Bengaluru University: 25 ಲಕ್ಷ ರೂ. ಬಿಲ್ ನಷ್ಟ ತಪ್ಪಿಸಲು ಟೆಲಿಫೋನ್ ಸಂಪರ್ಕ ಕಡಿತಕ್ಕೆ ವಿವಿ ನಿರ್ಧಾರ
ಬೆಂಗಳೂರು, ಜನವರಿ 04: ಬೆಂಗಳೂರು ವಿಶ್ವವಿದ್ಯಾನಿಲಯ (ಬಿಯು)ವು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ವಿವಿಧ ವಿಭಾಗಗಳಲ್ಲಿರುವ ಸ್ಥಿರ ದೂರವಾಣಿ (ಟೆಲಿಫೋನ್-ಲ್ಯಾಂಡ್‌ಲೈನ್)ಸಂಪರ್ಕ ಕಡಿತಗೊಳಿಸಲು ನಿರ್ಧರಿಸಿದೆ. ಇದರಿಂದ ಉಂಟಾಗುತ್ತಿದ್ದ ವಾರ್ಷಿಕ ನಷ್ಟ ತಪ್ಪಿಸಲು ಮುಂದಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದ ನಿಯಮವು ವೆಚ್ಚವನ್ನು ಕಡಿತಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಕ್ರಮದಿಂದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ವಿವಿಧ ವಿಭಾಗಗಳಲ್ಲಿರುವ ಸ್ಥಿರ ದೂರವಾಣಿ ಸಂಪರ್ಕ ಕಡಿತಗೊಳ್ಳಲಿದೆ. ಅದರಿಂದ ವಾರ್ಷಿಕವಾಗಿ ಕನಿಷ್ಠ ಸುಮಾರು 25 ಲಕ್ಷ ರೂ. ಉಳಿಯಲಿದೆ.
ಕ್ಯಾಂಪಸ್‌ನ ಇಲಾಖೆಗಳ ಮುಖ್ಯಸ್ಥರಿಗೆ ನೀಡಲಾದ ನೋಟಿಸ್‌ಗಳಿಗೆ ಉತ್ತರಗಳನ್ನು ಸ್ವೀಕರಿಸಿ ಈಗಾಗಲೇ ಒಟ್ಟು 760 ಸ್ಥಿರ ದೂರವಾಣಿಗಳಲ್ಲಿ 642 ಸಂಪರ್ಕ ಕಡಿತಗೊಳಿಸಲಾಗಿದೆ. ವಿಶ್ವವಿದ್ಯಾನಿಲಯವು 118 ಸ್ಥಿರ ದೂರವಾಣಿಗಳನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ಅವುಗಳಲ್ಲಿ 22 ಹೊರ ಸಂಪರ್ಕ ಸಾಧಿಸುವ ಸಾಮರ್ಥ್ಯಗಳನ್ನು ಹೊಂದಿವೆ. ಈ ಹಿಂದೆ ಸ್ಥಿರ ದೂರವಾಣಿ ಬಿಲ್‌ಗಳಿಗಾಗಿ ಬಿಎಸ್‌ಎನ್‌ಎಲ್‌ಗೆ ತಿಂಗಳಿಗೆ ಸುಮಾರು 3-4 ಲಕ್ಷ ರೂ.ಗಳನ್ನು ಪಾವತಿಸುತ್ತಿದ್ದೇವು ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕೌನ್ಸಿಲ್ ಸಭೆಯಲ್ಲಿ ಚರ್ಚೆ
ಕೆಲವು ಇಲಾಖೆಗಳ ಮಾಸಿಕ ಬಿಲ್‌ಗಳ ಹಣ ವಿಪರೀತವಾಗಿ ಹೆಚ್ಚಾಗಿತ್ತು. ಹೀಗಾಗಿ ಈ ಅನಗತ್ಯ ವೆಚ್ಚವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ. ಈ ಆದೇಶವನ್ನು ನೀಡುವ ಮೊದಲು ಸ್ಥಿರ ದೂರವಾಣಿ ಸಂಪರ್ಕ ಕಡಿತ, ಅನಗತ್ಯ ವೆಚ್ಚ ಸಮಸ್ಯೆಯನ್ನು ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಸಂಪರ್ಕ ಕಡಿತ ಕ್ರಮದಿಂದ ವಿಶ್ವವಿದ್ಯಾನಿಲಯವು ವರ್ಷಕ್ಕೆ 25 ಲಕ್ಷ ರೂಪಾಯಿಗಳನ್ನು ಉಳಿಸುತ್ತದೆ. ಬಿಲ್ ಮೊತ್ತವು ತಿಂಗಳುಗಳಿಗೆ 10 ಲಕ್ಷ ರೂಪಾಯಿಯಿಂದ ವಾರ್ಷಿಕ 1 ಕೋಟಿ ರೂಪಾಯಿವರೆಗೆ ಬರುತ್ತಿದ್ದು,ಅದನ್ನು ಕಟ್ಟಲು ವಿಶ್ವವಿದ್ಯಾಲಯಕ್ಕೆ ಸಂಕಷ್ಟ ಎದುರಿಸಬೇಕಿತ್ತು.

ಅಗತ್ಯ ಸಂಪನ್ಮೂಲಗಳನ್ನು ಮೂರು ವಿಶ್ವವಿದ್ಯಾಲಯಗಳ ನಡುವೆ ಹಂಚಿಕೆ ಆಗಿವೆ. ಕಾಲೇಜುಗಳು ಹಾಗೂ ಪರೀಕ್ಷಾ ಶುಲ್ಕಗಳೇ ವಿಶ್ವವಿದ್ಯಾಲಯಕ್ಕೆ ಆದಾಯ ಮೂಲ ಆಧಾರವಾಗಿದೆ. ಆದರೆ ಕಾಲೇಜುಗಳಲ್ಲಿ ಈ ಆದಾಯದ ಕಡಿಮೆ ಆಗುತ್ತಿದೆ. ಈ ಮಧ್ಯೆ ದೂರವಾಣಿ ಸಂಪರ್ಕದಿಂದ ಉಂಟಾಗುತ್ತಿದ್ದ ನಷ್ಟವನ್ನು ತಪ್ಪಿಸಲು ಕ್ರಮಕೈಗೊಂಡಿದ್ದರಿಂದ ಅನಗತ್ಯ ವೆಚ್ಚಕ್ಕೆ ಕಡಿವಾಣ ಬೀಳಲಿದೆ. ಆರ್ಥಿಕ ಹೊರೆ ಕಡಿಮೆ ಆಗಲಿದೆ ಎಂದು ಅಧಿಕಾರಿಗಳು ವಿವರಿದರು.












Click it and Unblock the Notifications