ಶ್ರೀ ರಾಮಾಯಣ ದರ್ಶನಂ ಆಧಾರಿತ ನಾಟಕ 'ವಾಲಿವಧೆ' ಪ್ರದರ್ಶನ

ಬೆಂಗಳೂರು, ಜನವರಿ 22 : ಅವಿರತ ಪ್ರತಿಷ್ಠಾನವು ರಾಷ್ಟ್ರಕವಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿ ಆಧಾರಿತ ವಾಲಿವಧೆ ನಾಟಕವನ್ನು ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಕೆಇಎ ಪ್ರಭಾತ್ ರಂಗಮಂದಿರದಲ್ಲಿ ಫೆಬ್ರವರಿ 3 ರಂದು ಆಯೋಜಿಸಿದೆ.

ಈ ಶತಮಾನದ ಮೇರು ಕೃತಿಗಳಲ್ಲಿ ಒಂದಾದ ರಾಷ್ಟ್ರಕವಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಯು ರಾಮಾಯಣಕ್ಕೆ ಹೊಸ ನೋಟ ಹಾಗೂ ಹೊಸ ಭಾಷ್ಯವೊಂದನ್ನು ಕಟ್ಟಿಕೊಟ್ಟಿದ್ದಲ್ಲದೆ ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದುಕೊಟ್ಟಿತು. ಈ ಕೃತಿಗೆ ಗೌರವಾರ್ಪಣವಾಗಿ ಅವಿರಿತ ಪ್ರತಿಷ್ಠಾನವು ಶ್ರೀ ರಾಮಾಯಣ ದರ್ಶನಂ ಪ್ರಸಂಗವೊಂದರ ಮನರಂಜನೀಯ ದೃಶ್ಯ ರೂಪಕವಾದ ವಾಲಿವಧೆ ನಾಟಕವನ್ನು ಆಯೋಜಿಸಿದೆ.

Vali Vadhe play base on Sri Ramayana Darshanam performance

ನಾಟಕವು ಫೆಬ್ರವರಿ 3 ರಂದು ಬೆಳಗ್ಗೆ 11 ಗಂಟೆಯಿಂದ 12.30 ಹಾಗೂ ಸಂಜೆ 5 ರಿಂದ 6.30 ರವರೆಗೆ ನಡೆಯಲಿದೆ. ಟಿಕೇಟ್ ದರ 200 ರೂ. ಈ ನಾಟಕವು ಮಕ್ಕಳನ್ನು ತಲ್ಲೀನರಾಗಿಸಿ, ಪ್ರೌಢರನ್ನು ಭಾವುಕವಾಗಿಸುವ ಅತ್ಯಂತ ವಿಶಿಷ್ಟ ಹಾಗೂ ನವಿರಾದ ನಾಟಕವಾಗಿದೆ. ಶೇಷಗಿರಿ ಹಳ್ಳಿಯ ರೈತಾಪಿ ಜನ ತಾವೇ ಕಟ್ಟಿಕೊಂಡ ಶ್ರೀ ಗಜಾನನ ಯುವಕ ಮಂಡಲಿ ಮೂಲಕ, ಎಂ. ಗಣೇಶ ಅವರ ನಿದೇರ್ಶನದಲ್ಲಿ ನಾಟಕವನ್ನು ಪ್ರಯೋಗಿಸಲಾಗುತ್ತಿದೆ.

ಏನು- ವಾಲಿವಧೆ ನಾಟಕ
ಎಲ್ಲಿ-ಕೆಇಎ ಪ್ರಭಾತ್ ರಂಗಮಂದಿರ, ಬಸವೇಶ್ವರನಗರ
ಯಾವಾಗ-ಫೆಬ್ರವರಿ 3
ಸಮಯ-ಬೆಳಗ್ಗೆ 11 ಗಂಟೆಯಿಂದ 12.30 ಹಾಗೂ ಸಂಜೆ 5 ರಿಂದ 6.30

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+