Bengaluru Suburban Rail: ಬೆಂಗಳೂರು ಉಪನಗರ ರೈಲು ನಿಲ್ದಾಣಗಳ ಕಾಮಗಾರಿ ಅಪ್ಡೇಟ್
Bengaluru Suburban Train: ಬಹುನೀರಿಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿ ಅಪ್ಡೇಟ್‌ವೊಂದು ಹೊರಬಿದ್ದೊದೆ. ಇದೀಗ ಕಾಮಗಾರಿ ಎಲ್ಲಿಗೆ ಬಂದಿದೆ? ಗುತ್ತಿಗೆಯನ್ನು ಯಾವ ಕಂಪನಿಗೆ ನೀಡಲಾಗಿದೆ ಹಾಗೂ ತಗಲುವ ವೆಚ್ಚ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಅಂಕಿಅಂಶಗಳ ಸಹಿತ ನೀಡಲಾಗಿದೆ ಗಮನಿಸಿ.
ಬೆಂಗಳೂರಿನ ಹೊರ ವಲಯದ ಪ್ರದೇಶಗಳನ್ನು ಸಂಪರ್ಕಿಸುವ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕಾಮಗಾರಿ ಚುರುಕು ಪಡೆದಿದೆ. ಕರ್ನಾಟಕದ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು, ಮೂಲಸೌಕರ್ಯ ಸಚಿವರಾಗಿರುವ ಡಾ.ಎಂ.ಬಿ.ಪಾಟೀಲ್ ಅವರು ಕಳೆದ ವರ್ಷ ಕೈಗೊಂಡ ಕ್ರಮಗಳ ಭಾಗವಾಗಿ ಉಪನಗರ ರೈಲ್ವೆ ಯೋಜನೆ ಕಾಮಗಾರಿಗಳಿಗೆ ವೇಗ ಸಿಕ್ಕಿದೆ.

ಪ್ರಮುಖವಾಗಿ 8 ನಿಲ್ದಾಣಗಳನ್ನು ನಿರ್ಮಾ ಮಾಡಲು ಕ್ರೈಡ್ 501 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿಗೆ ಕೊಟ್ಟಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ಎರಡು ವರ್ಷದಲ್ಲಿ ನಿಲ್ದಾಣ ಹಾಗೂ ಇತರೆ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ಸಮಯ ನಿಗದಿಪಡಿಸಲಾಗಿದೆ.
ಬೆಂಗಳೂರು ಉಪನಗರ ರೈಲ್ವೆ ಯೋಜನೆಗಾಗಿ ಪ್ರಮುಖ ಬೆಳವಣಿಗೆಯಲ್ಲಿ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ ಕಾರಿಡಾರ್ 2ರ ಪ್ಯಾಕೇಜ್ ಸಿ2ಎ ಅಡಿಯಲ್ಲಿ 8 ನಿಲ್ದಾಣಗಳನ್ನು ನಿರ್ಮಾಣ ಮಾಡಲು ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿಗೆ 501 ಕೋಟಿ ರೂಪಾಯಿಗಳ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನ ಪೂರ್ಣಗೊಳಿಸಿದೆ.
ಕಾರಿಡಾರ್ 2 ಬೆನ್ನಿಗನಹಳ್ಳಿಯಿಂದ ಚಿಕ್ಕಬಾಣಾವರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದು 25 ಕಿಲೋ ಮೀಟರ್ ದೂರವನ್ನು ಒಳಗೊಂಡಿದೆ ಮತ್ತು 8.02 ಕಿಲೋ ಮೀಟರ್ ಎತ್ತರದ ಟ್ರ್ಯಾಕ್ ಮತ್ತು 17.55 ಕಿಲೋ ಮೀಟರ್ ಗ್ರೇಡ್ ಅನ್ನು ಒಳಗೊಂಡಿದೆ. ಕಾರಿಡಾರ್ 12 ನಿಲ್ದಾಣಗಳನ್ನು ಹೊಂದಿದೆ. ಎರಡು ಪ್ಯಾಕೇಜ್‌ಗಳಾಗಿ ವಿಂಗಡಣೆ ಮಾಡಲಾಗಿದೆ. ಇದರಲ್ಲಿ ಮೊದಲ ಹಂತದಲ್ಲಿ 8 ನಿಲ್ದಾಣಗಳ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ಯಾಕೇಜ್ ಸಿ2ಎ ಕೊಳಾಯಿ, ಮುಂಭಾಗ, ಮತ್ತು ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಸ್ಥಾಪನೆಗಳೊಂದಿಗೆ ನಾಗರಿಕ ಸೌಲಭ್ಯಗಳು, ರಚನಾತ್ಮಕ ಮತ್ತು ವಾಸ್ತುಶಿಲ್ಪದ ಕೆಲಸಗಳನ್ನ ಸೇರಿದಂತೆ ಈ 8 ನಿಲ್ದಾಣಗಳ ನಿರ್ಮಾಣವನ್ನು ಒಳಗೊಂಡಿದೆ. ಇದೀಗ ಪ್ಯಾಕೇಜ್ 2ರ ಅಡಿ 501 ಕೋಟಿ ರೂಪಾಯಿಗಳ ಗುತ್ತಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಅಂತಾ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಕೆಲಸದ ವ್ಯಾಪ್ತಿಯು ಉಕ್ಕಿನಡಿ ಮೇಲ್ಸೇತುವೆಗಳು, ಮೇಲ್ಛಾವಣಿಯ ರಚನೆಗಳು, ಪೂರ್ವ ಇಂಜಿನಿಯರಿಂಗ್ ಕಟ್ಟಡಗಳು, ಮತ್ತು ಸಂಬಂಧಿತ ಕೆಲಸಗಳಿಗಾಗಿ ವಿವರವಾದ ವಿನ್ಯಾಸ ಮತ್ತು ಇಂಜಿನಿಯರಿಂಗ್ ಕೆಲಸಗಳೂ ಒಳಗೊಂಡಿವೆ. ಒಪ್ಪಂದದ ಪ್ರಕಾರ, ಯೋಜನೆಯನ್ನು 24 ತಿಂಗಳೊಳಗೆ ಪೂರ್ಣಗೊಳಿಸಬೇಕು.
ಈ ಪ್ಯಾಕೇಜ್‌ನ ಅಡಿಯಲ್ಲಿ ಬರುವ ನಿಲ್ದಾಣಗಳು ಬೆನ್ನಿಗಾನಹಳ್ಳಿ (ಎಲಿವೇಟೆಡ್ ಇಂಟರ್‌ಚೇಂಜ್), ಕಸ್ತೂರಿ ನಗರ, ಸೇವಾ ನಗರ, ಬಾಣಸವಾಡಿ (ಗ್ರೇಡ್), ನಾಗವಾರ (ಎಲಿವೇಟೆಡ್), ಕನಕನಗರ (ಎಲಿವೇಟೆಡ್), ಹೆಬ್ಬಾಳ (ಗ್ರೇಡ್) ಮತ್ತು ಮತ್ತಿಕೆರೆ(ಎಲಿವೇಟೆಡ್) ಈ ಪಟ್ಟಿಯಲ್ಲಿ ಇವೆ.
ಉಳಿದ 4 ನಿಲ್ದಾಣಗಳು - ಯಶವಂತಪುರ, ಶೆಟ್ಟಿಹಳ್ಳಿ, ಮೈದರಹಳ್ಳಿ ಮತ್ತು ಚಿಕ್ಕಬಾಣಾವರ - ಪ್ಯಾಕೇಜ್ ಸಿ2ಬಿ ಯ ಭಾಗ ಆಗಿದ್ದು, ಟೆಂಡರ್‌ಗಳು ಪ್ರತ್ಯೇಕ ಪ್ರಕ್ರಿಯೆಯನ್ನು ಒಳಗೊಂಡಿದೆ. ಕೆಲಸದ ವ್ಯಾಪ್ತಿಯು ಉಕ್ಕಿನಡಿ ಮೇಲ್ಸೇತುವೆಗಳು, ಮೇಲ್ಛಾವಣಿಯ ರಚನೆಗಳು, ಕಟ್ಟಡಗಳು ಮತ್ತು ಸಂಬಂಧಿತ ವಿನ್ಯಾಸ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳು ಸೇರಿವೆ.
ನಾಗಾರ್ಜುನ ಕನ್ಸ್ಟಕ್ಷನ್ ಕಂಪನಿಯು ಕಳೆದ ವರ್ಷ ಜೂನ್ 15ರಂದು ಪ್ಯಾಕೇಜ್ ಸಿ2ಎ ಯ ಟೆಂಡರ್‌ನಲ್ಲಿ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಮತ್ತು ಕುಮಾರ್ ಇನ್‌ಫ್ರಾ ಪ್ರಾಜೆಕ್ಟ್ ಲಿಮಿಟೆಡ್ ಸಹ ಬಿಡ್‌ನಲ್ಲಿ ಭಾಗಿ ಆಗಿತ್ತು. ಆದರೂ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಡಿಮೆ ಮೊತ್ತ ಕೋಟ್ ಮಾಡಿದ್ದರಿಂದ ಅಂತಿಮವಾಗಿ ಅವಕಾಶ ಕಲ್ಪಿಸಿಕೊಡಲಾಗಿದೆ.












Click it and Unblock the Notifications