ಬೆಂಗಳೂರಿಗೆ ಕಾಲಿಟ್ಟ UAE ಹೆಸರಾಂತ ಕಂಪನಿ: ನಮ್ಮ ಮೆಟ್ರೋ, ಸಾರಿಗೆ ಯೋಜನೆಗಳಲ್ಲಿ ಪಾಲುದಾರಿಕೆ- ಇದರಿಂದ ಏನೆಲ್ಲಾ ಲಾಭ? ಅಂಕಿಅಂಶ
UAE ಮೂಲದ ಉತ್ಪಾದನಾ ಸಂಸ್ಥೆಯಾದ ಡುಕಾಬ್ ತನ್ನ ಮೊದಲ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದೆ. ಇದು ನಮ್ಮ ಮೆಟ್ರೋ ಸೇರಿದಂತೆ ಹಲವು ಯೋಜನೆಗಳಲ್ಲಿ ಪಾಲುದಾರಿಕೆ ಹೊಂದಿದೆ. ಇದರಿಂದ ಬೆಂಗಳೂರಿಗೆ ಏನು ಲಾಭ? ತಿಳಿಯಿರಿ
ಬೆಂಗಳೂರು, ಫೆಬ್ರವರಿ 9: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮೂಲದ ಉತ್ಪಾದನಾ ಸಂಸ್ಥೆಯಾದ ಡುಕಾಬ್ ತನ್ನ ಮೊದಲ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದೆ. ಭಾರತ ಮತ್ತು ಅರಬ್ ರಾಷ್ಟ್ರಗಳ ನಡುವೆ 2022 ರಲ್ಲಿ ಸಹಿ ಮಾಡಿದ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ಭಾಗವಾಗಿ ಬೆಂಗಳೂರು ಸೇರಿದಂತೆ ಹಲವಾರು ಸಾರಿಗೆ ಸಂಬಂಧಿತ ಯೋಜನೆಗಳಲ್ಲಿ ಕೆಲಸ ಮಾಡುವ ಬಗ್ಗೆ ಸಂಸ್ಥೆಯು ಗುರುವಾರ ತಿಳಿಸಿದೆ.
ಒಪ್ಪಂದದ ಭಾಗವಾಗಿ, ಕಂಪನಿಯು ಸಿಇಪಿಎ ಅಡಿಯಲ್ಲಿ ಕಡಿಮೆ ತೆರಿಗೆಗಳ ಅವಕಾಶವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಸುಂಕಗಳು ಐದು ವರ್ಷಗಳಲ್ಲಿ ಶೂನ್ಯಕ್ಕೆ ಬರುತ್ತವೆ. ಪ್ರತಿ ವರ್ಷ 20 ಪ್ರತಿಶತವನ್ನು ಕಡಿಮೆ ಮಾಡುತ್ತವೆ. 'ಒಪ್ಪಂದವು ಎರಡು ದೇಶಗಳ ನಡುವಿನ ತೈಲೇತರ ವ್ಯಾಪಾರವನ್ನು ಐದು ವರ್ಷಗಳಲ್ಲಿ $ 60 ಬಿಲಿಯನ್‌ನಿಂದ $ 100 ಬಿಲಿಯನ್‌ಗೆ ಹೆಚ್ಚಿಸುವ ನಿರೀಕ್ಷೆಯಿದೆ. ಇದು ಹೂಡಿಕೆಯ ಹೆಚ್ಚುವರಿ ಮಾರ್ಗಗಳನ್ನು ತೆರೆಯುತ್ತದೆ' ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡ್ಯುಕ್ಯಾಬ್ ಗ್ರೂಪ್ ಸಿಇಒ ಮೊಹಮ್ಮದ್ ಅಲ್ಮುತಾವಾ, 'ಸಂಸ್ಥೆಯು ಬಿಎಂಆರ್‌ಸಿಎಲ್ (ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್) ಮತ್ತು ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದೆ. ಇದರಲ್ಲಿ ನಾವು ವಿದ್ಯುತ್ ಬಳಸುವಿಕೆ, ವಿದ್ಯುತ್‌ನ ಕಾರ್ಯಕ್ಷಮತೆ ಮತ್ತು ಹೆಚ್ಚುವರಿ ಹೈ ವೋಲ್ಟೇಜ್ ಕೇಬಲ್‌ಗಳನ್ನು ತರಲು ಬಯಸುತ್ತೇವೆ. ಸುಸ್ಥಿರ ಇಂಧನ ಪರಿಹಾರಗಳನ್ನು ಒದಗಿಸಲು ಕಾರ್ಯಗತರಾಗುತ್ತೇವೆ. ಭಾರತೀಯ ಮಾರುಕಟ್ಟೆಯೊಂದಿಗೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಭಾರತದಲ್ಲಿ ಚಲನಶೀಲತೆ ಮತ್ತು ಸಾರಿಗೆ ಜಾಗದಲ್ಲಿ ವಿವಿಧ ಡೆವಲಪರ್‌ಗಳು ಮತ್ತು ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ' ಎಂದು ಹೇಳಿದೆ.

ಭಾರತ ಕಾರ್ಯಾಚರಣೆಯ ಮುಖ್ಯಸ್ಥರಾಗಿರುವ ಡುಕಾಬ್ ವಕ್ತಾರರು, 'ತಡೆರಹಿತ ವಿದ್ಯುತ್ ಪೂರೈಕೆಗಾಗಿ ನಮ್ಮ ಮೆಟ್ರೋಗೆ ಸಬ್‌ಸ್ಟೇಷನ್‌ಗಳನ್ನು ಒದಗಿಸಲು ಸಂಸ್ಥೆಯು ನೋಡುತ್ತಿದೆ' ಎಂದು ಹೇಳಿದರು. ಪ್ರಸ್ತುತ ಬೆಂಗಳೂರು ಮೆಟ್ರೋಗೆ ಸಬ್‌ಸ್ಟೇಷನ್‌ನಿಂದ 132KV-33KV ವಿದ್ಯುತ್ ಪೂರೈಕೆಯ ಅಗತ್ಯವಿದೆ ಮತ್ತು ಅದನ್ನು ನಿರ್ಮಿಸಲು ನಾವು ಗುತ್ತಿಗೆದಾರರಿಗೆ ಪ್ರಸ್ತಾಪಿಸಿದ್ದೇವೆ. ಹೆಚ್ಚುವರಿಯಾಗಿ, ನಾವು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪನಗರ ರೈಲ್ವೆ ಯೋಜನೆಗಳು ಮತ್ತು ಟರ್ಮಿನಲ್ 2 ಕಾರ್ಯಾಚರಣೆಗಳಿಗೆ ಸುಸ್ಥಿರ ಇಂಧನ ಪರಿಹಾರಗಳನ್ನು ನೀಡಲು ಬಯಸುತ್ತೇವೆ ಎಂದು ಅಧಿಕಾರಿ ಹೇಳಿದರು.

ಇದಲ್ಲದೆ, ಸಂಸ್ಥೆಯು ಬೆಂಗಳೂರಿನ ಟ್ಯಾಲೆಂಟ್ ಪೂಲ್ ಅನ್ನು ಬಳಸಿಕೊಳ್ಳಿತ್ತದೆ. ಮತ್ತು ಅದರ ಸಾಗರೋತ್ತರ ಯೋಜನೆಗಳಿಗೆ ನಗರದಿಂದ ಟೆಕ್ಕಿಗಳನ್ನು ನೇಮಿಸಿಕೊಳ್ಳುತ್ತದೆ. ದೇಶದಲ್ಲಿ ಸಂಸ್ಥೆಯ ಇತರ ಚಲನಶೀಲತೆ ಮತ್ತು ಸಾರಿಗೆ ಯೋಜನೆಗಳು ದೆಹಲಿ, ಮುಂಬೈ, ಕಾನ್ಪುರ, ಲಕ್ನೋ ಮತ್ತು ಆಗ್ರಾ ಇತರ ಸ್ಥಳಗಳಲ್ಲಿವೆ. ಸಂಸ್ಥೆಯು ಇದುವರೆಗೆ ಭಾರತದಲ್ಲಿ 2,000 ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ವಹಿವಾಟು ನಡೆಸಿದೆ.
-
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications