ಪ್ರೇಮಿಗಳ ದಿನಾಚರಣೆ: ದಾಖಲೆ ಮಟ್ಟದಲ್ಲಿ ಓಯೋ ರೂಂ ಬುಕ್ಕಿಂಗ್‌, ಅತೀ ಹೆಚ್ಚು ಸೇಲಾಗಿದ್ದು ಯಾವ ಫ್ಲೇವರ್‌ ಕಾಂಡೋಮ್‌ ಗೊತ್ತಾ?

ಬೆಂಗಳೂರು, ಫೆಬ್ರವರಿ, 15: ಈಗಾಗಲೇ 2024ರ ವರ್ಷವರ್ಷದ ಮೊದಲ ರಾತ್ರಿ ಅಂದರೆ 2023ರ ಡಿಸೆಂಬರ್‌ 31ರ ರಾತ್ರಿ ದಾಖಲೆ ಮಾಟ್ಟದಲ್ಲಿ ಒಯೋ ರೂಮ್‌ಗಳು ಬುಕ್ಕಿಂಗ್‌ ಆಗಿದ್ದು, ಅಷ್ಟೇ ಪ್ರಮಾಣದಲ್ಲಿ ಕಾಂಡೋಮ್‌ಗಳು ಕೂಡ ಮಾರಾಟವಾಗಿದ್ದವು. ಇನ್ನು ಇದೀಗ ಪ್ರೇಮಿಗಳ ದಿನದಂದು ಕೂಡ ದಾಖಲೆ ಮಟ್ಟದಲ್ಲಿ ಕಾಂಡೋಮ್‌ಗಳನ್ನು ಖರೀದಿ ಮಾಡಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಇನ್ನು ಹಲವೆಡೆ ಕೆಲವು ಓಯೋ ರೊಂಗಳನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿದ್ದು, ಈ ಇದೀಗ ವಿಡಿಯೋಗಳು ಕೂಡ ಭಾರೀ ವೈರಲ್‌ ಆಗುತ್ತಿವೆ.

ಪ್ರೇಮಿಗಳ ದಿನಾಚರಣೆ ಅಂದರೆ ಸಾಕು ಈಗಿನ ಯುವಪೀಳಿಗೆಯವರಿಗೆ ಒಂಥರಾ ಜೋಶ್‌. ಇನ್ನು ಈ ದಿನ ದಾಖಲೆ ಮಟ್ಟದಲ್ಲಿ ಓಯೋ ರೂಂಗಳು ಬಿಕ್ಕಿಂಗ್‌ ಆಗಿವೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಹಾಗಾದರೆ ರಾಜ್ಯದ ಯಾವ ನಗರದಲ್ಲಿ ಹೆಚ್ಚಾಗಿ ಓಯೋ ರೂಮ್‌ಗಳನ್ನು ಬುಕ್ಕಿಂಗ್‌ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Valentines Day: OYO rooms booking at record level in this major city , know details

ಫೆಬ್ರವರಿ 14ರ ಪ್ರೇಮಿಗಳ ದಿನದಿಂದಲೂ ಬಹತೇಕ ನಗರದಗಳಲ್ಲಿ ಓಯೋ ರೂಂಗಳಿಗೆ ಡಿಮ್ಯಾಂಡ್‌ ಹೆಚ್ಚಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಕಳೆದ ಎರಡು ದಿನಗಳಲ್ಲಿ ಕಾಂಡೋಮ್‌ಗಳು ಕೂಡ ಹೆಚ್ಚು ಮಾರಾಟಾವಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಹೆಚ್ಚು ಮಾರಾಟವಾಗಿದ್ದು ಯಾವ ಫ್ಲೇವರ್‌ ಕಾಂಡೋಮ್‌ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಹೆಚ್ಚಾಗಿ ಬಳಸಿದ ಕಾಂಡೋಮ್‌: ಲೈಂಗಿಕತೆಯಲ್ಲಿ ತೊಡಗಿಕೊಳ್ಳುವ ಸಂದರ್ಭದಲ್ಲಿ ಕಾಂಡೋಮ್‌ಗಳನ್ನು ಬಳಕೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಇದೇ ಅತಿಯಾಗಬಾರದು ಅಷ್ಟೇ. ನೀವು ಯಾವುದೇ ರೀತಿಯ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗಲೆಲ್ಲಾ ಕಾಂಡೋಮ್‌ಗಳನ್ನು ಬಳಸುವುದು ಆರೋಗ್ಯಕರ ದೃಷ್ಟಿಯಿಂದ ತುಂಬಾ ಒಳ್ಳೆಯದು. ಇನ್ನು ಪ್ರೇಮಿಗಳ ದಿನದಿಂದ ಇಲ್ಲಿಯವರೆಗೂ ಹೆಚ್ಚು ಬಳಸಿದ ಫ್ಲೇವರ್‌ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ.

ಚಾಕೊಲೇಟ್ ಫ್ಲೇವರ್ ಹೆಚ್ಚು ಬಳಕೆ: ಚಾಕೊಲೇಟ್‌ಗಳು ಮತ್ತು ಪ್ರಣಯವು ಯಾವಾಗಲೂ ಕೈಜೋಡಿಸುತ್ತವೆ ಮತ್ತು ಹೆಚ್ಚು ಇಷ್ಟಪಡುವ ಸುವಾಸನೆಯ ಕಾಂಡೋಮ್‌ಗೆ ಬಂದಾಗ, ಚಾಕೊಲೇಟ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ಮಹಿಳೆಯರು ಮತ್ತು ಪುರುಷರಿಬ್ಬರನ್ನೂ ಪ್ರಚೋದಿಸುತ್ತದೆ. ಚಾಕೊಲೇಟ್ ಸುವಾಸನೆಯು ಒಟ್ಟಾರೆ ಇಂದ್ರಿಯ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ಇದು ಮೌಖಿಕ ಲೈಂಗಿಕ ಆನಂದವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ.

ಈ ಫ್ಲೇವರ್‌ ಕಾಂಡೋಮ್‌ ಅನ್ನೇ ಹೆಚ್ಚಾಗಿ ಬಳಸಿದ್ದು, ಹೆಚ್ಚು ಬಳಕೆಯಾದ ಕಾಂಡೋಮ್‌ಗಳಲ್ಲಿ ಇದು ಮೊದಲ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.

ಸ್ಟ್ರಾಬೆರಿ ಫ್ಲೇವರ್: ಸ್ಟ್ರಾಬೆರಿ ಅತ್ಯಂತ ಇಷ್ಟಪಡುವ ಹಣ್ಣುಗಳಲ್ಲಿ ಒಂದಾಗಿದೆ. ಮೌಖಿಕ ಸಂಭೋಗದ ಸಮಯದಲ್ಲಿ ಸ್ಟ್ರಾಬೆರಿಗಳ ವಾಸನೆಯನ್ನು ಪಡೆದಾಗ ಮಹಿಳೆಯರು ಅದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

ಆರೆಂಜ್ ಫ್ಲೇವರ್: ಕಿತ್ತಳೆ ಹಣ್ಣಿನ ರಿಫ್ರೆಶ್‌ಮೆಂಟ್ ಜೊತೆಗೆ ಲೈಂಗಿಕ ಆನಂದವು ದಂಪತಿಗಳು ಬಹಳಷ್ಟು ಆನಂದಿಸುವ ತಾಜಾ ಭಾವನೆಯಾಗಿದೆ. ಮೌಖಿಕ ಸಂಭೋಗಕ್ಕೆ ಬಂದಾಗ ಇದು ಮತ್ತೆ ಹೆಚ್ಚು ಇಷ್ಟಪಟ್ಟ ಕಾಂಡೋಮ್ ಸುವಾಸನೆಗಳಲ್ಲಿ ಒಂದಾಗಿದೆ.

ಗ್ರೇಪ್ಸ್‌ ಫ್ಲೇವರ್‌: ನೀವು ಜಾಹೀರಾತುಗಳಲ್ಲಿ ಅಥವಾ ಚಲನಚಿತ್ರಗಳಲ್ಲಿ ನೋಡಿರಬೇಕು, ಹುಡುಗಿಯೊಬ್ಬಳು ತನ್ನ ಕೈಯಲ್ಲಿ ದ್ರಾಕ್ಷಿಯ ಗೊಂಚಲು ಹಿಡಿದುಕೊಳ್ಳುತ್ತಾಳೆ. ನಂತರ ಹುಡುಗ ಅದನ್ನು ತಿನ್ನಲು ಪ್ರಯತ್ನಿಸುತ್ತಾನೆ. ಲೈಂಗಿಕ ಸಂಭೋಗದ ಸಮಯದಲ್ಲಿ ಆನಂದವನ್ನು ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ. ಆದ್ದರಿಂದ ದ್ರಾಕ್ಷಿ ರುಚಿಯ ಕಾಂಡೋಮ್‌ಗಳನ್ನು ಬಳಸಲಾಗುತ್ತದೆ. ಇದು ಹೆಚ್ಚು ಪರಿಮಳವನ್ನು ಹೊಂದಿರುತ್ತದೆ ಅದು ಲೈಂಗಿಕ ಆನಂದವನ್ನು ಹೆಚ್ಚಿಸುತ್ತದೆ.

ಮ್ಯಾಂಗೋ ಫ್ಲೇವರ್‌: ಈ ಸುಗಂಧವು ನಿಮ್ಮ ಮಲಗುವ ಕೋಣೆಯಲ್ಲಿ ಪರಿಮಳವನ್ನು ಸೂಸುತ್ತದೆ. ಮತ್ತು ಲೈಂಗಿಕ ಅನುಭವವನ್ನು ಹೆಚ್ಚಿಸುತ್ತದೆ.

ಪಾನ್ ಫ್ಲೇವರ್: ಮೀಥಾ ಪಾನ್ ಫ್ಲೇವರ್‌ನ ಕಾಂಡೋಮ್‌ಗಳು ಟ್ರೆಂಡ್‌ನಲ್ಲಿವೆ. ಇದು ಕೂಡ ಹೆಚ್ಚಾಗಿ ಬಳಕೆಯಾಗಿರುವುದಾಗಿದೆ. ಲಿಚಿ ಫ್ಲೇವರ್: ಲಿಚಿ ಫ್ಲೇವರ್ ಕಾಂಡೋಮ್‌ಗಳು ನಿಮ್ಮ ಲೈಂಗಿಕತೆಯನ್ನು ಹೆಚ್ಚಿದುವುದರಿಂದ ಬಹುತೇಕ ದಂಪತಿಗಳು ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಹೀಗಾಗಿ ಇದು ಬಹಳ ಜನಪ್ರಿಯವಾಗಿದೆ.

ಪಿಜ್ಜಾ ಫ್ಲೇವರ್: ಲೈಂಗಿಕ ಜೀವನದಲ್ಲಿ ಮಸಾಲೆಯನ್ನು ಸೇರಿಸಲು ಬಯಸುವ ದಂಪತಿಗಳಿಗೆ ಇದು ಸೂಕ್ತವಾಗಿದೆ. ಆದ್ದರಿಂದ ಇದನ್ನು ಕೂಡ ಬಹುತೇಕರು ಇಷ್ಟಪಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+