Bengaluru: ಹಣಕ್ಕಾಗಿ ಉಜ್ಬೇಕಿಸ್ತಾನ್ ಮಹಿಳೆ ಹತ್ಯೆ: ಇಬ್ಬರು ಅಸ್ಸಾಮಿಗಳ ಬಂಧನ
ಬೆಂಗಳೂರು ನಗರದ ಸ್ಯಾಂಕಿ ರಸ್ತೆಯ ಜಗದೀಶ್ ಹೋಟೆಲ್‌ನಲ್ಲಿ 27 ವರ್ಷದ ಉಜ್ಬೇಕಿಸ್ತಾನದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪಿದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿದೇಶಿ ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಸ್ಸಾಮಿಗಳನ್ನು ಶುಕ್ರವಾರ ಬಂಧಿಸಲಾಗಿದೆ. ಕೊಲೆಯಾದ ವಿದೇಶಿ ಮಹಿಳೆಯನ್ನು ಜರೀನಾ ಉಟ್ಕಿರೋವ್ನಾ ಎಂದು ಗುರುತಿಸಲಾಗಿದೆ.

ಜರೀನಾ ಸಾಕಷ್ಟು ಹಣವನ್ನು ಸಾಗಿಸುತ್ತಿದ್ದಳು, ಅವಳ ಬಳಿ ಹಣ ದರೋಡೆ ಮಾಡಿದರೆ ಶ್ರೀಮಂತರಾಗಬಹುದು ಎನ್ನುವ ಉದ್ದೇಶದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.
ಹಣ, ಮೊಬೈಲ್ ಎಗರಿಸಿದ್ದ ದುಷ್ಕರ್ಮಿಗಳು
ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದ ಜರೀನಾ, ಜಗದೀಶ್ ಹೋಟೆಲ್‌ನಲ್ಲಿ ತಂಗಿದ್ದರು. ಎರಡನೇ ಮಹಡಿಯ ಕೊಠಡಿಯಲ್ಲಿ ತಂಗಿದ್ದ ಜರೀನಾ ಮಾರ್ಚ್ 13 ರ ರಾತ್ರಿ ಮುಖಕ್ಕೆ ಗಾಯಗಳಾಗಿ ಮತ್ತು ಮೂಗಿನಿಂದ ರಕ್ತಸ್ರಾವ ಆಗಿರುವ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆಕೆಯ ಐ ಫೋನ್ ಮತ್ತು ನಗದು ರೂಮಿನಿಂದ ಕಾಣೆಯಾಗಿತ್ತು.
ತನಿಖೆಯ ನಂತರ, ನಗರ ಪೊಲೀಸರು 22 ವರ್ಷದ ಅಮೃತ್ ಸೋನಾ ಮತ್ತು 26 ವರ್ಷದ ರಾಬರ್ಟ್ ಅನ್ನು ಬಂಧಿಸಿದ್ದಾರೆ, ಇಬ್ಬರೂ ಅಸ್ಸಾಂ ಮೂಲದವರಾಗಿದ್ದು, ಸುಮಾರು ಒಂದು ವರ್ಷದಿಂದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕದ್ದ ಫೋನ್ ಮತ್ತು 20,000 ರೂ.ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹೋಟೆಲ್ ಸಿಬ್ಬಂದಿ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಶವವನ್ನು ನೋಡಿ ನಮಗೆ ಎಚ್ಚರಿಕೆ ನೀಡಿದರು. ನಾವು ಹೋಟೆಲ್‌ಗೆ ಭೇಟಿ ನೀಡಿ ಶವವನ್ನು ಸ್ಥಳಾಂತರಿಸಿದಾಗ ಅಮೃತ್ ಮತ್ತು ರಾಬರ್ಟ್ ನಾಪತ್ತೆಯಾಗಿರುವುದು ಮತ್ತು ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು.
ಆದರೆ ಅವರ ಕೊನೆಯ ಮೊಬೈಲ್ ಟವರ್ ಲೊಕೇಶನ್ ಆಧಾರದ ಮೇಲೆ ಅವರು ಕೊನೆಯದಾಗಿ ನೋಡಿದ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಿದ್ದು, ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜರೀನಾ ಮಾರ್ಚ್ 5 ರಂದು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದರು. ಅಲ್ಲಿ ಅವರು ಪ್ರವಾಸಿ ವೀಸಾದಲ್ಲಿ ಬಂದಿಳಿದಿದ್ದರು. ಆಕೆಯ ಏಜೆಂಟ್, ರಾಹುಲ್ ಎಂದು ಗುರುತಿಸಲಾಗಿದ್ದು, ಮಾರ್ಚ್ 16 ರವರೆಗೆ ಆಕೆಗಾಗಿ ಕೊಠಡಿಯನ್ನು ಕಾಯ್ದಿರಿಸಿದ್ದರು. ಜರೀನಾ ತನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಹೋಟೆಲ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದ ರಾಹುಲ್, ನಂತರ ಸಿಬ್ಬಂದಿಗಳು ನಕಲಿ ಕೀಲಿಯೊಂದಿಗೆ ಬಾಗಿಲು ತೆರೆದಾಗ ಅವರು ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿತ್ತು.












Click it and Unblock the Notifications