ಕನ್ನಡಿಗರಿಗೆ ಸುಳ್ಳು ಹೇಳುತ್ತಿದ್ದಾರೆಯೇ ಬಿಜೆಪಿ ಸಂಸದರು ಏನಿದು ಸೋಷಿಯಲ್ ಮೀಡಿಯಾ ಚರ್ಚೆ
2026ನೇ ಸಾಲಿನ ಕೇಂದ್ರ ಬಜೆಟ್ ಕನ್ನಡಿಗರಿಗೆ ನಿರಾಸೆ ಮೂಡಿಸಿದೆ. ಈ ಕೋಪವನ್ನು ಕನ್ನಡಿಗರು ಕರ್ನಾಟಕದ ಬಿಜೆಪಿ ಸಂಸದರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಬಿಜೆಪಿ ಸಂಸದರನ್ನು ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಸಂಸದ ಪಿ.ಸಿ ಮೋಹನ್ ಅವರ ಟ್ವೀಟ್‌ಗಳಿಗೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
16ನೇ ಹಣಕಾಸು ಆಯೋಗದ ಅಡಿಯಲ್ಲಿ ಕರ್ನಾಟಕಕ್ಕೆ ಅತಿ ಹೆಚ್ಚು ಲಾಭವಾಗಿದೆ. ರಾಜ್ಯಕ್ಕೆ ಸಿಗುವ ತೆರಿಗೆ ಹಂಚಿಕೆಯ ಪಾಲು 3.65%ರಿಂದ 4.13%ಕ್ಕೆ ಹೆಚ್ಚಾಗಿದೆ. ಇದರ ಫಲವಾಗಿ ಹೆಚ್ಚುವರಿಯಾಗಿ 7,387 ಕೋಟಿ ರೂ. ಲಭ್ಯವಾಗಲಿದ್ದು, 2026-31 ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು 63,050 ಕೋಟಿ ರೂ. ಅನುದಾನ ಸಿಗಲಿದೆ. ದೇಶದ ಆರ್ಥಿಕತೆಗೆ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಿಗೆ ಮಹತ್ವ ನೀಡುವಂತೆ ಜಿಡಿಪಿಗೆ 10% ತೂಕ ನೀಡಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್ ಅವರು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೀನ್ ಕುಮಾರ್ ಎನ್ನುವವರು, ನೀವು ಕೊಡುವ ಪರ್ಸೆಂಟೇಜ್ ಲೆಕ್ಕ ನಿಮ್ಮ ಹತ್ತಿರ ಇಟ್ಕೊಳ್ಳಿ.
100 ರೂಪಾಯಿಯಲ್ಲಿ ಕರ್ನಾಟಕಕ್ಕೆ ಸಿಗೋದು ಕೇವಲ 4.13 ರೂ.
ಉತ್ತರ ಪ್ರದೇಶ(UP) -17.61
ಬಿಹಾರ -9.94
ಮಧ್ಯಪ್ರದೇಶ-7.34
ಪಶ್ಚಿಮ ಬಂಗಾಳ-7.21
ರಾಜಸ್ಥಾನ -5.92
ಮಹಾರಾಷ್ಟ್ರ -6.44
ಕದ್ದ ಮಾಲು ವಾಪಸ್ ಕೊಟ್ಟಂತೆ ಕಥೆ ಇದು (The 'Stolen Goods' Logic). ಯಾರೋ ನಿಮ್ಮ ಜೇಬಿನಿಂದ 100 ರೂಪಾಯಿ ಕದ್ದು, ಐದು ವರ್ಷ ಬಿಟ್ಟು ಅದರಲ್ಲಿ 5 ರೂಪಾಯಿ ವಾಪಸ್ ಕೊಟ್ಟು 'ನೋಡಿ ನಿಮಗೆ ಲಾಭ ಮಾಡಿಕೊಟ್ಟೆ' ಅನ್ನುವ ಕಥೆ ಇದು. 14ನೇ ಹಣಕಾಸು ಆಯೋಗದಲ್ಲಿ ನಮಗೆ ಸಿಗುತ್ತಿದ್ದದ್ದು 4.71%. ಅದನ್ನ 3.64% ಕ್ಕೆ ಇಳಿಸಿ ಕರ್ನಾಟಕಕ್ಕೆ ಸಾವಿರಾರು ಕೋಟಿ ಲಾಸ್ ಆಗಿದೆ. ಈಗ 4.13% ಗೆ ಹೆಚ್ಚಳ ಮಾಡಿರೋದು 'ದಾನ' ಅಲ್ಲ, ಅದು ನಮ್ಮಿಂದ ಕಿತ್ತುಕೊಂಡಿದ್ದರಲ್ಲಿ ಒಂದು ಭಾಗವನ್ನಷ್ಟೇ ವಾಪಸ್ ಕೊಟ್ಟಿರೋದು. ಶೇಕಡಾವಾರು (Percentage) ಲೆಕ್ಕ ತೋರಿಸಿ ಕನ್ನಡಿಗರನ್ನು ದಡ್ಡರನ್ನಾಗಿ ಮಾಡಬೇಡಿ.
14ನೇ ಆಯೋಗ- 4.71%
15ನೇ ಆಯೋಗ- 3.64%
16ನೇ ಆಯೋಗ- 4.13%
Don't fool with your percentage play! ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನೀವು ಕೊಡುವ Percentage ಲೆಕ್ಕ ನಿಮ್ಮ ಹತ್ತಿರ ಇಟ್ಕೊಳ್ಳಿ.
— NaveenKuma₹ 📈💰 (@Sheru_Katte) February 2, 2026
100 ರೂಪಾಯಿಯಲ್ಲಿ ಕರ್ನಾಟಕಕ್ಕೆ ಸಿಗೋದು ಕೇವಲ 4.13 Rs.
ಉತ್ತರ ಪ್ರದೇಶ(UP) -17.61
ಬಿಹಾರ -9.94
ಮಧ್ಯಪ್ರದೇಶ-7.34
ಪಶ್ಚಿಮ ಬಂಗಾಳ-7.21
ರಾಜಸ್ಥಾನ -5.92
ಮಹಾರಾಷ್ಟ್ರ -6.44
✅ಕದ್ದ ಮಾಲು ವಾಪಸ್ ಕೊಟ್ಟಂತೆ ಕಥೆ ಇದು (The 'Stolen Goods' Logic)
ಯಾರೋ ನಿಮ್ಮ… https://t.co/ODAD075SSI
ಅಮರನಾಥ್ ಶಿವಶಂಕರ್ ಎನ್ನುವವರು, ಒಂದು ಕಾಲದಲ್ಲಿ ಬಜೆಟ್‌ನಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸಿಕ್ಕಿತು, ಕರ್ನಾಟಕಕ್ಕೆ ಏನು ಸಿಕ್ಕಿತು, ಇನ್ನೇನು ಸಿಗಬೇಕಿತ್ತು ಅನ್ನುವ ಚರ್ಚೆಗಳು ಆಗುತ್ತಿದ್ದವು. ಈಗ ಅದೆಲ್ಲ ಮಾತನಾಡುವ ವಾತಾವರಣ ಇಲ್ಲ. ಕರ್ನಾಟಕಕ್ಕೆ ಬಂದರೇನು ಬಿಹಾರಕ್ಕೆ ಹೋದರೇನು ನಮ್ಮ ದೇಶದಲ್ಲಿ ಅಭಿವೃದ್ಧಿ ಆಗಬೇಕು ಅನ್ನುವ ಮಟ್ಟಕ್ಕೆ ಜನರ ತಲೆ ಸವರಿ ಆಗಿದೆ. ಸ್ವಹಿತಾಸಕ್ತಿಯ ಬಗ್ಗೆಯೇ ಅಪಸ್ವರಗಳು ಏಳುತ್ತಿವೆ.
2026-27ರ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು?
— Tejasvi Surya (@Tejasvi_Surya) February 1, 2026
ತೆಂಗು ಹಾಗೂ ಗೋಡಂಬಿ ಬೆಳೆಗಾರರಿಗೆ ವಿಶೇಷ ಪ್ರೋತ್ಸಾಹ.
ಟೆಕ್ಸ್ಟೈಲ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಮತ್ತು ರಫ್ತು ಹೆಚ್ಚಳಕ್ಕೆ ಒತ್ತು.
ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಹೈ-ಸ್ಪೀಡ್ ರೈಲು ಕಾರಿಡಾರ್ ಘೋಷಣೆ.
2047ರ ವೇಳೆಗೆ ಜಾಗತಿಕ ಐಟಿ ಕ್ಷೇತ್ರದಲ್ಲಿ… pic.twitter.com/R4hkgVrDrG
ಕನ್ನಡಿಗ ಮತ್ತು ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಮಾತನಾಡಿದರೆ ದೇಶದ್ರೋಹಿ ಅನ್ನುವ ಪಟ್ಟ ಕಟ್ಟುತ್ತಾರೆ. ಮತ್ತೊಂದೆಡೆ ರಾಜ್ಯ ಸರ್ಕಾರ ನೆಟ್ಟಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ, ಸಮಗ್ರ ಕರ್ನಾಟಕ ಅಭಿವೃದ್ಧಿಯ ಬದಲು ಆಗಲೇ ನಲುಗುತ್ತಿರುವ ಬೆಂಗಳೂರನ್ನು ಮತ್ತಷ್ಟು ಉಸಿರುಗಟ್ಟಿಸುತ್ತಾ ಇದೆ.
ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರ ಕನ್ನಡಿಗರ ಪಾಲಿನ Devil & the Deep Sea ಪರಿಸ್ಥಿತಿ ನಿರ್ಮಾಣ ಮಾಡಿವೆ ಎಂದು ಹೇಳಿದ್ದಾರೆ.












Click it and Unblock the Notifications