ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಕಾಕ್ ಟೌನ್ ನಲ್ಲಿ ಕಟ್ಟಡದ ನೆಲಮಾಳಿಗೆ ಕುಸಿದು ಕಾರ್ಮಿಕ ಸಾವು

|
Google Oneindia Kannada News

ಬೆಂಗಳೂರು, ಜುಲೈ 10: ನಿರ್ಮಾಣ ಹಂತದ ಎರಡು ಕಟ್ಟಡ ಕುಸಿದು, ಒಬ್ಬ ಕಾರ್ಮಿಕ ಮೃತಪಟ್ಟ ಘಟನೆ ಬೆಂಗಳೂರಿನ ಪುಲಕೇಶಿ ನಗರಕ್ಕೆ ಸಮೀಪದ ಕಾಕ್ ಟೌನ್ ನಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದೆ. ಎರಡು ಕಟ್ಟಡಗಳ ನೆಲಮಾಳಿಗೆ ಕುಸಿದು ಈ ಘಟನೆ ಸಂಭವಿಸಿದ್ದು, ಒಟ್ಟು ನಾಲ್ಕು ಅಂತಸ್ತಿನ ಕಟ್ಟಡ ಆಗಿರುವ ಇದರ ನೆಲಮಾಳಿಗೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಏಳು ಮಂದಿ ಕಾರ್ಮಿಕರ ರಕ್ಷಣೆ ಮಾಡಲಾಗಿದೆ.

ಮತ್ತೆ 'ಮಹಾ' ಕುಸಿತ, 18 ಮಂದಿ ಸಾವು,13 ಮಂದಿಗೆ ಗಂಭೀರ ಗಾಯಮತ್ತೆ 'ಮಹಾ' ಕುಸಿತ, 18 ಮಂದಿ ಸಾವು,13 ಮಂದಿಗೆ ಗಂಭೀರ ಗಾಯ

ಇನ್ನು ಗಾಯಗೊಂಡವರನ್ನು ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಗಾಯಗೊಂಡವರ ಪೈಕಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಅಂದಹಾಗೆ ಮೂರು ಅಂತಸ್ತಿನ ಕಟ್ಟಡದ ನೆಲ ಮಾಳಿಗೆಯಲ್ಲಿ ಏಳು ಮಂದಿ ಕಾರ್ಮಿಕರಿದ್ದ ಕುಟುಂಬ ವಾಸವಿತ್ತು. ಅವರು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ.

ಮೂರು ಹಾಗೂ ನಾಲ್ಕು ಅಂತಸ್ತಿನ ಎರಡು ಕಟ್ಟಡದಲ್ಲಿ ಪೀಠೋಪಕರಣ ತಯಾರಿ ಕೆಲಸ ನಡೆಯುತ್ತಿತ್ತು. ಮತ್ತು ಈ ಎರಡೂ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಉತ್ತರ ಭಾರತದವರು. ಕಟ್ಟಡ ನಿರ್ಮಾಣಕ್ಕೆ ಬಳಸಿದ ಮರಳು ಗುಣಮಟ್ಟ ಸರಿಯಿಲ್ಲದೆ ಹೀಗಾಗಿದೆ ಎಂದು ದೂರಲಾಗಿದೆ. ನೆಲ ಮಾಳಿಗೆಯೇ ಕುಸಿದಿರುವುದರಿಂದ ಇಡೀ ಕಟ್ಟಡ ಯಾವುದೇ ಕ್ಷಣದಲ್ಲಿ ನೆಲ ಕಚ್ಚಬಹುದು.

Under construction building collapsed in Bengaluru Pulikeshi nagar, worker dead

ಸ್ಥಳದಲ್ಲಿ ಎನ್ ಡಿಆರ್ ಎಫ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

English summary
Under construction building collapsed in Bengaluru Pulikeshi nagar, worker dead on Wednesday mid night. Seven workers trapped under debris. Rescue operation underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X