ಬೆಂಗಳೂರಲ್ಲಿ ಅಪಘಾತ: ಕಸದ ಲಾರಿ ಡಿಕ್ಕಿ, ಇಬ್ಬರು ಟೆಕ್ಕಿಗಳು ಸಾವು

ಬೆಂಗಳೂರು, ಜುಲೈ 29: ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದಾರೆ. ಪ್ರಶಾಂತ್ ಎನ್ನುವ ಬೆಂಗಳೂರು ಮೂಲದ ಟೆಕ್ಕಿ, ತಾನು ಹುಟ್ಟಿದ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಭಾನುವಾರ ರಾತ್ರಿ 8.48ರ ಸುಮಾರಿಗೆ ನಗರದ ಕೆ. ಆರ್. ಸರ್ಕಲ್ ಸಮೀಪ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಸದ ಲಾರಿ ಬೈಕ್‌ಗೆ ಗುದ್ದಿದೆ. ಈ ಅಪಘಾತದಲ್ಲಿ ಗಾಯಗೊಂಡಿದ್ದ ಟೆಕ್ಕಿಗಳಾದ ಪ್ರಶಾಂತ್, ಬಯನ್ನ ಗಾರಿ ಶಿಲ್ಪಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Two Techies Killed After BBMP Garbage Truck Hit Bike Bengaluru

ಬೈಕ್‌ಗೆ ಲಾರಿ ಗುದ್ದಿದ ಬಳಿಕ ಪ್ರಶಾಂತ್, ಶಿಲ್ಪಾ ರಸ್ತೆ ಮೇಲೆ ಬಿದ್ದರು. ಅವರ ಮೇಲೆ ಕಸದ ಲಾರಿ ಹರಿದು ಗಂಭೀರವಾಗಿ ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಗರದ ಬಾಣಸವಾಡಿ ಮೂಲದ ಪ್ರಶಾಂತ್ ಇದೇ ಆಸ್ಪತ್ರೆಯಲ್ಲಿ ಜನಿಸಿದ್ದರು.

ಬೆಂಗಳೂರು ಮೂಲದ ಪ್ರಶಾಂತ್, ಆಂಧ್ರ ಪ್ರದೇಶ ಮೂಲದ ಬಯನ್ನ ಗಾರಿ ಶಿಲ್ಪಾ ಟಿಸಿಎಸ್ ಕಂಪನಿ ಉದ್ಯೋಗಿಗಳಾಗಿದ್ದರು. ಭಾನುವಾರ ಊಟಕ್ಕಾಗಿ ಹೊರಗೆ ಬಂದಿದ್ದರು. ಈ ವೇಳೆ ಕೆ. ಆರ್. ಸರ್ಕಲ್ ಬಳಿ ತೆರಳುವಾಗ ಅಪಘಾತ ಸಂಭವಿಸಿದೆ.

ಬಯನ್ನ ಗಾರಿ ಶಿಲ್ಪಾ ಪಿಜಿಯೊಂದರಲ್ಲಿ ವಾಸವಾಗಿದ್ದರು. ಅಪಘಾತದ ಬಳಿಕ ವಿವರಗಳನ್ನು ಕಲೆ ಹಾಕಿ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಶವಗಳ ಮರಣೋತ್ತರ ಪರೀಕ್ಷೆ ಇನ್ನೂ ಬಾಕಿ ಇದೆ, ಇಂದು ಮಧ್ಯಾಹ್ನದ ವೇಳೆಗೆ ಶವಗಳನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ.

ಅಪಘಾತದ ಬಳಿಕ ಬಿಬಿಎಂಪಿ ಕಸದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಲಾರಿ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮೃತಪಟ್ಟ ಟೆಕ್ಕಿ ಪ್ರಶಾಂತ್ ತಂದೆ ಲೋಕೇಶ್ ಆಸ್ಪತ್ರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು, "ನನ್ನ ಮಗ ಇದೇ ಸೆಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಜನಿಸಿದ್ದ. ಕಸದ ಲಾರಿ ಡಿಕ್ಕಿ ಹೊಡೆದು ನನ್ನ ಮಗ, ಯುವತಿ ಮೃತಪಟ್ಟಿದ್ದಾರೆ. ಈ ಅಪಘಾತ ಮಾಡಿದ ಲಾರಿ ಚಾಲಕನನ್ನು ಕೂಡಲೇ ಬಂಧಿಸಬೇಕು. ನಮಗೆ ನ್ಯಾಯ ಒದಗಿಸಬೇಕು" ಎಂದು ಕಣ್ಣೀರು ಹಾಕಿದರು.

ಪ್ರಶಾಂತ್ ಸಾವಿನ ಸುದ್ದಿ ಕೇಳಿ ಅವರ ಅಜ್ಜಿ ಸಹ ಅಸ್ವಸ್ಥಗೊಂಡಿದ್ದಾರೆ. ಲಾರಿ ಚಾಲಕನನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಿ ಎಂದು ಪ್ರಶಾಂತ್ ಕುಟುಂಬದವರು ಪೊಲೀಸರನ್ನು ಆಗ್ರಹಿಸಿದ್ದಾರೆ. ಪ್ರಶಾಂತ್ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಅಪಘಾತದ ಬಗ್ಗೆ ಉಪ್ಪಾರಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಸದ ಲಾರಿ ಚಕ್ರಕ್ಕೆ ಸಿಲುಕಿದ ಟೆಕ್ಕಿಗಳನ್ನು ಲಾರಿ ಸುಮಾರು 10 ಮೀಟರ್ ತನಕ ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬಿಬಿಎಂಪಿ ಕಸದ ಲಾರಿ ಸಿಐಡಿ ಕಛೇರಿ ಕಡೆಯಿಂದ ಕೆ. ಆರ್. ಸರ್ಕಲ್‌ ಕಡೆ ಬರುತ್ತಿತ್ತು. ಮೆಜೆಸ್ಟಿಕ್ ಕಡೆಯಿಂದ ಮೃತ ಪ್ರಶಾಂತ್, ಶಿಲ್ಪಾ ಬೈಕ್‌ನಲ್ಲಿ ಆಗಮಿಸುತ್ತಿದ್ದರು. ಲಾರಿ ಚಾಲಕನಿಗಾಗಿ ಹುಡುಕಾಟ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+