'ಬಾಂಬ್ ನಾಗ' ಎಂದಿದ್ದಕ್ಕೆ ಕಮಿಷನರ್ ಗೆ ನೊಟೀಸ್ ರವಾನಿಸಿದ ನಾಗರಾಜ್
ನನ್ನ ಮನೆ ಮೇಲೆ ದಾಳಿ ನಡೆಸಿದಾಗ ಏಪ್ರಿಲ್ 14ರಂದು ನೀವು ನನ್ನನ್ನು 'ಬಾಂಬ್ ನಾಗ' ಎಂದು ಕರೆದಿದ್ದೀರಿ. ಇದು ನ್ಯಾಯಾಂಗದ ಉಲ್ಲಂಘನೆ ಎಂದು ನಾಗರಾಜ್ ಪರ ವಕೀಲರು ನೊಟೀಸ್ ನಲ್ಲಿ ತಿಳಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 29: ತನ್ನನ್ನು ಬಾಂಬ್ ನಾಗ ಎಂದು ಕರೆದಿದ್ದಕ್ಕೆ ಬೆಂಗಳೂರು ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಗೆ ವಿ ನಾಗರಾಜ್ ವಕೀಲರು ನೊಟೀಸ್ ರವಾನಿಸಿದ್ದಾರೆ.
ಮಾಜಿ ಕಾರ್ಪೊರೇಟರ್ ಹಾಗೂ ರೌಡಿ ಶೀಟರ್ ವಿ ನಾಗರಾಜ್, ಪ್ರವೀಣ್ ಸೂದ್ ಗೆ ತನ್ನ ವಕೀಲ ಶ್ರೀರಾಮ ರೆಡ್ಡಿ ಮೂಲಕ ನೊಟೀಸ್ ನೀಡಿದ್ದು , "ನನ್ನನ್ನು ಬಾಂಬ್ ನಾಗ, ನಾಗ, ಪಲ್ ನಾಗ ಎಂದು ಕರೆಯದಂತೆ ನನ್ನ ಕಕ್ಷಿದಾರರು ರಿಟ್ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆದಿದ್ದಾರೆ. ಇನ್ನು ಮುಂದೆ ಆ ಹೆಸರಿನಿಂದ ಕರೆಯುವುದಿಲ್ಲ ಎಂದು ಸರಕಾರಿ ಅಭಿಯೋಜಕರೇ ನ್ಯಾಯಾಲಯಕ್ಕೆ ತಿಳಿಸಿದ್ದಾರೆ," ಎಂದು ತಮ್ಮ ನೊಟೀಸ್ ನಲ್ಲಿ ವಿವರಿಸಿದ್ದಾರೆ.[ಸಿದ್ದರಾಮಯ್ಯ ಪಿಎ, ದಿನೇಶ್ ಗುಂಡೂರಾವ್ ವಿರುದ್ಧ ಬಾಂಬ್ ನಾಗ ಆರೋಪ]

ಹೀಗಿದ್ದೂ ನನ್ನ ಮನೆ ಮೇಲೆ ದಾಳಿ ನಡೆಸಿದಾಗ ಏಪ್ರಿಲ್ 14ರಂದು ನೀವು ನನ್ನನ್ನು 'ಬಾಂಬ್ ನಾಗ' ಎಂದು ಕರೆದಿದ್ದೀರಿ. ಇದು ನ್ಯಾಯಾಂಗದ ಉಲ್ಲಂಘನೆ ಎಂದು ನಾಗರಾಜ್ ಪರ ವಕೀಲರು ನೊಟೀಸ್ ನಲ್ಲಿ ತಿಳಿಸಿದ್ದಾರೆ.[ಹೊಸ 'ಬಾಂಬ್' ಸಿಡಿಸಿದ ರೌಡಿ ಶೀಟರ್ ನಾಗ!]












Click it and Unblock the Notifications