೇಶಕ್ಕೆ ತೆರಳಲು ಮಾರ್ಗಸೂಚಿ

ಸೀಲ್ ಬಿದ್ದ ಬಳಿಕ ಹೋಟೆಲ್ ನಲ್ಲಿ ವೈದ್ಯಕೀಯ ಪರೀಕ್ಷೆ

ಸೀಲ್ ಬಿದ್ದ ಬಳಿಕ ಹೋಟೆಲ್ ನಲ್ಲಿ ವೈದ್ಯಕೀಯ ಪರೀಕ್ಷೆ

ಆರೋಗ್ಯ ಪರೀಕ್ಷೆಯಲ್ಲಿ ಕೆಮ್ಮು, ಶೀತ, ದೇಹದ ಉಷ್ಣಾಂಶ, ರಕ್ತದಲ್ಲಿನ ಆಮ್ಲಜನಕ ಪ್ರಮಾಣ, ಹೃದಯ ಬಡಿತದ ದರ ಎಲ್ಲವೂ ಸೇರಿರುತ್ತದೆ. ನನಗೆ ಯಾವ ಆರೋಗ್ಯ ಸಮಸ್ಯೆಯೂ ಇರಲಿಲ್ಲ. ಮೊದಲ ದಿನದಂದು ಸ್ವಾಬ್ ಟೆಸ್ಟ್ ಮಾಡಲಾಗುತ್ತದೆ. ಮೂಗು ಹಾಗೂ ಗಂಟಲ ದ್ರವ ಪಡೆದು ಪರೀಕ್ಷೆ ಮಾಡುತ್ತಾರೆ. ಸ್ವಾಬ್ ಟೆಸ್ಟ್ ಮಾಡುವಾಗ ತುಂಬಾ ನೋವಾಗುತ್ತದೆ ಎಂದು ಹೆದರಿದ್ದೆ. ಆದರೆ, ಇದು ಯಾವುದೇ ರೀತಿಯಲ್ಲಿ ನೋವುಂಟು ಮಾಡುವ ಪರೀಕ್ಷೆ ಅಲ್ಲವೇ ಅಲ್ಲ.

ಸ್ಟಾರ್ ಹೋಟೆಲ್ ಊಟ ಹೇಗಿರುತ್ತೆ?

ಸ್ಟಾರ್ ಹೋಟೆಲ್ ಊಟ ಹೇಗಿರುತ್ತೆ?

ನನಗೆ ಯಶವಂತಪುರದಲ್ಲಿರುವ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಊಟ, ತಿಂಡಿಯನ್ನು ನಮ್ಮ ರೂಮಿನ ಬಾಗಿಲ ಬಳಿ ಇಟ್ಟು ಹೋಗುತ್ತಾರೆ. ಟವೆಲ್, ಸೋಪು, ಕಾಫಿ, ಟೀ, ನೀರಿನ ಬಾಟೆಲ್ ಎಲ್ಲವೂ ಕಾರಿಡಾರ್ ನಲ್ಲಿರುತ್ತೆ. ಬೇಕಾದಾಗ ಹೋಗಿ ಪಡೆಯಬಹುದು. ಹೆಚ್ಚುವರಿ ಮಾಸ್ಕ್, ಸ್ಯಾನಿಟೈಸರ್ ಗಳನ್ನು ಹೋಟೆಲ್ ಲಾಬಿಯಲ್ಲಿ ಇಡಲಾಗಿರುತ್ತದೆ. ಊಟಕ್ಕೆ ಅನ್ನ, ಚಪಾತಿ ,ಸಲಾಡ್ ,ಸಿಹಿ ಪದಾರ್ಥ, ಮೊಸರನ್ನ, ಹಣ್ಣು ಇರುತ್ತೆ, ತಿಂಡಿ ಕೂಡಾ ಸಾಕಾಗುವಷ್ಟು ಸಿಗುತ್ತದೆ.

ಲಾಕ್ಡೌನ್ : ಕಾರ್ಮಿಕ, ಪ್ರವಾಸಿಗ, ವಿದ್ಯಾರ್ಥಿಗಳ ನೆರವಿಗೆ ಸೇವಾ ಸಿಂಧು

ಹೋಟೆಲ್ ಶುಲ್ಕವನ್ನು ನಾಗರಿಕರೇ ಭರಿಸಬೇಕು

ಹೋಟೆಲ್ ಶುಲ್ಕವನ್ನು ನಾಗರಿಕರೇ ಭರಿಸಬೇಕು

ಬೆಂಗಳೂರಿಗೆ ಸಾವಿರಾರು ಮಂದಿ ವಿದೇಶದಿಂದ ಬಂದಿಳಿಯುತ್ತಿದ್ದಾರೆ. ಅವರಿಗೆ ಕ್ವಾರಂಟೈನ್ ಅವಧಿಯಲ್ಲಿ ಗ್ರೇಡ್ ಆಧಾರದ ಹೋಟೆಲ್ ಸಿಗಲಿದೆ. ಕ್ವಾರಂಟೈನ್ ನಲ್ಲಿ ಸಿಗಲಿರುವ ಹೋಟೆಲ್ ಹಾಗೂ ದರ ವಿವರ ಹೀಗಿದೆ:

5 ಸ್ಟಾರ್: ಒಬ್ಬರಿಗೆ ₹4100

5 ಸ್ಟಾರ್: ಇಬ್ಬರಿಗೆ ₹5900

3 ಸ್ಟಾರ್: ಒಬ್ಬರಿಗೆ ₹1850

3 ಸ್ಟಾರ್: ಇಬ್ಬರಿಗೆ ₹2450

ಸಾಧಾರಣ ಹೋಟೆಲ್: ₹1200

ವಿದೇಶದಿಂದ ಬೆಂಗಳೂರಿಗೆ ಬಂದವರಿಗೆ ಸೌಲಭ್ಯ

ವಿದೇಶದಿಂದ ಬೆಂಗಳೂರಿಗೆ ಬಂದವರಿಗೆ ಸೌಲಭ್ಯ

ಎ, ಬಿ ಮತ್ತು ಸಿ ಗ್ರೇಡ್ ಗಳಾಗಿ ವಿಂಗಡಣೆ ಲಂಡನ್, ಸಿಂಗಪುರದಿಂದ ರಾಜ್ಯಕ್ಕೆ ಬಂದಿರುವ ಕನ್ನಡಿಗರು ಉಳಿದುಕೊಳ್ಳಲು ಹೋಟೆಲ್, ರೆಸಾರ್ಟ್ ಗಳನ್ನು ಬುಕ್ ಮಾಡಲಾಗಿದೆ. ಪ್ರಯಾಣಿಕರ ಆರೋಗ್ಯ ಪರಿಸ್ಥಿತಿಗೆ ಅನುಗುಣವಾಗಿ ಎ, ಬಿ ಮತ್ತು ಸಿ ಗ್ರೇಡ್ ಗಳಾಗಿ ವಿಂಗಡಣೆ ಮಾಡಲಾಗಿದ್ದು, ಎ ಗ್ರೇಡ್ ಹೊಂದಿರುವವರು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಬಿ ಮತ್ತು ಸಿ ಗ್ರೇಡ್ ಹೊಂದಿರುವವರು ಹೋಟೆಲ್ ಮತ್ತು ರೆಸಾರ್ಟ್ ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ಕ್ವಾರಂಟೈನ್ ನಲ್ಲಿರುವವರೇ ವೆಚ್ಚವನ್ನು ಭರಿಸಬೇಕು. ಪಾಸ್ ಪೋರ್ಟ್ ದಾಖಲೆ ನೀಡಿ ಸಿಮ್ ಪಡೆಯಲು ಅವಕಾಶ ನೀಡಲಾಗಿದೆ.

ವಂದೇ ಭಾರತ್ ಮಿಷನ್: ಲಂಡನ್ To ಬೆಂಗಳೂರು ಯಶಸ್ವಿ

14 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯ

ಭಾರತಕ್ಕೆ ಆಗಮಿಸಿದ ಬಳಿಕ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಒಂದೊಮ್ಮೆ ಸ್ಕ್ರೀನಿಂಗ್ ಸಂದರ್ಭದಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿದರೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. 14 ದಿನಗಳ ಕ್ವಾರಂಟೈನ್ ಅವಧಿ ಬಳಿಕ ನಡೆಸಿದ ತಪಾಸಣೆಯಲ್ಲಿ ಕೊರೊನಾ ವೈರಸ್ ನೆಗಟಿವ್ ಬಂದಿದ್ದಲ್ಲಿ ಮಾತ್ರ ಮನೆಗೆ ತೆರಳಲು ಅವಕಾಶ ನೀಡಲಾಗುತ್ತದೆ. ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರಿಗೆ ತಂಗಲು ತಾಜ್ ವಿವಾಂತಾ, ಲೆಮನ್ ಟ್ರೀ ಸೇರಿದಂತೆ ಫೈವ್ ಸ್ಟಾರ್, ತ್ರೀ ಸ್ಟಾರ್ ಹೋಟೆಲ್ ಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. 14 ದಿನಗಳ ಕ್ವಾರಂಟೈನ್ ನಂತರ ಹೋಂ ಕ್ವಾರಂಟೈನ್ ಸೂಚಿಸಲಾಗುತ್ತದೆ.

English summary
Vande Bharath Mission: Updates about quarantine facilities, Hotel Charges, Food, Health Checkup and much more is here from Meghana's quarantine diary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X