ಬಜೆಟ್ : ಬೆಂಗಳೂರು ಉಪನಗರ ರೈಲಿಗೆ 17 ಸಾವಿರ ಕೋಟಿ
ಬೆಂಗಳೂರು, ಫೆಬ್ರವರಿ 01 : ಬೆಂಗಳೂರಿನ ನಾಗರಿಕರ ಬಹುದಿನಗಳ ಬೇಡಿಕೆ ಈಡೇರುವ ಸಮಯದ ಬಂದಿದೆ. ಉಪನಗರ ರೈಲು ಯೋಜನೆಗೆ ಕೇಂದ್ರದಿಂದ 17 ಸಾವಿರ ಕೋಟಿ ಮೀಸಲಿರಿಸಿರುವುದಾಗಿ ಗುರುವಾರ ನಡೆದ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಗುರುವಾರ ಲೋಕಸಭೆಯಲ್ಲಿ ಅರುಣ್ ಜೇಟ್ಲಿ ಅವರು ಬಜೆಟ್ ಮಂಡಿಸುತ್ತಿದ್ದಾರೆ. ರೈಲ್ವೆ ಇಲಾಖೆಯಲ್ಲಿಯೂ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಸಬರ್ಬನ್ ರೈಲ್ವೆ ಯೋಜನೆ ಅಭಿವೃದ್ಧಿಗಾಗಿ 50 ಸಾವಿರ ಕೋಟಿ ಈ ವರ್ಷ ಮೀಸಲಿಟ್ಟಿದ್ದು, ಅದರಲ್ಲಿ 17 ಸಾವಿರ ಕೋಟಿಯನ್ನು ಬೆಂಗಳೂರು ಉಪನಗರ ಯೋಜನೆಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಬ್ ಅರ್ಬನ್ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ರೈಲ್ವೆ ಇಲಾಖೆಯ ಸಹಭಾಗಿತ್ವದಲ್ಲಿ ಜಾರಿಗೆ ಬರಲಿದೆ. ಸುಮಾರು 58 ರೈಲುಗಳು,116 ಸೇವೆಗಳನ್ನು ಯೋಜನೆ ಒಳಗೊಂಡಿದ್ದು, ಸುಮಾರು 440 ಕಿ.ಮೀ ದೂರ ಕ್ರಮಿಸಲಿದೆ.ಬೆಂಗಳೂರು-ಮಂಡ್ಯ, ಬೆಂಗಳೂರು-ಯಶವಂತಪುರ, ಯಶವಂತಪುರ-ತುಮಕೂರು, ಯಶವಂತಪುರ-ಯಲಹಂಕ, ಯಲಹಂಕ-ಬೈಯ್ಯಪ್ಪನಹಳ್ಳಿ, ಯಶವಂತಪುರ-ಬೈಯ್ಯಪ್ಪನಹಳ್ಳಿ, ಯಲಹಂಕ-ದೊಡ್ಡಬಳ್ಳಾಪುರ, ಯಲಹಂಕ-ಚಿಕ್ಕಬಳ್ಳಾಪುರ, ಬೈಯಪ್ಪನಹಳ್ಳಿ-ಹೊಸೂರು ಸೋಲದೇವನಹಳ್ಳಿ-ಯಲಹಂಕ ನಡುವೆ ಬೆಂಗಳೂರು ಸಬ್ ಅರ್ಬನ್ ರೈಲು ಸೇವೆ ಆರಂಭವಾಗಲಿದೆ.
ಸುಮಾರು 10,949 ಕೋಟಿ ರು ವೆಚ್ಚದ ಯೋಜನೆಯ 1,745 ಕೋಟಿ ರೂ ಅಂದಾಜು ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ-ಹಂತ 1 ಜಾರಿಗೆ ಬರಲಿದೆ.
बेंगलुरू में उप- नगरीय रेल अवसंरचना के लिए 17,000 करोड़ रुपए का आवंटन: वित्त मंत्री श्री @arunjaitley https://t.co/6mMx7Ywjsl #NewIndiaBudget pic.twitter.com/96p7M25fcy
— BJP (@BJP4India) February 1, 2018












Click it and Unblock the Notifications