ಬಿಬಿಎಂಪಿ ಆಸ್ಪತ್ರೆಗಳಲ್ಲಿ 24 ಗಂಟೆ ವಿದ್ಯುತ್‌

ಬೆಂಗಳೂರು, ಜೂ.13: ಇನ್ನು ಮುಂದೆ ಬಿಬಿಎಂಪಿ ಆಸ್ಪತ್ರೆಯಲ್ಲಿ ವಿದ್ಯುತ್‌ ಇಲ್ಲ ಎಂದು ಹೇಳುವ ಹಾಗಿಲ್ಲ. ತನ್ನ ವ್ಯಾಪ್ತಿಗೆ ಸೇರಿದ ನಗರದ 31 ಆಸ್ಪತ್ರೆಗಳಿಗೆ ತಡೆ ರಹಿತ ವಿದ್ಯುತ್‌ ಪೊರೈಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ನಿರ್ಧರಿಸಿದೆ.

ಬಿಬಿಎಂಪಿ ಈ ಆಸ್ಪತ್ರೆಗಳಿಗೆ ಜನರೇಟರ್‌, ಯುಪಿಎಸ್‌ ಸೌಲಭ್ಯ ಒದಗಿಸುವ ಜತೆಗೆ ಸೌರಶಕ್ತಿಯಿಂದ ಬಿಸಿನೀರು ಒದಗಿಸುವ ವ್ಯವಸ್ಥೆಯನ್ನು ನೀಡಲು ನಿರ್ಧರಿಸಿದೆ.

ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಚ್. ಬಸವರಾಜು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಗೆ ಸೇರಿದ ರೆಫರಲ್ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆಗಳಿಗೆ ಈ ಸೌಲಭ್ಯ ನೀಡಲಾಗುವುದು ಎಂದು ಅವರು ಹೇಳಿದರು.[ಬಿಬಿಎಂಪಿ ವಿಭಜನೆ ಕುರಿತು ಜೂ.17ಕ್ಕೆ ವಿಶೇಷ ಸಭೆ]

bbmp
ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ವಿದ್ಯುತ್ ಕೈಕೊಡಬಾರದು ಎಂಬ ಉದ್ದೇಶದಿಂದ ಅಂದಾಜು 1.50 ಕೋಟಿ ವೆಚ್ಚದಲ್ಲಿ ಜನರೇಟರ್ ಹಾಗೂ ಯುಪಿಎಸ್ ಅಳವಡಿಸಲಾಗುತ್ತಿದೆ ಎಂದರು.

ಹೆರಿಗೆ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗೂ ಹಸುಗೂಸುಗಳಿಗೆ ತಣ್ಣೀರು ಬಳಸುತ್ತಿರುವುದನ್ನು ಗಮನಿಸಿ 30 ಲಕ್ಷ ವೆಚ್ಚದಲ್ಲಿ ಸೌರಶಕ್ತಿಯಿಂದ ಬಿಸಿನೀರು ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುವುದು. ಜನರೇಟರ್ ಹಾಗೂ ಯುಪಿಎಸ್ ಅಳವಡಿಕೆಗೆ ಟೆಂಡರ್ ಕರೆಯಲಾಗಿದ್ದು, ಈ ಕೆಲಸ ಎರಡು ತಿಂಗಳಲ್ಲಿ ಮುಗಿಯಲಿದೆ ಎಂದು ಅವರು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+