ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿ ಬಳಿಯೇ ತಲ್ವಾರ್ ಹಿಡಿದು ಪುಂಡರ ಅಟ್ಟಹಾಸ
ರಾಜ್ಯ ರಾಜಧಾನಿಯಲ್ಲಿ ಕಳೆದ ರಾತ್ರಿ ಪುಂಡರ ಅಟ್ಟಹಾಸ ಮೆರೆದಿರುವ ವಿಡಿಯೋ ವೈರಲ್ ಆಗಿದೆ. ನಡುರಸ್ತೆಯಲ್ಲಿ ಯುವಕರ ಗುಂಪೊಂದು ತಲ್ವಾರ್ ಹಿಡಿದು ಪುಂಡಾಟ ತೋರಿದ್ದಾರೆ. ಮಾತ್ರವಲ್ಲದೆ ಬೈಕ್ ಸವಾರನನ್ನು ಹಿಡಿದು ಥಳಿಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಾಳೇಕುಂದ್ರಿ ಸರ್ಕಲ್ ನ ಕ್ವೀನ್ಸ್ ರಸ್ತೆಯಲ್ಲಿ ರಾತ್ರಿ ಈ ಘಟನೆ ನಡೆದಿದೆ.
ಸೆ.19 ರಂದು ರಾತ್ರಿ 10 ಗಂಟೆಗೆ ಪೊಲೀಸ್ ಕಮಿಷನರ್ ಕಚೇರಿ ಬಳಿ ಯುವತಿಯೊಬ್ಬಳ ವಿಚಾರವಾಗಿ ಎರಡು ಯುವಕರ ಗುಂಪುಗಳು ಹೊಡೆದಾಡಿಕೊಂಡಿವೆ. ಹುಡುಗಿ ಮತ್ತು ಹುಡುಗನನ್ನು ಗುರುತಿಸಲಾಗಿದೆ ಎಂದು ಪೊಲೀಸರು ಹೇಳುತ್ತಾರೆ. ಪ್ರಕರಣವನ್ನು ಕೈಗೆತ್ತಿಕೊಂಡು ನಿಜವಾದ ಕಾರಣವನ್ನು ಪತ್ತೆ ಮಾಡಲಾಗುವುದು ಎಂದಿದ್ದಾರೆ.

ಮೂರು ಜನ ಪುಂಡರು ಬೈಕ್ ಸವಾರನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಹಲ್ಲೆ ನಡೆಸಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಯುವಕರ ಹುಚ್ಚಾಟಕ್ಕೆ ವಾಹನ ಸವಾರರು ಗಾಬರಿಗೊಂಡಿದ್ದಾರೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪರಾರಿಯಾದ ಯುವಕರಿಗಾಗಿ ವಿಧಾನಸೌಧ ಪೊಲೀಸರಿಂದ ಹುಡುಕಾಟ ನಡೆಸಿದ್ದಾರೆ. ಸದ್ಯ ಭಯಾನಕ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇದನ್ನು ಆಧರಿಸಿ ಪೊಲೀಸರು ದಾಳಿಕೋರರ ಪತ್ತೆ ಕಾರ್ಯ ಆರಂಭಿಸಿದ್ದಾರೆ.

ಸವಾರನ ಮೇಲೆ ದಾಳಿ ಮಾಡುವಾಗ ಆತನೊಂದಿಗೆ ಯುವತಿಯೋರ್ವಳು ಇರುವುದು ಕಂಡು ಬಂದಿದೆ. ಆ ಯುವತಿ ಜಗಳ ತಡೆಯಲು ಎಷ್ಟೇ ಪ್ರಯತ್ನಿಸಿದರೂ ಯುವಕರು ಗುಂಪು ಬೈಕ್ ಸವಾರನ ಮೇಲೆ ದಾಳಿ ಮಾಡಿದೆ. ಘಟನೆಯ ವಿಡಿಯೋ ಗಮನಿಸಿದರೆ ವೈಯಕ್ತಿಕ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬೈಕ್ ಸವಾರನಿಗೆ ದಾಳಿಕೋರರು ಪರಿಚಯಸ್ಥರು ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಆದರೂ ಈ ಬಗ್ಗೆ ಖಚಿತತೆ ಇಲ್ಲ. ಹೀಗಾಗಿ ಘಟನೆಯ ಬಗ್ಗೆ ಪೊಲೀಸರು ಸಮಗ್ರ ತನಿಖೆ ಪ್ರಾರಂಭಿಸಿದ್ದಾರೆ.












Click it and Unblock the Notifications