ಟೆಂಡರ್‌ ಶ್ಯೂರ್‌ ರಸ್ತೆಯ ವಿಶೇಷತೆಗಳೇನು?

ಬೆಂಗಳೂರು, ಜೂ. 20 : ಮತ್ತೆ-ಮತ್ತೆ ಅಗೆಯಲು ಅವಕಾಶ ಇಲ್ಲದಂತೆ ಟೆಂಡರ್‌ ಶ್ಯೂರ್‌ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ಎರಡು ರಸ್ತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಸೇಂಟ್‌ ಮಾರ್ಕ್ಸ್‌ ಮತ್ತು ವಿಠಲ ಮಲ್ಯ ರಸ್ತೆಗಳನ್ನು ಈ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ.

ಶನಿವಾರ ಮಧ್ಯಾಹ್ನ 4 ಗಂಟೆಗೆ ಸೇಂಟ್‌ ಮಾರ್ಕ್ಸ್‌ ಮತ್ತು ವಿಠಲ ಮಲ್ಯ ರಸ್ತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಮೊದಲ ಹಂತದಲ್ಲಿ ನಗರದ ಏಳು ರಸ್ತೆಗಳನ್ನು ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತದೆ. ಇವುಗಳಲ್ಲಿ ಎರಡು ರಸ್ತೆ ಇಂದು ಉದ್ಘಾಟನೆಯಾಗುತ್ತಿದೆ. [ನಿಮ್ಮ ಏರಿಯಾದಲ್ಲೂ ರಸ್ತೆ ಗುಂಡಿ ಇದ್ದರೆ ಚಿತ್ರ ತೆಗೆದು ಕಳಿಸಿ]

ಪಾದಚಾರಿಗಳಿಗೆ ಸಮರ್ಪಕವಾದ ಫುಟ್‌ಪಾತ್‌ ಸೌಲಭ್ಯ, ಸೈಕಲ್‌ಗೆ ಪ್ರತ್ಯೇಕ ಟ್ರಾಕ್, ದೊಡ್ಡ ವಾಹನ, ಮಧ್ಯಮ ಗಾತ್ರದ ವಾಹನ ಮತ್ತು ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಲೇನ್‌ಗಳು, ಮಾರ್ಗ ಮಧ್ಯದಲ್ಲಿ ವಾಹನಗಳು ರಸ್ತೆಗೆ ನುಗ್ಗದಂತೆ ತಡೆಗೋಡೆ ಇವು ಟೆಂಡರ್ ಶ್ಯೂರ್ ರಸ್ತೆಗಳ ವಿಶೇಷತೆಗಳು. [ಸುಲ್ತಾನ್ ಪಾಳ್ಯ ರಸ್ತೆಯಲ್ಲಿ ಈಜಾಡಿದ ಮೊಸಳೆ!]

ಬಿಬಿಎಂಪಿ, ಬಿಎಂಟಿಸಿ, ಬೆಸ್ಕಾಂ, ಜಲಮಂಡಳಿ ಮತ್ತು ಪೊಲೀಸ್‌ ಇಲಾಖೆ ಸೇರಿದಂತೆ ಎಲ್ಲ ಸೇವಾ ಸಂಸ್ಥೆಗಳನ್ನು ಒಳಗೊಂಡ ಏಕಗವಾಕ್ಷಿ ವ್ಯವಸ್ಥೆ ಇದಾಗಿದ್ದು, ಮತ್ತೊಮ್ಮೆ ಈ ರಸ್ತೆಯನ್ನು ಅಗೆಯಲು ಅವಕಾಶವಿಲ್ಲದಂತೆ ಅಭಿವೃದ್ಧಿಪಡಿಸಲಾಗಿದೆ. ಚಿತ್ರಗಳಲ್ಲಿ ನೋಡಿ ಟೆಂಡರ್‌ ಶ್ಯೂರ್‌ ರಸ್ತೆ

ಎರಡು ರಸ್ತೆಗಳ ಲೋಕಾರ್ಪಣೆ ಇಂದು

ಎರಡು ರಸ್ತೆಗಳ ಲೋಕಾರ್ಪಣೆ ಇಂದು

ಟೆಂಡರ್‌ ಶ್ಯೂರ್‌ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ಎರಡು ರಸ್ತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉದ್ಘಾಟಿಸಲಿದ್ದಾರೆ. ಸೇಂಟ್‌ ಮಾರ್ಕ್ಸ್‌ ಮತ್ತು ವಿಠಲ ಮಲ್ಯ ರಸ್ತೆಗಳನ್ನು ಈ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ.

ಮತ್ತೆ ಅಗೆಯುವ ಪ್ರಶ್ನೆಯೇ ಇಲ್ಲ

ಮತ್ತೆ ಅಗೆಯುವ ಪ್ರಶ್ನೆಯೇ ಇಲ್ಲ

ಜಲಮಂಡಳಿ, ಬೆಸ್ಕಾಂ ಸೇರಿದಂತೆ ಯಾವುದೇ ದುರಸ್ತಿಗೂ ರಸ್ತೆ ಅಗೆಯಬೇಕಾಗಿಲ್ಲ. ಸಮಸ್ಯೆ ಉಂಟಾದಲ್ಲಿ ಡಕ್ಟ್‌ಗಳನ್ನು ತೆರೆದು ದುರಸ್ತಿ ಕಾರ್ಯ ಕೈಗೊಳ್ಳುವ ವ್ಯವಸ್ಥೆ ಈ ರಸ್ತೆಯಲ್ಲಿದೆ. ಈ ಸಂಪರ್ಕ ಜಾಲಗಳಿಂದ ಒಂದರಿಂದ ಮತ್ತೊಂದಕ್ಕೆ ತೊಂದರೆ ಆಗದಂತೆ ವ್ಯವಸ್ಥೆ ರೂಪಿಸಲಾಗಿದೆ.

ಏನಿದು ಟೆಂಡರ್ ಶ್ಯೂರ್

ಏನಿದು ಟೆಂಡರ್ ಶ್ಯೂರ್

ಬೆಂಗಳೂರಿನ ಏಳು ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಯೋಜನೆ ಅನ್ವಯ ಅಭಿವೃದ್ಧಿಪಡಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಮತ್ತೆ ಮತ್ತೆ ಅಗೆಯಲು ಅವಕಾಶ ಇಲ್ಲದಂತೆ ರಸ್ತೆಗಳನ್ನು ವಿನ್ಯಾಸಗೊಳಿಸುವುದೇ ಈ ವ್ಯವಸ್ಥೆ. ಈ ರಸ್ತೆಗಳು ಅಂತರರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುತ್ತವೆ.

ಏಕಗವಾಕ್ಷಿ ವ್ಯವಸ್ಥೆ

ಏಕಗವಾಕ್ಷಿ ವ್ಯವಸ್ಥೆ

ಬಿಬಿಎಂಪಿ, ಬಿಎಂಟಿಸಿ, ಬೆಸ್ಕಾಂ, ಜಲಮಂಡಳಿ ಮತ್ತು ಪೊಲೀಸ್‌ ಇಲಾಖೆ ಸೇರಿದಂತೆ ಎಲ್ಲ ಸೇವಾ ಸಂಸ್ಥೆಗಳನ್ನು ಒಳಗೊಂಡ ಏಕಗವಾಕ್ಷಿ ವ್ಯವಸ್ಥೆ ಈ ರಸ್ತೆಗಳಲ್ಲಿದೆ. ನೀರು, ಒಳಚರಂಡಿ, ಬೆಸ್ಕಾಂ ಸಂಪರ್ಕ ಜಾಲ, ಒಎಫ್‌ಸಿ, ಬೀದಿದೀಪ, ಸಿಗ್ನಲ್‌ ದೀಪ, ಸಿಸಿಟಿವಿ ಕೇಬಲ್‌, ಗ್ಯಾಸ್‌ ಸಂಪರ್ಕ ಜಾಲ ಎಲ್ಲದಕ್ಕೂ ರಸ್ತೆ ಬದಿಯಲ್ಲಿ ಯುಟಿಲಿಟಿ ಡಕ್ಟ್‌ ವ್ಯವಸ್ಥೆ ರೂಪಿಸಲಾಗಿದೆ.

ಎರಡೂ ರಸ್ತೆಗಳ ವೆಚ್ಚವೆಷ್ಟು?

ಎರಡೂ ರಸ್ತೆಗಳ ವೆಚ್ಚವೆಷ್ಟು?

ಪಾದಚಾರಿಗಳಿಗೆ ಸಮರ್ಪಕವಾದ ಫುಟ್‌ಪಾತ್‌ ಸೌಲಭ್ಯ, ಸೈಕಲ್‌ಗಳಿಗೆ ಪ್ರತ್ಯೇಕ ಮಾರ್ಗ, ಎಲ್ಲಾ ವಾಹನಗಳಿಗೆ ಪ್ರತ್ಯೇಕ ಟ್ರಾಕ್, ಮಳೆ ನೀರು ಹರಿದು ಹೋಗ ಸರಿಯಾದ ವ್ಯವಸ್ಥೆಯನ್ನು ಈ ರಸ್ತೆಗಳು ಹೊಂದಿವೆ. ಸೇಂಟ್ ಮಾರ್ಕ್ಸ್ ರಸ್ತೆಯ ಅಭಿವೃದ್ಧಿಗೆ 7.48 ಕೋಟಿ, ವಿಠಲ ಮಲ್ಯ ರಸ್ತೆಯ ಅಭಿವೃದ್ಧಿಗೆ 4.61 ಕೋಟಿ ರೂ.ವೆಚ್ಚ ಮಾಡಲಾಗಿದೆ.

ಮುಂದೆ ಅಭಿವೃದ್ಧಿಯಾಗಲಿರುವ ರಸ್ತೆಗಳು

ಮುಂದೆ ಅಭಿವೃದ್ಧಿಯಾಗಲಿರುವ ರಸ್ತೆಗಳು

ಟೆಂಟರ್ ಶ್ಯೂರ್ ಯೋಜನೆಯಡಿ ಮುಂದೆ ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಮ್ಯೂಸಿಯಂ ರಸ್ತೆ, ಕಮಿಸಾರಿಯೇಟ್ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ ಪ್ಯಾಕೇಜ್-2, ಕೆ.ಜಿ.ರಸ್ತೆ, ಜಯನಗರ 11ನೇ ಮುಖ್ಯರಸ್ತೆ, ಮೋದಿ ಆಸ್ಪತ್ರೆ ರಸ್ತೆ, ಸಿದ್ದಯ್ಯ ಪುರಾಣಿಕ್ ರಸ್ತೆ, ನೃಪತುಂಗ ರಸ್ತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+