ಲಸಿಕೆ ಕೊರತೆ; ಸರ್ಕಾರದ ಗಮನ ಸೆಳೆದ ಕೃಷ್ಣ ಬೈರೇಗೌಡ
ಬೆಂಗಳೂರು, ಮೇ 12; ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಲಸಿಕೆಗೆ ಭಾರೀ ಬೇಡಿಕೆ ಬಂದಿದೆ. ಆದರೆ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಲಸಿಕೆ ಕೊರತೆ ಉಂಟಾಗಿದೆ.
ಕಾಂಗ್ರೆಸ್ ನಾಯಕ, ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಲಸಿಕೆ ವಿಚಾರದಲ್ಲಿ ಸರ್ಕಾರದ ಗಮನವನ್ನು ಸೆಳೆದಿದ್ದಾರೆ. ಸರ್ಕಾರದ ಬೆಂಬಲವಿಲ್ಲದೇ ನಾವು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬುಧವಾರ ಕೃಷ್ಣ ಬೈರೇಗೌಡ ಫೇಸ್ ಬುಕ್‌ನಲ್ಲಿ ಲಸಿಕೆ ಕೊರತೆ ಬಗ್ಗೆ ಪೋಸ್ಟ್ ಹಾಕಿದ್ದಾರೆ. "18-44 ವರ್ಷದ ಜನರು ಮೊದಲ ಡೋಸ್ ಲಸಿಕೆ ಪಡೆಯಲು ಹಲವಾರು ಕರೆಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ಸ್ಪಷ್ಟನೆ ನೀಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.

ನಮಗೆ ಪ್ರತಿದಿನಕ್ಕೆ 10,000 ಡೋಸ್ ಲಸಿಕೆ ಬೇಕಾಗಿದೆ. ಸರ್ಕಾರ 700 ಸರಬರಾಜು ಮಾಡುತ್ತಿದೆ. ಇದರಿಂದಾಗಿ ನಾವು ಪ್ರತಿಯೊಬ್ಬರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ನಮ್ಮ ಕ್ಷೇತ್ರದ ಲಸಿಕಾ ಕೇಂದ್ರಗಳಿಗೆ ಕೊವ್ಯಾಕ್ಸಿನ್ ಸರಬರಾಜು ಮಾಡುತ್ತಿಲ್ಲ. ಆರೋಗ್ಯ ಕೇಂದ್ರಗಳಲ್ಲಿ ಸರ್ಕಾರ ಕೇವಲ 45 ವರ್ಷ ಮೇಲ್ಪಟ್ಟವರು 2ನೇ ಡೋಸ್ ಪಡೆಯಲು ಅನುಮತಿ ನೀಡಿದೆ ಎಂದು ಫೇಸ್ ಬುಕ್‌ನಲ್ಲಿ ಶಾಸಕರು ಬರೆದಿದ್ದಾರೆ.
#VaccinationUpdate
— Krishna Byre Gowda (@krishnabgowda) May 12, 2021
I am getting non-stop vaccine enquiries.
🔸We need 10000 doses a day. Govt supplying about 700.
🔸Govt not supplying covaxin.
🔸Govt permitting only second dose for above 45 age.
🔸Govt has stopped camps.
🔸No Govt supply for 18-44 in our Health Centres.
ನಮ್ಮ ಲಸಿಕಾ ಕೇಂದ್ರಗಳಲ್ಲಿ 18-44 ವಯೋಮಿತಿಯ ಜನರಿಗೆ ಲಸಿಕೆ ಪೂರೈಕೆ ಮಾಡುತ್ತಿಲ್ಲ. ಕೆಲವು ಆಯ್ದ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.
ನಾನು ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಮನವಿ ಮಾಡಿದ್ದೇನೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರದ ಬೆಂಬಲವಿಲ್ಲದೇ ನಾವು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications